ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 3 ತಿಂಗಳಲ್ಲೇ ಕನಿಷ್ಠ

ರೈಲ್ವೆ ಬಜೆಟ್ ಪ್ರಭಾವ: 316 ಅಂಶ ಕುಸಿತ
Last Updated 26 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಹೊಸ ವರ್ಷದ ಆರಂಭದಿಂದಲೂ ಭಾರಿ ನಿರೀಕ್ಷೆ ಹುಟ್ಟಿಸುತ್ತಾ, ಜನವರಿ 29ರಂದು 20 ಸಾವಿರ ಅಂಶಗಳ ಗಡಿಗೆ ಸಮೀಪವೂ ಬಂದಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ, ಈಗ 19 ಸಾವಿರದ ಮಟ್ಟಕ್ಕೆ ಕುಸಿದಿದೆ.

ಮಂಗಳವಾರ ರೈಲ್ವೆ ಬಜೆಟ್ ಪ್ರಭಾವದಿಂದಾಗಿ ಸೂಚ್ಯಂಕ ದಿಢೀರ್ 316 ಅಂಶ ಕುಸಿದು 19015 ಅಂಶಗಳಿಗೆ ದಿನದ ವಹಿವಾಟು ಕೊನೆಗೊಳಿಸಿದೆ. ಆ ಮೂಲಕ ಮೂರು ತಿಂಗಳ ಹಿಂದಿನ ಮಟ್ಟಕ್ಕೆ ಬಂದಿದೆ.

ರೈಲ್ವೆ ಬಜೆಟ್‌ನಲ್ಲಿ ಸರಕು-ಸಾಗಣೆ ದರ ಹೆಚ್ಚಿಸಿದ ಹಿನ್ನೆಲೆಯಲ್ಲಿ ಹಣದುಬ್ಬರ ಹೆಚ್ಚಬಹುದೆಂಬ ನಿರೀಕ್ಷೆಯಲ್ಲಿ ಪೇಟೆ ಕಳವಳಗೊಂಡಿದ್ದರಿಂದ ಸೂಚ್ಯಂಕ ಒಮ್ಮೆಗೇ ಕುಸಿದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಮಂಗಳವಾರ ವಹಿವಾಟಿನಲ್ಲಿ ಒಂದು ಹಂತದಲ್ಲಿ ಸೂಚ್ಯಂಕ 19 ಸಾವಿರದ ಗಡಿಯಿಂದಲೂ ಇಳಿದು ನವೆಂಬರ್ 29ರಂದು ದಾಖಲಾಗಿದ್ದ ಹಂತಕ್ಕೆ ಕುಸಿಯಿತು. ಇದರಿಂದ ಭಾರತೀಯ ರೈಲ್ವೆಯನ್ನೇ ಆಧರಿಸಿರುವ ಕಂಪೆನಿಗಳಾದ ಕಾಳಿನಿಧಿ ರೈಲ್ ನಿರ್ಮಾಣ್, ಹಿಂದ್ ರೆಕ್ಟಿಫೈ    ಯರ್ಸ್, ಕರ್ನೆಕ್ಸ್ ಮೈಕ್ರೊಸಿಸ್ಟಂ, ಟಿಟಾಗ್ರಾ ವ್ಯಾಗನ್ಸ್, ಟಾಕ್ಸ್‌ಮ್ಯಾಕೊ ಕಂಪೆನಿಗಳ ಷೇರುಗಳು ಶೇ 12ರಷ್ಟು ನಷ್ಟ ಅನುಭವಿಸಿದವು.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ' ಕೂಡ 93.40 ಅಂಶ ಕುಸಿದು 5,800 ಮಟ್ಟದಿಂದ ಇಳಿದು 5,761 ಅಂಶದಲ್ಲಿ ದಿನದಂತ್ಯ ಕಂಡಿತು. ತೈಲ ಶುದ್ಧೀಕರಣ, ಭಾರಿ ಯಂತ್ರೋಪಕರಣ ಮತ್ತು ವಾಹನ ಉದ್ಯಮ ವಲಯದ ಷೇರು ಗಳು ಗರಿಷ್ಠ ಇಳಿಕೆ ಕಂಡವು.

ರೈಲ್ವೆ ಬಜೆಟ್‌ನಲ್ಲಿ ಆಹಾರ ಧಾನ್ಯ, ಬೇಳೆಕಾಳು, ಶೇಂಗಾ ಎಣ್ಣೆ ಮೇಲಿನ ಮೂಲ ಸಾಗಣೆ ದರವನ್ನು ಶೇ 6ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಆಹಾರ ಪದಾರ್ಥಗಳ ಧಾರಣೆಯೂ ಮುಂಬರುವ ದಿನಗಳಲ್ಲಿ ಏರಿಕೆಯಾಗುವ ಸಾಧ್ಯ ಇದೆ.

ಆರ್ಥಿಕ ಸಮೀಕ್ಷಾ ವರದಿ ಮತ್ತು ಕೇಂದ್ರ ಬಜೆಟ್ ಕೂಡ ಫೆ. 26 ಮತ್ತು 27ರಂದು ವಹಿವಾಟಿನ ಮೇಲೆ ತೀವ್ರ ಪ್ರಭಾವ ಬೀರಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT