ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 421ಅಂಶ ಏರಿಕೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಇನ್ಫೋಸಿಸ್‌ನ ಎರಡನೆಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆಯು ಮಾರುಕಟ್ಟೆ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಇದ್ದ ಕಾರಣ, ಬುಧವಾರ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 421 ಅಂಶಗಳಷ್ಟು ಏರಿಕೆ ಕಂಡು, ಕಳೆದ ನಾಲ್ಕು ವಾರಗಳಲ್ಲೇ ಗರಿಷ್ಠ ಮಟ್ಟ 16,958 ಅಂಶಗಳಿಗೆ ಜಿಗಿಯಿತು. 

ಜಾಗತಿಕ ಆರ್ಥಿಕ ಅಸ್ಥಿರತೆ ಮಧ್ಯೆ, ಚೇತರಿಕೆಗಾಗಿ ಕಾರ್ಪೊರೇಟ್ ಫಲಿತಾಂಶದತ್ತ ಕಣ್ಣು ನೆಟ್ಟು ಕುಳಿತ್ತಿದ್ದ ಷೇರುಪೇಟೆಗೆ ಇನ್ಫೋಸಿಸ್ ಹಣಕಾಸು ಸಾಧನೆ ಬಲ ತುಂಬಿತು. ದಿನದ ವಹಿವಾಟಿನಲ್ಲಿ ಇನ್ಫೋಸಿಸ್ ಷೇರುಗಳು ಶೇ 6.83ರಷ್ಟು ಏರಿಕೆ ಕಂಡವು. ಮಾಹಿತಿ ತಂತ್ರಜ್ಞಾನ ಸೇರಿದಂತೆ ರಿಯಲ್‌ಎಸ್ಟೇಟ್ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಲಾಭಮಾಡಿಕೊಂಡವು.

ಆಗಸ್ಟ್ ತಿಂಗಳ ದೇಶದ ಕೈಗಾರಿಕೆ ಪ್ರಗತಿ ದುರ್ಬಲವಾಗಿದ್ದರೂ ಈ ಸಂಗತಿ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿಲ್ಲ. ಬದಲಿಗೆ ಐಟಿ, ಬ್ಯಾಂಕಿಂಗ್, ರಿಯಾಲ್ಟಿ ಮತ್ತು ಖನಿಜ ಉದ್ಯಮಗಳ ಷೇರುಗಳ ಖರೀದಿ ಒತ್ತಡ ಕಂಡುಬಂತು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ ಬುಧವಾರ ವಹಿವಾಟಿನಲ್ಲಿ 125 ಅಂಶಗಳಷ್ಟು ಏರಿಕೆ ದಾಖಲಿಸಿ, 5,099 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಇದು ನಾಲ್ಕು ವಾರಗಳ ನಂತರ ದಾಖಲಾದ ಗರಿಷ್ಠ ಮಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT