ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ ಚೇತರಿಕೆ: ಖರೀದಿ ಭರಾಟೆ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಲಾಭದ ಹಾದಿಗೆ ಮರಳಿದ್ದು, ಗುರುವಾರದ ವಹಿವಾಟಿನಲ್ಲಿ ಮತ್ತೆ 94 ಅಂಶಗಳಷ್ಟು ಚೇತರಿಕೆ ಕಂಡಿದ್ದು, 17, 278 ಅಂಶಗಳನ್ನು ತಲುಪಿದೆ.

ಇನ್ಫೋಸಿಸ್ ಐಸಿಐಸಿಐ ಬ್ಯಾಂಕ್, ಆರ್‌ಐಎಲ್ ಷೇರು ದರಗಳು ಸತತ ಮೂರು ದಿನಗಳಿಂದ ಏರಿಕೆ ಕಾಣುತ್ತಿವೆ.  ಜಾಗತಿಕ ಮಾರುಕಟ್ಟೆ ಚೇತರಿಸಿಕೊಂಡಿರುವುದು ಯೂರೋಪ್ ಸಾಲದ ಬಿಕ್ಕಟ್ಟಿಗೆ ಸಂಬಂಧಿಸಿದ ಧನಾತ್ಮಕ ಬೆಳವಣಿಗೆಗಳು ಮತ್ತು ರಾಷ್ಟ್ರಪತಿ ಚುನಾವಣೆ ಮುಗಿದ ಬಳಿಕ ಆರ್ಥಿಕ ಸುಧಾರಣೆ ಪರ್ವ ಪ್ರಾರಂಭಗೊಳ್ಳಲಿದೆ ಎಂಬ ವಿಶ್ಲೇಷಣೆ ವಹಿವಾಟಿಗೆ ಬಲ ತುಂಬಿವೆ.

ಕಳೆದ ಎರಡು ವಹಿವಾಟು ಅವಧಿಗಳಲ್ಲಿ (ಮಂಗಳವಾರ, ಬುಧವಾರ) ಸೂಚ್ಯಂಕ 81 ಅಂಶಗಳಷ್ಟು ಏರಿಕೆ ಕಂಡಿದೆ. ಮಾರುತಿ ಸುಜುಕಿಯ ಮಾನೇಸರ ತಯಾರಿಕೆ ಘಟಕವನ್ನು ಗಲಭೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿರುವುದರಿಂದ ಸುಜುಕಿ ಷೇರು ದರಗಳು ಶೇ 9ರಷ್ಟು ಹಾನಿ ಕಂಡಿವೆ. ಉನ್ನತಾಧಿಕಾರ ಸಚಿವರ ಸಮಿತಿ ಶುಕ್ರವಾರ ಸಭೆ ಸೇರಲಿದ್ದು, ಎರಡನೆಯ ತಲೆಮಾರಿನ ತರಂಗಾಂತರ ಗುಚ್ಛ (2ಜಿ) ಹಂಚಿಕೆಗೆ ಸಂಬಂಧಿಸಿದಂತೆ ಮೀಸಲು ದರ ನಿಗದಿಪಡಿಸಲಿದೆ. ಈ ಹಿನ್ನೆಲೆಯಲ್ಲಿ ಏರ್‌ಟೆಲ್ ಷೇರು ದರಗಳು ಗುರುವಾರ ಶೇ 2.3ರಷ್ಟು ಕುಸಿತ ಕಂಡವು.

ರಾಷ್ಟ್ರಪತಿ ಚುನಾವಣೆ ಫಲಿತಾಂಶ ಜುಲೈ 22ರಂದು ಪ್ರಕಟಗೊಳ್ಳಲಿದೆ. ಇದರ ನಂತರ ಸರ್ಕಾರ ಆರ್ಥಿಕ ಸುಧಾರಣೆಗೆ ಮುಂದಾಗಲಿದೆ ಎನ್ನುವ ಭಾರೀ ವಿಶ್ಲೇಷಣೆಗಳು ಷೇರುಪೇಟೆಯಲ್ಲಿ ನಡೆಯುತ್ತಿವೆ. ಇದರ ಜತೆಗೆ, ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರಗೊಂಡಿರುವುದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಖರೀದಿ ಭರಾಟೆಯೂ ಹೆಚ್ಚಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಗುರುವಾರದ ವಹಿವಾಟಿನಲ್ಲಿ 26 ಅಂಶಗಳಷ್ಟು ಏರಿಕೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT