ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 1 ತಿಂಗಳ ಹಿಂದಿನ ಮಟ್ಟಕ್ಕೆ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರದ ವಹಿವಾಟಿನಲ್ಲಿ 150 ಅಂಶಗಳಷ್ಟು ಕುಸಿತ ಕಂಡಿದ್ದು ಒಂದು ತಿಂಗಳ ಹಿಂದಿನ ಮಟ್ಟವಾದ 19,610 ಅಂಶಗಳಿಗೆ ಜಾರಿದೆ.

ತಯಾರಿಕಾ ವಲಯದ ಪ್ರಗತಿ ಕುಸಿಯಲಿದೆ ಎಂಬ ವಿಶ್ಲೇಷಣೆಯಿಂದ ತೈಲ, ಇಂಧನ ವಲಯದ ಷೇರುಗಳು ಗರಿಷ್ಠ ನಷ್ಟ ಅನುಭವಿಸಿದವು. ವಹಿವಾಟಿನ ಒಂದು ಹಂತದಲ್ಲಿ 19,859 ಅಂಶಗಳನ್ನು ತಲುಪಿದ್ದ ಸೂಚ್ಯಂಕ ನಂತರ ದಿಢೀರನೆ 300 ಅಂಶಗಳಷ್ಟು ಕುಸಿತ ಕಂಡಿತು.

ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ 11 ತಿಂಗಳ ಹಿಂದಿನ ಮಟ್ಟವಾದ ರೂ.56.73ಕ್ಕೆ ಕುಸಿದಿರುವುದು ಕೂಡ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಿಸಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ' ಕೂಡ ದಿನದ ವಹಿವಾಟಿನಲ್ಲಿ 46 ಅಂಶಗಳಷ್ಟು ಕುಸಿತ ಕಂಡು 5,939 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಷೇರು ಮೌಲ್ಯ ಏರಿಕೆ
ಇನ್ಫೊಸಿಸ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಎನ್.ಆರ್. ನಾರಾಯಣಮೂರ್ತಿ ಮರು ನೇಮಕಗೊಂಡ ಬೆನ್ನಲ್ಲೇ ಕಂಪೆನಿಯ ಷೇರು ಮೌಲ್ಯ ಶೇ 9ರಷ್ಟು ಏರಿಕೆ ಕಂಡಿದೆ.

ಸೋಮವಾರ ಬೆಳಗಿನ ವಹಿವಾಟಿನಲ್ಲಿ ಇನ್ಫೊಸಿಸ್ ಷೇರು ಮೌಲ್ಯ ರೂ.2,624ರವರೆಗೂ ಏರಿಕೆ ಕಂಡಿತು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ನಿಫ್ಟಿ) ಶೇ 8.84ರಷ್ಟು ಏರಿಕೆ ಕಂಡು ರೂ.2,625ರಲ್ಲಿ ವಹಿವಾಟು ನಡೆಸಿತು.

`ಕಂಪೆನಿಯನ್ನು ಹಿಂದಿನ ಗರಿಷ್ಠ ಪ್ರಗತಿ ಪಥಕ್ಕೆ ಮೂರ್ತಿ ಕೊಂಡೊಯ್ಯಲಿದ್ದಾರೆ. ಅವರ ನೇಮಕವವನ್ನು ಹೂಡಿಕೆದಾರರು ಸ್ವಾಗತಿಸಿರುವ ಸಂಕೇತ ಇದು' ಎಂದು ಏಂಜೆಲ್ ಬ್ರೊಕಿಂಗ್‌ನ ವಿಶ್ಲೇಷಕ ಅಂಕಿತ್ ಸೊಮಾನಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ 9 ತ್ರೈಮಾಸಿಕಗಳಲ್ಲಿ ಇನ್ಫೊಸಿಸ್ ನಿರಾಶಾದಾಯಕ ಫಲಿತಾಂಶ ನೀಡಿದ್ದು, ಷೇರು ಮೌಲ್ಯ ಶೇ 15ರಷ್ಟು ಕುಸಿದಿರುವುದು ಹೂಡಿಕೆದಾರರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಾರಾಯಣಮೂರ್ತಿ ಅವರ ಮರು ನೇಮಕಕ್ಕೆ ಒತ್ತಡ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT