ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಿಕ್ಷಿತ ಮಹಿಳೆಯಿಂದ ಅಭಿವೃದ್ಧಿ ಸಾಧ್ಯ

Last Updated 10 ಅಕ್ಟೋಬರ್ 2011, 8:45 IST
ಅಕ್ಷರ ಗಾತ್ರ

ಸೊರಬ: ಶಿಕ್ಷಣವಂತ ಮಹಿಳೆಯಿಂದ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯ. ಮಹಿಳಾ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಹಾಲನಾಯ್ಕ ಸಲಹೆನೀಡಿದರು.

ಗ್ರಾಮೀಣ ಕೂಟ ಹಾಗೂ ಗ್ರಾಮೀಣ ಫೈನಾನ್ಶಿಯಲ್ ಸರ್ವಿಸಸ್  ಲಿಮಿಟೆಡ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಇಒ ಪುಷ್ಪಾ ಎಂ. ಕಮ್ಮಾರ್ ಜಿಲ್ಲಾ ಪಂಚಾಯ್ತಿಯಿಂದ ದೊರಕುವ ಸೌಲಭ್ಯ ಕುರಿತು, ಪಿಎಸ್‌ಐ ಮಹಾಬಲೇಶ್ವರ ರಕ್ಷಣಾ ಇಲಾಖೆ ಸಹಾಯ, ಸಹಕಾರ ಹಾಗೂಕಾನೂನು ತಜ್ಞೆ ಮಂಜುಳಾ ಕಾನೂನು ಸೌಲಭ್ಯ ಕುರಿತು ಮಾಹಿತಿ ನೀಡಿದರು.

ಕೂಟದ ಸಹಕಾರ ಪಡೆದು ಸಾಧನೆ ಮಾಡಿದ ಶಾರದಮ್ಮ ತಡಗಣಿ, ಗುಡಿಗಾರ ಶಾರದಮ್ಮ, ಸುಶೀಲಮ್ಮ, ದಿಲ್ಷಾದ್ ಬೇಗಂ ಅನಿಸಿಕೆ ವ್ಯಕ್ತಪಡಿಸಿದರು.

ಶಾಖಾ ಪ್ರಬಂಧಕ ಜಯರಾಮಪ್ಪ ಮಾಳಾಪುರ್ ಕೂಟದ ಕಾರ್ಯಸೂಚಿ ಕುರಿತು ಮಾಹಿತಿ ನೀಡಿದರು.
ಮಹಮದ್ ಹೂವಿನಮಠ ವಂದಿಸಿದರು. ರವಿಕುಮಾರ್ ವಾಲೇಕಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT