ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 15 ತಿಂಗಳಲ್ಲಿಯೇ ಗರಿಷ್ಠ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಮುಂಬೈ ಷೇರುಪೇಟೆಯಲ್ಲಿ 15 ತಿಂಗಳ ನಂತರ ಮತ್ತೆ ತೇಜಿ ಉಂಟಾಗಿದ್ದು, ಸಂವೇದಿ ಸೂಚ್ಯಂಕ ವು ಗುರುವಾರ 19000 ಅಂಶಗಳ ಗಡಿಯನ್ನು ಮತ್ತೊಮ್ಮೆ ದಾಟಿತು.

ಕೇಂದ್ರ ಸರ್ಕಾರ `ವಿದೇಶಿ ನೇರ ಹೂಡಿಕೆ~ಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮವಾಗಿ ಷೇರುಪೇಟೆಯಲ್ಲಿ ಭಾರಿ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಅದರಿಂದಾಗಿಯೇ ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡುಬಂದಿತು ಎಂದು ಮಾರುಕಟ್ಟೆ ಪಂಡಿತರು ವಿಶ್ಲೇಷಿಸಿದ್ದಾರೆ.

2011ರ ಜುಲೈನಲ್ಲಿ 19,107.04 ಅಂಶ ದಾಖಲಿಸಿದ್ದ `ಬಿಎಸ್‌ಇ~, ಈಗ ಮತ್ತೆ ಅದೇ ಮಟ್ಟದ ಬೆಳವಣಿಗೆ ತೋರಿದೆ. ಒಂದೇ ದಿನದಲ್ಲಿ 188.46 ಅಂಶ ಏರಿಕೆ ದಾಖಲಿಸಿದ ಸಂವೇದಿ ಸೂಚ್ಯಂಕವು 19,058.15ರಲ್ಲಿ ದಿನದಂತ್ಯ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT