ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ: 4 ದಿನದಲ್ಲಿ 602 ಅಂಶ ಕುಸಿತ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಕಳೆದ ನಾಲ್ಕು ದಿನಗಳಿಂದ ಸತತ ಕುಸಿತ ಕಾಣುತ್ತಿದೆ. ಸೋಮವಾರ 12 ಅಂಶಗಳಷ್ಟು ಹಾನಿ ಕಂಡ ಸೂಚ್ಯಂಕ ನಾಲ್ಕು ತಿಂಗಳ ಹಿಂದಿನ ಮಟ್ಟವಾದ 18,437 ಅಂಶಗಳಿಗೆ ಕುಸಿಯಿತು. ಒಟ್ಟಾರೆ ನಾಲ್ಕು ವಹಿವಾಟು ಅವಧಿಗಳಲ್ಲಿ `ಬಿಎಸ್‌ಇ' 602 ಅಂಶಗಳಷ್ಟು ಇಳಿಕೆ ಕಂಡಿದೆ.

ರಾಷ್ಟ್ರೀಯ ಸೂಚ್ಯಂಕ `ನಿಫ್ಟಿ' ಕೂಡ 10.30 ಅಂಶಗಳಷ್ಟು ಇಳಿಕೆ ಕಂಡು 5,543 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಟಿಸಿಎಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಜಿಂದಾಲ್ ಸ್ಟೀಲ್ ಕಂಪೆನಿಗಳು ಗರಿಷ್ಠ ಕುಸಿತ ಕಂಡವು. ಇನ್ಫೊಸಿಸ್ ಷೇರು ಮೌಲ್ಯ ಶೇ 1.07ರಷ್ಟು ಕುಸಿ ದುರೂ.2,833ರಲ್ಲಿ ವಹಿವಾಟು ನಡೆಸಿತು. ಬ್ಯಾಂಕಿಂಗ್ ವಲಯದ ಷೇರುಗಳು ಶೇ 0.79ರಷ್ಟು ಹಾನಿ ಅನುಭವಿಸಿದವು.  ಭಾರ್ತಿ ಏರ್‌ಟೆಲ್ ಷೇರು ಶೇ 3.90ರಷ್ಟು ಏರಿಕೆ ಪಡೆದು,ರೂ.281ರಲ್ಲಿ ವಹಿವಾಟು ನಡೆಸಿತು. ರಿಲಯನ್ಸ್ ಕಮ್ಯುನಿಕೇಷನ್ ಶೇ 4.52ರಷ್ಟು ಏರಿಕೆ ಪಡೆಯಿತು.

ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) ಹಣದುಬ್ಬರ, ಕಾರ್ಪೊರೇಟ್ ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಪ್ರಕಟಗೊಳ್ಳಬೇಕಿದ್ದು,  ವಾರಾಂತ್ಯದಲ್ಲಿ ಸೂಚ್ಯಂಕ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಬೊನಂಜಾ ಪೋರ್ಟ್‌ಪೊಲಿಯೊ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT