ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಭೂಮಿ : ಒಡೆದು ಆಳುವ ಹುನ್ನಾರ

Last Updated 10 ಜೂನ್ 2011, 7:00 IST
ಅಕ್ಷರ ಗಾತ್ರ

ಮುಂಡರಗಿ: ರಾಜ್ಯ ಸರಕಾರ ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ ಸಹಾಯ ಧನ ನೀಡುವುದರ ಮೂಲಕ ರೈತರ ಹಾದಿ ತಪ್ಪಿಸುತ್ತಿದ್ದು ರಾಜ್ಯದ ರೈತರನ್ನು ಒಡೆದು ಆಳುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಸ್ಥಳೀಯ ಕನ್ನಡ ಜನಾಭಿವೃದ್ಧಿ ವೇದಿಕೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಇತ್ತೀಚೆಗೆ ತಹಸೀಲದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅನಾವೃಷ್ಟಿ, ಅತಿವೃಷ್ಟಿ, ಬೆಳೆಹಾನಿ, ಪ್ರಕೃತಿ ವಿಕೋಪ ಮೊದಲಾದವುಗಳ ಪ್ರಭಾವದಿಂದ ರೈತರು ಈಗಾಗಲೇ ಕೃಷಿ ಚಟುವಟಿಕೆಗಳಿಂದ ವಿಮುಖರಾಗು ತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ ಸಹಾಯ ಧನ ನೀಡುವ ಮೂಲಕ ರಾಜ್ಯ ಸರ್ಕಾರ ರೈತರನ್ನು ಕೃಷಿಯಿಂದ ಸಂಪೂರ್ಣ ವಿಮುಖ ಗೊಳಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರಕಾರವು ಜಾರಿಗೆ ತಂದಿರುವ ಈ ಸುವರ್ಣ ಭೂಮಿ ಯೋಜನೆಯಿಂದ ರಾಜ್ಯದ ರೈತರು ಉದ್ದಾರವಾಗುವು ದಿಲ್ಲ. ರೈತರಿಗೆ ಅಲ್ಪ ಸ್ವಲ್ಪ ಸಹಾಯ ಧನ ನೀಡುವ ಬದಲಾಗಿ ರೈತರು ಬೆಳೆಯುವ ಬೆಳೆಗೆ ಸರ್ಕಾರ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರೈತರಿಗೆ ಸಕಾಲಕ್ಕೆ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಹಾಗೂ ನಿಯಮಿತವಾಗಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗೆ ಶೇ.75ರಷ್ಟು ಸಹಾಯ ಧನ ನೀಡ ಬೇಕು. ಸರಕಾರದ ಆದೇಶ ವಿದ್ದರೂ ಟ್ರಾಕ್ಟರ್ ಖರೀದಿ ಮಾಡಿದ ರೈತರಿಗೆ ಈವರೆಗೂ ಸಹಾಯಧನ ನೀಡಿಲ್ಲ. ತಕ್ಷಣ ಅವರಿಗೆ ಸಹಾಯ ಧನ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೈಗಾರಿಕೆಗಾಗಿ ಜಿಲ್ಲೆಯ ಸುಮಾರು 6000 ಎಕರೆ ಫಲವತ್ತಾದ ಕೃಷಿ ಭೂಮಿಯ ಭೂ ಸ್ವಾಧೀನ ಕ್ರಿಯೆಯನ್ನು ತಕ್ಷಣ ಕೈಬಿಡಬೇಕು. ಬಲವಂತದಿಂದ ರೈತರ  ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ನಂತರ ಪ್ರತಿಭಟನಾಕಾರರ ಬಳಿಗೆ ಆಗಮಿಸಿದ ತಹಸೀಲದಾರ ರಮೇಶ ಕೋನರಡ್ಡಿ ಪ್ರತಿಭಟನಾಕಾರರ ಮನವಿಯನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಕನ್ನಡ ಜನಾಭಿವೃದ್ಧಿ ವೇದಿಕೆ ಅಧ್ಯಕ್ಷ ದೇವಪ್ಪ ಇಟಗಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಾನಂದ ಇಟಗಿ, ಅಡಿವೆಪ್ಪ ಕಟ್ಟಿ ಮನಿ, ಕುರುವತ್ತೆಪ್ಪ ಅರಿಷಣದ, ಮಂಜುನಾಥ ಎಮ್ಮಿ, ಮಾರುತಿ ಕವಲೂರ, ಬಸಯ್ಯ ಇಟಗಿ ಮಠ, ಹನು ಮಂತ ನರಸನಾಯಕ,  ಮಂಜು ನಾಥ ಹುಯಿಲಗೋಳ, ಬಿ.ಡಿ. ಕರಕಣ್ಣ ವರ, ಎಫ್.ವಿ. ಹಿರೇಮಠ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT