ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಸಂಭ್ರಮದಲ್ಲಿ ಬಾಳೆಹೊನ್ನೂರು ವಿದ್ಯಾಸಂಸ್ಥೆ

Last Updated 10 ಜನವರಿ 2014, 6:53 IST
ಅಕ್ಷರ ಗಾತ್ರ

ಬಾಳೆಹೊನ್ನೂರು: 1963ರಲ್ಲಿ ಬಾಳೆ­ಹೊನ್ನೂರು ಪ್ರೌಢಶಾಲೆ ಹೆಸರಿ ನಲ್ಲಿ 47 ವಿದ್ಯಾರ್ಥಿಗಳಿಂದ ಆರಂಭ ವಾದ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡು ತ್ತಾ ಬಾಳೆಹೊನ್ನೂರು ವಿದ್ಯಾಸಂಸ್ಥೆ (ಬಿಇಎಸ್) ಎಂಬ ಹೆಮ್ಮರವಾಗಿ ಬೆಳೆದು ಇದೇ 10ರಂದು ಸುವರ್ಣ ಸಂಭ್ರಮ ವರ್ಷಾಚರಣೆ ಆಚರಿಸಿ­ಕೊಳ್ಳುತ್ತಿದೆ.

ಐವತ್ತು ವರ್ಷಗಳ ಹಿಂದೆ ಊರಿನ ಪ್ರಮುಖ ಗಣ್ಯರು ಇಲ್ಲಿನ ವಿದ್ಯಾರ್ಥಿ ಗಳ ಪ್ರೌಢಶಾಲಾ ವ್ಯಾಸಂಗಕ್ಕೆ ಆಗುತ್ತಿದ್ದ ತೊಂದರೆಯನ್ನು ಮನ ಗಂಡು ಸ್ಥಳೀಯ ಬಾಡಿಗೆ ಮನೆ ಯೊಂದರಲ್ಲಿ ಬಾಳೆಹೊನ್ನೂರು ಪ್ರೌಢಶಾಲೆ ಎಂಬ ಹೆಸರಿನೊಂದಿಗೆ ಶಾಲೆ ಆರಂಭಿಸಿದಾಗ  47 ವಿದ್ಯಾರ್ಥಿ ಗಳು ಸೇರ್ಪಡೆಗೊಂಡರು.

ನಂತರ ಅಲ್ಲಿಂದ ಶಾಲೆಯ ವಿದ್ಯಾರ್ಥಿ ಗಳ ಸಂಖ್ಯೆ ಬೆಳೆಯತೊಡಗಿದಾಗ ಶಾಲೆಯು ಸ್ವಂತ ಕಟ್ಟಡವನ್ನು ಹೊಂದುವುದು ಅನಿವಾರ್ಯ ವಾಯಿತು. ಈ ಹಿನ್ನೆಲೆಯಲ್ಲಿ ವಿದ್ಯಾ ಸಂಸ್ಥೆ ನಡೆಸುತ್ತಿದ್ದ ಆಡಳಿತ ಮಂಡಳಿ ಯವರು ಶಾಲಾ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಜಾಗವನ್ನು ಪಡೆದು 1980ರಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲಾಗುತ್ತಿತ್ತು.

ಬಾಳೆಹೊನ್ನೂರಿನಲ್ಲಿ ಪ್ರೌಢಶಾಲಾ ವ್ಯಾಸಂಗ ಪೂರೈಸಿದ ವಿದ್ಯಾರ್ಥಿಗಳ ಪದವಿಪೂರ್ವ ಶಿಕ್ಷಣವನ್ನು ಇಲ್ಲಿಯೇ ಪೂರೈಸಬೇಕೆಂಬ ಉದ್ದೇಶದಿಂದ 1980ರಲ್ಲಿ ಪಿಯುಸಿ ತರಗತಿಗಳನ್ನು ಆರಂಭಿಸಲಾಯಿತು. 1992ರಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯನ್ನು ಹಾಗೂ 2002ರಲ್ಲಿ ಪದವಿ ತರಗತಿಗಳನ್ನು ಪ್ರಾರಂಭಿಸ ಲಾಯಿತು. ಪ್ರೌಢಶಾಲೆ ಮತ್ತು ಪಿಯುಸಿ ತರಗತಿಗಳು ಅನುದಾನಿತ ವಾಗಿದ್ದರೆ, ಆಂಗ್ಲ ಮಾದ್ಯಮ ಪ್ರಾಥಮಿಕ ಹಾಗೂ ಪದವಿ ತರಗತಿ ಗಳು ಅನುದಾನ ರಹಿತವಾಗಿ ಕಾರ್ಯನಿರ್ವಹಿಸುತ್ತಿವೆ.

ಇದೀಗ ಎಲ್‌ಕೆಜಿ, ಯುಕೆಜಿ ಯಿಂದ ಹಿಡಿದು ಪದವಿ ತರಗತಿಗಳಾದ ಬಿಎ, ಬಿಕಾಂ ಶಿಕ್ಷಣವನ್ನು ಹೋಬಳಿ ಕೇಂದ್ರ ವಾದ ಬಾಳೆಹೊನ್ನೂರಿನಲ್ಲಿ ಬಿಇಎಸ್ ಹೆಸರಿನಡಿ ಸ್ಥಳೀಯವಾಗಿ ಉತ್ತಮ ಗುಣಮಟ್ಟದಲ್ಲಿ ನುರಿತ ಶಿಕ್ಷಕರು ಹಾಗೂ ಉಪನ್ಯಾಸಕರಿಂದ 1200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೀಡಲಾ ಗುತ್ತಿದೆ.

1963ರಲ್ಲಿ ಕೇವಲ 3 ಶಿಕ್ಷಕರನ್ನು ಹೊಂದಿದ್ದ ಸಂಸ್ಥೆ ಇಂದು 47ಕ್ಕೂ ಅಧಿಕ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಹೊಂದಿದೆ. ಈ ವಿದ್ಯಾಸಂಸ್ಥೆಯ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಪ್ರತೀ ವರ್ಷವೂ ಉತ್ತಮ ಫಲಿತಾಂಶ ದೊರೆ ಯುತ್ತಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿ ಗಳು ವಿವಿಧ ಕ್ರೀಡಾಸ್ಪರ್ಧೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರತೀವರ್ಷವೂ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾ ಗುತ್ತಿರು ವುದು ಗಮನಾರ್ಹವಾಗಿದೆ.

ಶಾಲೆಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಪೀಠೋಪಕರಣ ಗಳು ಉತ್ತಮವಾಗಿ ದೊರೆಯುತ್ತಿವೆ ಹಾಗೂ ಉತ್ತಮ ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿ ಒದಗಿಸಲಾಗುತ್ತಿದೆ.  

ಆಡಳಿತ ಮಂಡಳಿ: ಆರಂಭದಲ್ಲಿ ಸ್ಥಳೀಯ ಮುಖಂಡ ರಾಮ್‌ ಪೈ ಸಂಸ್ಥಾಪಕ ಅಧ್ಯಕ್ಷರಾಗಿ, ಕೆ.ಟಿ. ಚಿನ್ನೇಗೌಡ ಕಾರ್ಯದರ್ಶಿ ಹಾಗೂ ಅಬ್ದುಲ್ ಹಮೀದ್ ಖಜಾಂಚಿಯಾಗಿ ಆಡಳಿತ ನಿರ್ವಹಿ ಸಿದ್ದರು. ನಂತರದ ದಿನಗಳಲ್ಲಿ ಎಂ.ಆರ್.ರುದ್ರಪ್ಪಗೌಡ, ಬಿ.ಟಿ.ಮಂಜಪ್ಪಗೌಡ, ಎ.ಎಂ.ದುಗ್ಗ ಪ್ಪನಾಯ್ಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಎಂ.ಆರ್. ವೆಂಕಪ್ಪಗೌಡ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, 1997ರಿಂದ ಕೆ.ಟಿ. ಚಿನ್ನೇಗೌಡ ಅವರ ಪುತ್ರಿ ಸಹಕಾರಿ ಧುರೀಣೆ ಬಿ.ಸಿ.ಗೀತಾ ಕಾರ್ಯದರ್ಶಿ ಯಾಗಿ ಯಶಸ್ವಿಯಾಗಿ ವಿದ್ಯಾಸಂಸ್ಥೆಗೆ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ.

ಸಂಸ್ಥೆ ಆರಂಭವಾದಾಗ ಕೃಷ್ಣೇಗೌಡ ಮುಖ್ಯ ಶಿಕ್ಷಕರಾಗಿದ್ದು, ನಂತರ ಬಡ್ತಿಹೊಂದಿ ಪ್ರಾಂಶುಪಾಲರಾದರು. ಪ್ರಸ್ತುತ ಪುರುಷೋತ್ತಮ್ ಅವರು ಪ್ರಾಚಾರ್ಯರಾಗಿದ್ದಾರೆ.

ಇದೀಗ ಸುವರ್ಣ ಸಂಭ್ರಮ ಸವಿನೆನ ಪಿಗಾಗಿ ವಿದ್ಯಾಸಂಸ್ಥೆಯನ್ನು ಸುಮಾರು ₨ 50 ಲಕ್ಷ ವೆಚ್ಚದಲ್ಲಿ ನವೀಕರಣ ಹಾಗೂ ನೂತನ ಕೊಠಡಿಗಳನ್ನು ನಿರ್ಮಿಸ ಲಾಗಿದೆ. ವಿದ್ಯಾರ್ಥಿಗಳ ಪ್ರಾರ್ಥನಾ ಸಭಾಂಗಣಕ್ಕೆ ಮೇಲ್ಚಾ ವಣಿ ನಿರ್ಮಿಸಲು ₨15 ಲಕ್ಷ ಬೇಕಾ ಗಿದ್ದು, ಶೀಘ್ರದಲ್ಲಿ ಆ ಕಾರ್ಯವನ್ನು ಕೈಗೊಳ್ಳ ಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಬಿ.ಸಿ.ಗೀತಾ ಹೇಳುತ್ತಾರೆ.

ಸುವರ್ಣ ಮಹೋತ್ಸವದ ಸಮಾರಂ ಭದಲ್ಲಿ ವಿದ್ಯಾಸಂಸ್ಥೆ ಬೆಳೆದುಬಂದ ಹಾದಿಯ ಕಿರುಹೊತ್ತಿಗೆ ಸುವರ್ಣ ಸಂಭ್ರಮ ಸ್ಮರಣ ಸಂಚಿಕೆಯನ್ನು ಕಾಲೇ ಜಿನ ನಿವೃತ್ತ ಉಪ ಪ್ರಾಚಾರ್ಯ ಟಿ.ಆರ್.ನಾಗಪ್ಪಗೌಡ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರತರಲಾ­ಗುತ್ತಿದೆ.
ವಿದ್ಯಾರ್ಥಿಗಳಿಗಿಲ್ಲಿ ವಿಪುಲ ಅವಕಾಶ

ಬಾಳೆಹೊನ್ನೂರು ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಕಡು ಬಡವರು, ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕೆ ಬಾಳೆಹೊನ್ನೂರು ವಿದ್ಯಾಸಂಸ್ಥೆಯಲ್ಲಿ ವಿಫುಲ ಅವಕಾ­ಶಗಳಿದ್ದು, ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಮಹತ್ತರ ಸಾಧನೆ­ಯನ್ನು ಮಾಡಿದ್ದಾರೆ ಎನ್ನುತ್ತಾರೆ ನಿವೃತ್ತ ಉಪ ಪ್ರಾಚಾರ್ಯ ಟಿ.ಆರ್.ನಾಗಪ್ಪಗೌಡ.

ಸುವರ್ಣ ಸಂಭ್ರಮದಲ್ಲಿ
ಬಾಳೆಹೊನ್ನೂರು
: ಇಲ್ಲಿನ ಪ್ರತಿಷ್ಠಿತ ಬಾಳೆಹೊನ್ನೂರು ವಿದ್ಯಾಸಂಸ್ಥೆಯು ಯಶಸ್ವಿ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಯನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ಕಳೆದ ಕೆಲ ದಿನಗಳಿಂದ ಬಿಡುವಿಲ್ಲದೆ ತಾಲೀಮು ನಡೆಸುತ್ತಿದ್ದಾರೆ.

ಇಲ್ಲಿನ ಕಲಾರಂಗ ಕ್ರೀಡಾಂಗಣದಲ್ಲಿ ಸುವರ್ಣ ಸಂಭ್ರಮ ಸಮಾರಂಭ ನಡೆಸಲು ಉದ್ದೇಶಿಸಿದ್ದು, ಕ್ರೀಡಾಂಗಣದಲ್ಲಿ ಶಾಮಿಯಾನ ಹಾಕಿ ಬೃಹತ್ ಪೆಂಡಾಲ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಪೆಂಡಾಲ್‌ನಲ್ಲಿ 2 ಸಾವಿರಕ್ಕೂ ಅಧಿಕ ಸಭಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದು, ಸಂಸದ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಎಂ.ಆರ್.ವೆಂಕಪ್ಪಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ನೂತನ ಕಟ್ಟಡ ಉದ್ಘಾಟಿಸಲಿದ್ದು, ಶಾಸಕ ಡಿ.ಎನ್.ಜೀವರಾಜ್ ಗಣ್ಯರನ್ನು ಸನ್ಮಾನಿಸಲಿದ್ದಾರೆ. ಸಂಸದೆ, ಚಿತ್ರ ನಟಿ ರಮ್ಯಾ ಸುವರ್ಣ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ಸಮಾರಂಭದ ನಂತರ ಉಡುಪಿ ಕಡಿಯಾಳಿಯ ಪ್ರಶಾಂತ್ ಗ್ರೂಪ್ ಡ್ಯಾನ್ಸ್ ಅಕಾಡೆಮಿಯಿಂದ ಸೆಮಿ ಕ್ಲಾಸಿಕಲ್, ಬಾಲಿವುಡ್ ಸ್ಟೈಲ್ ಮತ್ತು ವೆಸ್ಟರ್ನ್ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT