ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕಿ ಭೇಟಿ ಮಾಡಿದ ಪ್ರಧಾನಿ ಸಿಂಗ್‌

Last Updated 29 ಮೇ 2012, 9:00 IST
ಅಕ್ಷರ ಗಾತ್ರ

ಯಾಂಗೂನ್ (ಪಿಟಿಐ): ಮ್ಯಾನ್ಮಾರ್ ಪ್ರವಾಸದಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಂಗಳವಾರ ವಿರೋಧ ಪಕ್ಷದ ನಾಯಕಿ, ನ್ಯಾಷನಲ್ ಲೀಗ್ ಫಾರ್ ಡೇಮಾಕ್ರಸಿ ಪಕ್ಷದ ಅಧ್ಯಕ್ಷೆ  ಆಂಗ್ ಸಾನ್ ಸೂಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
 
ಸೂಕಿ ಅವರೊಂದಿಗೆ 45 ನಿಮೀಷಗಳ ಕಾಲ ಮಾತುಕತೆ ನಡೆಸಿದ ಪ್ರಧಾನಿ ಅವರು ಭಾರತಕ್ಕೆ ಭೇಟಿ ನೀಡಿ ಜವಾಹರಲಾಲ್ ನೆಹರೂ ಸ್ಮಾರಕ ಉಪನ್ಯಾಸ ನೀಡುವಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳುಹಿಸಿದ ಆಹ್ವಾನ ಪತ್ರಿಕೆಯನ್ನು ಸೂಕಿ ಅವರಿಗೆ ನೀಡಿದರು.

ಆಹ್ವಾನ ಪತ್ರಿಕೆ ಸ್ವೀಕರಿಸಿದ ನಂತರ  `ಶೀಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡುತ್ತೇನೆ~ ಎಂದು ಹೇಳಿದ ಸೂಕಿ ಅವರು ತಮ್ಮ ಹಾಗೂ ನೆಹರೂ ಕುಟುಂಬದ ಮಧ್ಯದ ದೀರ್ಘ ಕಾಲದ ಒಡನಾಟವನ್ನು ಸ್ಮರಿಸಿಕೊಂಡರು.

`ಭಾರತ ಮತ್ತು ಬರ್ಮಾ ಭೊಗೋಳಿಕ ಸಾಮಿಪ್ಯದಿಂದ ಮಾತ್ರವಲ್ಲ ಮೌಲ್ಯಗಳ ಹಂಚಿಕೆ, ಪರಂಪರೆ ಹಾಗೂ ಸ್ವತಂತ್ರಕ್ಕಾಗಿ ಹೋರಾಟದಂತ  ಸಾಮ್ಯತೆಗಳಿಂದಾಗಿ ಎರಡು ಮಿತ್ರ ರಾಷ್ಟ್ರಗಳಾಗಿವೆ~ ಎಂದು ಸೂಕಿ ತಿಳಿಸಿದರು.
 
ಪ್ರಧಾನಿ ಸಿಂಗ್ ಅವರು `ಸೂಕಿ ಅವರ ಧೃಡ ನಿಶ್ಚಯ ಹಾಗೂ ಹೋರಾಟ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT