ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಹಾಸಿನಿಯ ನೃತ್ಯ ಚಿಗುರು

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತ್ತೀಚೆಗೆ ಆಯೋಜಿಸಿದ್ದ ಚಿಗುರು ಕಾರ್ಯಕ್ರಮದಲ್ಲಿ ವಿದ್ಯಾ ಶಿಮ್ಲಡ್ಕರವರ ಶಿಷ್ಯೆ ಬಿ.ವಿ. ಸುಹಾಸಿನಿ ಭರತನಾಟ್ಯ ಪ್ರದರ್ಶನ ನೀಡಿ ಕಲಾಸಕ್ತರನ್ನು ರಂಜಿಸಿದರು.

ಅಮೃತವರ್ಷಿಣಿ ರಾಗದ ಪುಷ್ಪಾಂಜಲಿಯಿಂದ ಆರಂಭಿಸಿದ ಸುಹಾಸಿನಿ ಹಂಸಧ್ವನಿ ರಾಗದ ವರವಲ್ಲಭರಮಣ ಗಣೇಶ ಸ್ತುತಿಯಲ್ಲಿ ಮುದ್ದು ಮುಖದ ಬಾಲ ಗಣೇಶ ಹೇಗೆ ಗಜವದನನಾಗಿ ಪರಿವರ್ತನೆಯಾದನೆಂಬ ಸ್ವಾರಸ್ಯಕರ ಕತೆಯನ್ನು ನಾಟ್ಯದೊಂದಿಗೆ ನಿರೂಪಿಸಿದರು. ಕೃಷ್ಣನ ಲೀಲೆಯನ್ನು ಸಂಚಾರಿ ಭಾವದಲ್ಲಿ ಪ್ರಸ್ತುತಪಡಿಸಿದ ರೀತಿ ಹಾಗೂ ಅವರ ಅಭಿನಯ ಕಲಾ ಅಭಿಮಾನಿಗಳಿಗೆ ಮುದ ನೀಡಿತು.ವಿದ್ಯಾ ಶಿಮ್ಲಡ್ಕ (ನಟುವಾಂಗ), ಭಾರತಿ ವೇಣುಗೋಪಾಲ್ (ಗಾಯನ), ನಟರಾಜಮೂರ್ತಿ (ವಯಲಿನ್), ಶ್ರೀಹರಿ (ಮೃದಂಗ) ಸಾತ್ ನೀಡಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT