ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಭೂಮಿ: ಫಲಾನುಭವಿ ಆಯ್ಕೆ

Last Updated 10 ಜುಲೈ 2012, 6:05 IST
ಅಕ್ಷರ ಗಾತ್ರ

ಹರಿಹರ: ನಗರದ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ಸೋಮವಾರ `ಸುವರ್ಣ ಭೂಮಿ~ಯೋಜನೆ 2012-13ನೇ ಸಾಲಿಗೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ನಡೆಯಿತು.

ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜೆ. ವಿಜಯಕುಮಾರ್ ಮಾತನಾಡಿ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 72 ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಗಳು ತಮ್ಮ ಜಮೀನಿನಲ್ಲಿ ಎಣ್ಣೆಕಾಳು, ದ್ವಿದಳ ಧಾನ್ಯ ಅಥವ ಬಿ.ಟಿ. ಹತ್ತಿ ಇವುಗಳಲ್ಲಿ ಯಾವುದಾದರೂ ಒಂದು ಬೆಳೆ ಬೆಳೆದಿರಬೇಕಾದುದು ಕಡ್ಡಾಯ ಎಂದರು.

 ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಅಲ್ಲದೇ, ಖಾಸಗಿ ಗುತ್ತಿಗೆದಾರರಿಂದ (ಥರ್ಡ್ ಪಾರ್ಟಿ) ಪರಿಶೀಲನೆ ನಡೆಯುತ್ತದೆ. ಇದರಲ್ಲಿ ಯಶಸ್ವಿಯಾದ ಫಲಾನುಭವಿಗಳಿಗೆ ಸರ್ಕಾರ, ಎಕರೆಗೆ ರೂ. 5,000ದಂತೆ ಪ್ರೋತ್ಸಾಹಧನ ನೀಡುತ್ತದೆ. ಇದರಲ್ಲಿ ವಿಫಲರಾದ ಫಲಾನುಭವಿಗಳ ಆಯ್ಕೆ ಅನೂರ್ಜಿತಗೊಳ್ಳುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಮಾತನಾಡಿದರು. ನಂತರ, ಸಾರ್ವಜನಿಕರ ಸಮ್ಮುಖದಲ್ಲಿ ಲಾಟರಿ ಮೂಲಕ ಪ.ಜಾ. 12, ಪ.ಪಂ. 7 ಮತ್ತು ಇತರೆ 53 ಒಟ್ಟು 72  ಫಲಾನುಭವಿಗಳನ್ನು ಆಯ್ಕೆ ಮಾಡಿದರು.

ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಭೀಮಣ್ಣ ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ಶಾಂತಾಬಾಯಿ ಕಲ್ಯಾಣಕರ್, ತಾಲ್ಲೂಕು ಕೃಷಿ ಸಮಾಜದ ಉಪಾಧ್ಯಕ್ಷ ಮಾಗನೂರು ಹನುಮಂತಪ್ಪ, ತಹಶೀಲ್ದಾರ್ ಜಿ. ನಜ್ಮಾ, ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಪಿ. ರೇಖಾ ಉಪಸ್ಥಿತರಿದ್ದರು.

ಜಗಳೂರು ವರದಿ
ತಾಲ್ಲೂಕಿನ ಮೂರು ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ `ಸುವರ್ಣ ಭೂಮಿ~ ಯೋಜನೆಯ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಕಸಬಾ, ಬಿಳಿಚೋಡು ಹಾಗೂ ಸೊಕ್ಕೆ ಹೋಬಳಿ ಸೇರಿ ಒಟ್ಟು 6,991ಅರ್ಜಿಗಳಲ್ಲಿ 2,585 ಫಲಾನುಭವಿಗಳನ್ನು ಕೃಷಿ ಇಲಾಖೆ ವತಿಯಿಂದ ಆಯ್ಕೆ ಮಾಡಲಾಯಿತು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಾಂತವೀರಪ್ಪ ಅವರು ಲಾಟರಿ ಪ್ರಕ್ರಿಯೆಗೆ ಚಾಲನೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯನಿರ್ವಾಹಕ ಅಧಿಕಾರಿ ಡಿ. ಪ್ರಭುಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಎಸ್. ಮಾರುತಿ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಪಿಎಸ್‌ಐ ಇ. ಆನಂದ್ ಹಾಗೂ ಮಾರಪ್ಪ ಅವರ ಸಮ್ಮುಖದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಸೊಕ್ಕೆ ಹೋಬಳಿ ವ್ಯಾಪ್ತಿಯ ಲಾಟರಿ ಪ್ರಕ್ರಿಯೆಗೆ ಹೊಸಕರೆ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ನಾಗರಾಜ್ ಫಲಾನುಭವಿಯ ಚೀಟಿ ಎತ್ತುವ ಮೂಲಕ ಚಾಲನೆ ನೀಡಿದರು. ತಾಲ್ಲೂಕು ಪಂಚಾಯ್ತಿ ಸದಸ್ಯರಾದ ರಾಮಚಂದ್ರಪ್ಪ, ಓಬಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಸಿದ್ದಪ್ಪ ಹಾಗೂ ಕೃಷಿ ಅಧಿಕಾರಿ ಬಸವರಾಜಪ್ಪ ಹಾಜರಿದ್ದರು.

ಬಿಳಿಚೋಡಿನಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಲಕ್ಷ್ಮೀ ಮಹೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಆರ್. ಅಂಜಿನಪ್ಪ, ಪಿಎಸ್‌ಐ ಇಮ್ರಾನ್ ಬೇಗ್ ಪಾಲ್ಗೊಂಡಿದ್ದರು.

ಸೊಕ್ಕೆ ಹೋಬಳಿ:  ಪರಿಶಿಷ್ಟ ಜಾತಿಯ 231 ಅರ್ಜಿದಾರರಲ್ಲಿ 100 ಹಾಗೂ ಹೆಚ್ಚುವರಿ 20 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 511ರಲ್ಲಿ 77 ಹಾಗೂ ಹೆಚ್ಚುವರಿಯಾಗಿ 15, ಸಾಮಾನ್ಯ ವರ್ಗದ 1,022ಅರ್ಜಿದಾರರಲ್ಲಿ 635 ಮತ್ತು ಹೆಚ್ಚುವರಿ 100 ಫಲಾನುಭವಿಗಳು ಆಯ್ಕೆಯಾದರು. ತೋಟಗಾರಿಕಾ ಇಲಾಖೆಯಲ್ಲಿ ಗುರಿಗಿಂತ ಕಡಿಮೆ ಅರ್ಜಿಗಳು ಬಂದ್ದ್ದಿದರಿಂದ ಎಲ್ಲಾ 305 ಅರ್ಜಿದಾರರು ಆಯ್ಕೆಯಾದರು. ಸೊಕ್ಕೆ ಹೋಬಳಿಯ ಒಟ್ಟು 1,770 ಅರ್ಜಿದಾರರಲ್ಲಿ 810 ಫಲಾನುಭವಿಗಳು ಆಯ್ಕೆಯಾದರು.

ಕಸಬಾ ಹೋಬಳಿಯಲ್ಲಿ ಕೃಷಿ ಇಲಾಖೆಯಡಿ ಒಟ್ಟು 3,464 ಅರ್ಜಿದಾರರಲ್ಲಿ 960 ಫಲಾನುಭವಿಗಳು ಮತ್ತು ಬಿಳಿಚೋಡು ವ್ಯಾಪ್ತಿಯಲ್ಲಿ ಒಟ್ಟು 1,757 ಅರ್ಜಿದಾರರಲ್ಲಿ 812 ಫಲಾನುಭವಿಗಳನ್ನು ಲಾಟರಿಯಲ್ಲಿ ಆಯ್ಕೆ ಮಾಡಲಾಯಿತು.

ಮಾಯಕೊಂಡ ವರದಿ
ಕಳೆದ ವರ್ಷದಿಂದ ಜಾರಿಗೆ ಬಂದ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದು, ಕಳೆದ ವರ್ಷದ ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗದೆ ಉಳಿದ ಅರ್ಜಿದಾರರ ಹೆಸರನ್ನು ಲಾಟರಿ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಯಿತು.

ಮಾಯಕೊಂಡ ಹೋಬಳಿಗೆ ಕಳೆದ ವರ್ಷ 1,726 ಅರ್ಜಿಗಳನ್ನು ಸ್ವೀಕರಿಸಿ ಅದರಲ್ಲಿ 785 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗಿತ್ತು. ಈ ವರ್ಷ ಉಳಿದ 862 ಅರ್ಜಿಗಳಲ್ಲಿ 266 ಫಲಾನುಭವಿಗಳನ್ನು ಇಂದು 2012-13 ನೇ ಸಾಲಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಉಳಿದ 596 ಅರ್ಜಿದಾರನ್ನು ಮುಂದಿನ ವರ್ಷ ಲಾಟರಿಯಲ್ಲಿ ಆಯ್ಕೆ ಮಾಡಲಾಗುತ್ತದೆ.
 
ಮುಂಗಾರು ವಿಳಂಬವಾಗಿರುವ  ಕಾರಣ  ಆಯ್ಕೆಯಾದ ರೈತರು 15 ದಿನಗಳ ಒಳಗಾಗಿ ಎಣ್ಣೆಕಾಳು, ದ್ವಿದಳ ಧಾನ್ಯಗಳನ್ನು ಬಿತ್ತಿ ಯೋಜನೆಯ ಫ ಪಡೆಯಬಹುದು ಎಂದು ಸಹಾಯಕ ಕೃ ಆಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರ್. ಮಾದಪ್ಪ ಅಧ್ಯಕ್ಷತೆ  ವಹಿಸಿದ್ದರು.

ಯೋಜನೆಯ ನೋಡೆಲ್ ಅಧಿಕಾರಿ ಪ್ರಭುದೇವ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾರದಾ ಉಮೇಶ್ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಂದ್ರಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ  ಅನಸೂಯಮ್ಮ,  ಸದಸ್ಯ ಜ್ಯೋತಿ ಗುರುನಾಥ್, ಅಶೋಕ, ರೇವಣಸಿದ್ದಪ್ಪ, ನಾಗರಾಜಪ್ಪ, ಮಂಜುನಾಥ ಸ್ವಾಮಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಕೃಷಿಕ ಸಮಾಜದ ಉಪಾಧ್ಯಕ್ಷ ರುದ್ರೇಶ್, ಕೃಷಿ ಅಧಿಕಾರಿ ಮಲ್ಲಿಕಾರ್ಜುನ, ಸಹಾಯಕ ಕೃಷಿ ಅಧಿಕಾರಿ ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT