ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಭೂಮಿ: ಹಣ ಸದ್ಬಳಕೆ ಮಾಡಿಕೊಳ್ಳಿ

Last Updated 6 ಜುಲೈ 2012, 9:50 IST
ಅಕ್ಷರ ಗಾತ್ರ

ಯಾದಗಿರಿ: ಸಣ್ಣ ಮತ್ತು ಅತಿ ಸಣ್ಣ ರೈತರ ಸಹಾಯಕ್ಕಾಗಿ ಸರ್ಕಾರ ಸುವರ್ಣ ಭೂಮಿ ಯೋಜನೆಯನ್ನು ಆರಂಭಿಸಿದ್ದು, ಆಯ್ಕೆಯಾಗುವ ಫಲಾನುಭವಿಗಳು ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಹೇಳಿದರು.

ಸಮೀಪದ ದೋರನಳ್ಳಿ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಸುವರ್ಣ ಭೂಮಿ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

ಲಾಟರಿಯಿಂದ ರೈತರಿಗೆ ತೃಪ್ತಿ ಆಗದು. ಕೆಲವರಿಗೆ ಸಂತೋಷವಾದರೆ, ಕೆಲವರು ನಿರಾಶರಾಗುತ್ತಾರೆ. ಸರ್ಕಾರ ಮುಂಬರುವ ದಿನಗಳಲ್ಲಿ ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಎಲ್ಲ ರೈತರಿಗೆ ಕೃಷಿ ಇಲಾಖೆ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಅಧ್ಯಕ್ಷ ದೇವರಾಜ ನಾಯಕ ಮಾತನಾಡಿ, ಸರ್ಕಾರದ ಸುವರ್ಣ ಭೂಮಿಯ ಯೋಜನೆಯ ಫಲಾನುಭವಿ ರೈತರು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು. 

ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಸ್ಸಣ್ಣಗೌಡ ಮರಕಲ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ರೈತರಿಗೆ ಅನೇಕ ಯೋಜನೆಗಳಿದ್ದು, ಸಬ್ಸಿಡಿ ನೀಡಲಾಗುತ್ತಿದೆ. ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ತಿಳಿಸಿದರು.

ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥ ಸಿದ್ಧಣ್ಣ ಮಾತನಾಡಿ, ಸಾಮಾನ್ಯ ರೈತರಿಂದ ಒಟ್ಟು 1,064 ಅರ್ಜಿಗಳು ಬಂದಿದ್ದು, ಅದರಲ್ಲಿ 178 ರೈತರು, ಪರಿಶಿಷ್ಟ ಜಾತಿ 300 ಅರ್ಜಿಗಳು ಬಂದಿದ್ದು, ಅದರಲ್ಲಿ 51 ರೈತರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು  ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮರೆಮ್ಮ ಶ್ಯಾಣಾನೋರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ನಾಟೇಕಾರ್, ಚಂದ್ರಶೇಖರ ಗುಂಡಳ್ಳಿ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಮರಕಲ್, ಸದಸ್ಯ ಮಲ್ಲಣ್ಣ ನಾಟೇಕಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಷಣ್ಮುಖಪ್ಪ ಸಾಹು ಕಕ್ಕೇರಿ, ರಾಹುಲ್ ಅರಕೇರಿ, ಅರುಣಕುಮಾರ ಕುಲಕರ್ಣಿ, ಚಂದಾಸಾಬ್ ಗೋಗಿ, ಶರಣಬಸ್ಸಪ್ಪ ಬಿರಾದಾರ ಕುರುಕುಂದಿ, ಮರೆಪ್ಪ ಬಿಳ್ಹಾರ, ಭೀಮಾಶಂಕರ ಅಣಬಿ, ಬಸವರಾಜ ಸ್ಥಾವರಮಠ, ತಿಪ್ಪಣ್ಣ ಆಂದೇಲಿ, ರಾಜು ಆಂದೇಲಿ, ಮೆಹಬೂಬಸಾಬ್, ಮೆಹಬೂಬ್ ಅಲೀ, ಅಬ್ದುಲ್ ಕರೀಂ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು.

ದೋರನಳ್ಳಿ, ನಾಯ್ಕಲ್, ಖಾನಾಪುರ, ಚಟ್ನಳ್ಳಿ, ಇಬ್ರಾಹಿಂಪುರ, ಅಣಬಿ, ಗುಂಡಳ್ಳಿ, ಕುರುಕುಂದಾ ಸೇರಿದಂತೆ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು. ಸಹಾಯಕ ಕೃಷಿ ಅಧಿಕಾರಿ ಎಸ್.ಎಚ್. ಪಾಟೀಲ ಸ್ವಾಗತಿಸಿದರು, ಬಾಪುಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT