ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 157 ಅಂಶ ಚೇತರಿಕೆ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 157 ಅಂಶಗಳಷ್ಟು ಏರಿಕೆ ಕಂಡಿದ್ದು, ಕಳೆದ 11 ವಾರಗಳಲ್ಲೇ ಗರಿಷ್ಠ ಮಟ್ಟವಾದ 17,234 ಅಂಶಗಳಿಗೆ ತಲುಪಿದೆ.

ಜನವರಿ 14ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಮತ್ತಷ್ಟು ಇಳಿಕೆ ಕಂಡಿರುವುದು ಸೂಚ್ಯಂಕ ಜಿಗಿಯುವಂತೆ ಮಾಡಿದೆ.  ಭಾರತೀಯ ರಿಸರ್ವ್ ಬ್ಯಾಂಕ್ ನಗದು ಮೀಸಲು ಅನುಪಾತ (ಸಿಆರ್‌ಆರ್) ತಗ್ಗಿಸಿರುವುದು ಮತ್ತು ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿರುವ ಸುದ್ದಿಗಳು ವಿದೇಶಿ ವಿತ್ತೀಯ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಗೆ ಉತ್ತೇಜನ ನೀಡಿದ್ದು, ಮತ್ತೊಮ್ಮೆ ಭರ್ಜರಿ  ವಹಿವಾಟು ದಾಖಲಾಗಿದೆ.
 
ತೈಲಶುದ್ಧೀಕರಣ, ಮಾಹಿತಿ ತಂತ್ರಜ್ಞಾನ, ಲೋಹ ಮತ್ತು ವಾಹನ ತಯಾರಿಕೆ ಕಂಪೆನಿಗಳ ಷೇರುಗಳು ಶುಕ್ರವಾರದ ವಹಿವಾಟಿನಲ್ಲಿ ಲಾಭ ಮಾಡಿಕೊಂಡವು. ಇನ್ಫೋಸಿಸ್, ಆರ್‌ಐಎಲ್, ಬಿಎಚ್‌ಐಎಲ್, ಏರ್‌ಟೆಲ್, ಟಿಸಿಎಸ್ ಷೇರುಗಳು ಗರಿಷ್ಠ ಏರಿಕೆ ಪಡೆದವು.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಶುಕ್ರವಾರದ ವಹಿವಾಟಿನಲ್ಲಿ 46 ಅಂಶಗಳಷ್ಟು ಏರಿಕೆ ಪಡೆದು 5,200 ಅಂಶಗಳ ಗಡಿ ದಾಟಿ ದಿನದಂತ್ಯದಲ್ಲಿ 5,204 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT