ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ತ ಕ್ರಮಕ್ಕಾಗಿ ಮನವಿ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಜೆ.ಪಿ. ನಗರ 4ನೇ ಹಂತದಲ್ಲಿ 16ನೇ ಅಡ್ಡರಸ್ತೆಯಲ್ಲಿ ಬಿ.ಬಿ.ಎಂ.ಪಿ. ತೋಟಗಾರಿಕೆ ಇಲಾಖೆಯವರು 4 ವರ್ಷಗಳಿಂದ ಉದ್ಯಾನವನದ ಉಸ್ತುವಾರಿ ವಹಿಸಿಕೊಂಡು ಸುಮಾರು 500ಕ್ಕೂ ಹೆಚ್ಚು ಗಿಡ ಮರಗಳನ್ನು ನೆಟ್ಟಿರುತ್ತಾರೆ.

ಬೋರ್‌ವೆಲ್ ಸಹ ಹಾಕಿರುತ್ತಾರೆ. ಬೋರ್‌ವೆಲ್‌ಗೆ ಪೈಪ್ ಅನ್ನು ಹಾಕದೆ ಪಾರ್ಕ್ ಒಳಗೆ ಪೈಪ್ ಸಂಪರ್ಕವಿಲ್ಲದೆ ನೀರನ್ನು ಹಾಕುವುದು ತುಂಬಾ ಕಷ್ಟಕರವಾಗಿ ಗಿಡಗಳಿಗೆ ಹಾನಿಯಾಗಿದೆ. ಮತ್ತು ಪಾರ್ಕ್‌ನಲ್ಲಿ ಗೇಟ್ ಇಲ್ಲದೆ ತೊಂದರೆಯಾಗಿದೆ.

ಈ ಉದ್ಯಾನವನದಲ್ಲಿ ವಿವಿಧ ಜಾತಿಯ ಸುಮಾರು 500ಕ್ಕೂ ಹೆಚ್ಚು ವಿವಿಧ ಗಿಡಗಳು ಇದ್ದು ಈ ಗಿಡಗಳ ಎಲೆಗಳನ್ನು ಹಾಕಲು ಯಾವುದೇ ಗುಂಡಿ ಇಲ್ಲ. ವಾಕಿಂಗ್ ಟ್ರಾಕ್ ಪಕ್ಕದಲ್ಲಿಯೇ ಕಸವನ್ನು ಸುರಿಯುತ್ತಾರೆ. ಈ ಪಾರ್ಕಿನಲ್ಲಿ ಮಳೆ ಕೊಯ್ಲುಗೆ ವ್ಯವಸ್ಥೆ ಮಾಡಿದರೆ ಒಳ್ಳೆಯದು.
 
ಮತ್ತು ನೀರು ಹಿಂಗು ಗುಂಡಿಗಳನ್ನು ತೆರೆದು ಪಾರ್ಕನ್ನು ಅಭಿವೃದ್ಧಿ ಪಡಿಸಿದರೆ ಇಲ್ಲಿನ ಸ್ಥಳೀಯರಿಗೆ ಅನುಕೂಲವಾಗುತ್ತದೆ. ಬಿ.ಬಿ.ಎಂ.ಪಿ. ತೋಟಗಾರಿಕೆ ಇಲಾಖೆಯವರು ಈ ಕಸವನ್ನು ಬೇರೆ ಕಡೆ ಪಕ್ಕದಲ್ಲಿ ಗುಂಡಿ ತೆಗೆದು ಗೊಬ್ಬರದ ರೀತಿ ಹಾಕಿದರೆ ಗಿಡಗಳಿಗೆ ಗೊಬ್ಬರವಾಗುತ್ತದೆ.

ಇದರ ಬಗ್ಗೆ ಬಿ.ಬಿ.ಎಂ.ಪಿ. ಆಯುಕ್ತರು ಮತ್ತು ತೋಟಗಾರಿಕೆ ಇಲಾಖೆಯವರು ತುರ್ತು ಕ್ರಮ ಕೈಗೊಳ್ಳಬೇಕು. ಸೊಳ್ಳೆಗಳ ಕಾಟವನ್ನೂ ತಪ್ಪಿಸಬೇಕಾಗಿ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT