ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲ್ಕೇರಿ: ಲೋಕಾಯುಕ್ತ ಅಧಿಕಾರಿ ಭೇಟಿ: ಸರ್ವೆ ಆರಂಭ

Last Updated 20 ಜನವರಿ 2011, 9:10 IST
ಅಕ್ಷರ ಗಾತ್ರ

ಬೆಳ್ತಂಗಡಿ: ಕರ್ನಾಟಕ ಲೋಕಾಯುಕ್ತ ಸೂಚನೆಯಂತೆ ತಾಲ್ಲೂಕಿನ ಸುಲ್ಕೇರಿ ಗ್ರಾಮದ ನಾಯ್ದಗುರಿಗೆ ಬುಧವಾರ ಮಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಆರು ಮಲೆಕುಡಿಯ ಕುಟುಂಬಗಳ ಜಾಗ ತೆರವು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಜಿಲ್ಲಾಧಿಕಾರಿಗಳು ಸಂತ್ರಸ್ತರಿಗೆ ನಾರಾವಿ ಬಳಿ ಕುತ್ಲೂರು ಗ್ರಾಮದಲ್ಲಿ ಮನೆ ನಿವೇಶನ ನೀಡಲು ಒಪ್ಪಿದ್ದು ತಕ್ಷಣ ತೆರವುಗೊಳಿಸುವುದು ಸೂಕ್ತ ಎಂದು ಅಧಿಕಾರಿಗಳು ಸಂತ್ರಸ್ತರಿಗೆ ಮನವರಿಕೆ ಮಾಡಿದರು. ಅಲ್ಲದೆ ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಕಟ್ಟುವುದು ಕಾನೂನುಬಾಹಿರವಾಗಿದೆ ಎಂದು ತಿಳುವಳಿಕೆ ನೀಡಲಾಯಿತು. ಆದರೆ, ಸಂತ್ರಸ್ತರು ತೆರವುಗೊಳಿಸಲು ನಿರಾಕರಿಸಿ ತಾವು ಇಲ್ಲೇ ಮನೆ ಕಟ್ಟವುದಾಗಿ ಪಟ್ಟು ಹಿಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿದುಬಂದಿದೆ.

ಹಿನ್ನೆಲೆ: ಇದೇ 13 ರಂದು ಕಂದಾಯ ಇಲಾಖೆಯ ಅಧಿಕಾರಿಗಳು ವೇಣೂರು ಪೊಲೀಸರ ಸಹಾಯದೊಂದಿಗೆ ಬಲತ್ಕಾರವಾಗಿ ಆರು ಮಲೆಕುಡಿಯ ಕುಟುಂಬಗಳ ಮನೆ ತರೆವುಗೊಳಿಸಿದ್ದರು. ಶ್ರೀಧರ ಮಲೆಕುಡಿಯ, ಲಕ್ಷ್ಮಣ, ರಾಮ, ಹೊನ್ನಮ್ಮ, ವಸಂತಿ, ಚಂದು ಮಲೆಕುಡಿಯ ಸಂತ್ರಸ್ತರಾಗಿದ್ದಾರೆ.  ಕಳೆದ ಡಿಸೆಂಬರ್ 10 ರಂದು ಅಕ್ರಮವಾಗಿ ಮನೆಕಟ್ಟಿರುವುದನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಎಂ.ಕೆ. ಪ್ರಮೀಳಾ ಆದೇಶ ನೀಡಿದ್ದರು.  ಬಳಿಕ ಚುನಾವಣಾ ನೀತಿ ಸಂಹಿತೆ ಜಾರಿಯಿಂದಾಗಿ ಕಾರ್ಯಾಚರಣೆಯಲ್ಲಿ ಕೊಂಚ ವಿಳಂಬವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಅಳದಂಗಡಿ ಗ್ರಾಮ ಪಂಚಾಯಿತಿ ವತಿಯಿಂದ ನಾಯ್ದಗುರಿಯಲ್ಲಿ ಸಂತ್ರಸ್ತರಿಗೆ ಮನೆ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ.

ಸರ್ವೆ ಕಾರ್ಯ ಪ್ರಾರಂಭ:  ಜಿಲ್ಲಾಧಿಕಾರಿಗಳ ಆದೇಶದಂತೆ ಬುಧವಾರ ಸರ್ವೆ ಕಾರ್ಯ ಆರಂಭಿಸಿದ್ದು. ಇನ್ನು ಹತ್ತು ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ನಾಯ್ದ ಗುರಿಯಲ್ಲಿ ಸರ್ವೆ ನಂಬರ್ 65-1 ಪಿ.ಯಲ್ಲಿ ಒಟ್ಟು 626.82 ಎಕೆರೆ ಸರ್ಕಾರಿ ಜಾಗವಿದ್ದು 8 ಮಂದಿಗೆ 14.80 ಎಕರೆ ಜಾಗ ಅಕ್ರಮ-ಸಕ್ರಮದಡಿ ಮಂಜೂರಾಗಿದೆ. ಪ್ರಸ್ತುತ 612.02 ಎಕರೆ ಸರ್ಕಾರಿ ಜಾಗವಿದೆ. ಉಜಿರೆ, ಬೆಳ್ತಂಗಡಿ, ನಾರಾವಿಯ ಕೆಲವು ಪ್ರತಿಷ್ಠಿತ ವ್ಯಕ್ತಿಗಳು ಸರ್ಕಾರಿ ಜಾಗ ಒತ್ತುವರಿ ಮಾಡಿ ರಬ್ಬರ್ ತೋಟ ಮಾಡಿದ್ದು ಸರ್ವೆ ಬಳಿಕ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ ಮನೆಕಟ್ಟಲು ಪ್ರಾರಂಭಿಸಿದ ಸಂತ್ರಸ್ತರು:  ಬುಧವಾರ ಹೊಸ ಶೀಟುಗಳು ಮತ್ತು ಇಟ್ಟಿಗೆಗಳನ್ನು ತಂದು ಸಂತ್ರಸ್ತರು ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.
ನಾವು ಬೇರೆ ಕಡೆ ಹೋಗುವುದಿಲ್ಲ. ಜಾಗ ತೆರವುಗೊಳಿಸಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸತ್ತರೂ ್ಳಲೆ ್ಲ ಬದುಕಿದರೂ ಇಲ್ಲೇ. ಎಂಬ ಮಾತನ್ನು ಪುನರುಚ್ಚಿಸಿದ್ದಾರೆ. ಕಾನೂನು ಪ್ರಕಾರವೇ ಪೂರ್ವ ಸೂಚನೆ ನೀಡಿ ಜಾಗ ತೆರವುಗೊಳಿಸಲಾಗಿದೆ ಎಂದು ಉಪ ತಹಸೀಲ್ದಾರ್ ಸೂರ್ಯ ತಿಳಿಸಿದ್ದಾರೆ.

ಲೋಕಾಯುಕ್ತ ವಿಭಾಗದ ಎಸ್.ಪಿ. ಜಗಮಯ್ಯ, ಇನ್‌ಸ್ಪೆಕ್ಟರ್‌ಗಳಾದ ಉದಯ ನಾಯಕ್, ದಿಲೀಪ್ ಕುಮಾರ್, ಲಕ್ಷ್ಮಿಕಾಂತ್ ಪರಿಶೀಲನೆ ನಡೆಸಿದ್ದು ಉಪತಹಸೀಲ್ದಾರ್ ಸೂರ್ಯ ಮತ್ತು ಕೊಕ್ರಾಡಿ ಗ್ರಾಮಕರಣಿಕ ಶಿವ ಕುಮಾರ್ ಮಾಹಿತಿ ನೀಡಿದರು.ವೇಣೂರು ಪೊಲೀಸ್ ಠಾಣೆಗೂ ಭೇಟಿ ನೀಡಿದ ಅಧಿಕಾರಿಗಳು ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT