ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಸೌಧ ತಂದ ನೆಮ್ಮದಿ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

2006ರ ಸಮ್ಮಿಶ್ರ ಸರ್ಕಾರವು ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ವಿಧಾನಮಂಡಲ ಅಧಿವೇಶನ ನಡೆಸಿತ್ತು. ಅದೇ ವೇಳೆ ಸುವರ್ಣಸೌಧದ ಘೋಷಣೆಯು ಸಹ ಹೊರಬಿದ್ದಿತ್ತು.

ವಿಧಾನಸೌಧದ ಮಾದರಿಯಲ್ಲಿಯೇ ಬೆಳಗಾವಿಯ ಸುವರ್ಣಸೌಧವಿರುವುದು, ಅದು ಉದ್ಘಾಟನೆಗೊಳ್ಳುತ್ತಿರುವುದು ಉತ್ತರಭಾಗದ ಜನರಿಗೆ ಸಂತಸ ಹಾಗೂ ತುಸು ನೆಮ್ಮದಿ ತಂದಿದೆ.

ಒಂದು ರಾಜ್ಯದ ರಾಜಧಾನಿ ಆ ರಾಜ್ಯದ ಮಧ್ಯಭಾಗದಲ್ಲಿರಬೇಕು. ಇದರಿಂದ ಎಲ್ಲಾ ಜಿಲ್ಲೆಗಳ ಪ್ರದೇಶಗಳಿಗೆ ಸರಿ ಸಮಾನ ಸ್ಥಾನಮಾನ ದೊರೆಯಲು ಸಾಧ್ಯ. ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸೌಲಭ್ಯಗಳು ಕಡಿಮೆ ಎನ್ನಬಹುದು.
 
ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗದ ಜನತೆಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎನ್ನುವ ಆರೋಪವಿದೆ. ಹಾಗೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರ ಮತ್ತು ಮುಂದುವರಿದ ಕ್ಷೇತ್ರಗಳಿಂದ ನಲುಗುತ್ತಲೇ ಬಂದಿರುವುದು ಸತ್ಯ ಸಂಗತಿ.

ಪ್ರತಿ ಬಜೆಟ್‌ನಲ್ಲಿ  ಉತ್ತರ ಭಾಗಕ್ಕೆ ಹೆಚ್ಚಿನ ಸೌಲಭ್ಯಗಳು ಒದಗಿ ಬಂದಿಲ್ಲ. ಪ್ರಾದೇಶಿಕ ತಾರತ್ಯಮದ ಕೂಗು ಬಹುಕಾಲದಿಂದಲೂ ಇದೆ. ಈ ಅನಾಥ ಪ್ರಜ್ಞೆಯನ್ನು ತುಸು ಕಡಿಮೆ ಮಾಡುವಂತೆ ಸುವರ್ಣಸೌಧ ಎದ್ದು ನಿಂತಿದೆ.

ಅಧಿವೇಶನಗಳನ್ನು ನಡೆಸುವುದರ ಮೂಲಕ ಈ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆಗಳಿಗೆ ಕಡಿವಾಣ ಹಾಕಿ, ಹೆಚ್ಚು ಪ್ರಾಧ್ಯಾನ್ಯತೆ ಕೊಟ್ಟು ಬರದಲ್ಲಿ ಸಿಲುಕಿರುವ ಕೆಲ ತಾಲೂಕುಗಳಿಗೆ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಲಿ.

ಆಡಳಿತ ಸರ್ಕಾರದ ಮುಖ್ಯಮಂತ್ರಿ ಉತ್ತರ ಭಾಗದವರೇ ಆದ್ದರಿಂದ ಉತ್ತರ ಕರ್ನಾಟಕದ ಜನರು ಇನ್ನಾದರೂ ಉತ್ತಮ ಸವಲತ್ತುಗಳು ಒದಗಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT