ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಷ್ಮಾ ಮುಖ್ಯ ಮಾಹಿತಿ ಕಮಿಷನರ್‌

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ನೂತನ ಮುಖ್ಯ ಮಾಹಿತಿ ಕಮಿಷನರ್‌ರಾಗಿ (ಸಿಐಸಿ) ಹಿರಿಯ ಮಾಹಿತಿ ಕಮಿಷನರ್‌ ಸುಷ್ಮಾ ಸಿಂಗ್‌ ಅಧಿಕಾರ ಸ್ವೀಕರಿಸಲಿದ್ದಾರೆ. ಸದ್ಯ ಮುಖ್ಯ ಮಾಹಿತಿ ಕಮಿಷನರ್‌­ರಾಗಿರುವ ದೀಪಕ್‌ ಸಂಧು ಅಧಿಕಾರ ಅವಧಿ ಈ ವರ್ಷದ ಅಂತ್ಯದಲ್ಲಿ ಮುಕ್ತಾಯ­ವಾಗಲಿದೆ.

ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌, ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಹಾಗೂ ಕಾನೂನು ಸಚಿವ ಕಪಿಲ್‌ ­ಸಿಬಲ್‌ ನೇತೃತ್ವದ ಸಮಿತಿ ಹಿರಿಯ ಐಎಎಸ್‌ ಅಧಿಕಾರಿ ಸುಷ್ಮಾ ಸಿಂಗ್‌ರವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಈ ಮೂಲಕ ಮುಖ್ಯ ಮಾಹಿತಿ ಕಮಿ­ಷನರ್‌ ಆಗಿ ನೇಮಕವಾಗುವ ಎರಡನೇ ಮಹಿಳೆ ಸುಷ್ಮಾ ಸಿಂಗ್‌ ಎಂದು ಗುರುತಿಸಿ­ಕೊಳ್ಳಲಿದ್ದಾರೆ. ಸುಷ್ಮಾ ಸಿಂಗ್‌ ಅವಧಿ ಮುಂದಿನ ವರ್ಷದ ಮೇ ತಿಂಗಳಲ್ಲಿ ಮುಕ್ತಾಯ­ವಾಗಲಿದೆ.

ಸುಷ್ಮಾ ಸಿಂಗ್‌ 2009ರ ಸೆಪ್ಟೆಂಬರ್‌ 23ರಂದು ಕೇಂದ್ರ ಮಾಹಿತಿ ಆಯೋಗದಲ್ಲಿ ಮಾಹಿತಿ ಕಮಿಷನರ್‌ ಆಗಿ ನೇಮಕಗೊಂಡಿದ್ದರು. ಅಲ್ಲದೆ   ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಕಾರ್ಯ­ನಿರ್ವಹಿಸುತ್ತಿದ್ದಾರೆ. ಇದಕ್ಕಿಂತ ಮೊದಲು ಭಾರತ ಸರ್ಕಾರ­ದ ಕಾರ್ಯ­ದರ್ಶಿಯಾಗಿ ಕಾರ್ಯ­ನಿರ್ವ­ಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT