ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ ಮತ್ತೆ ಕುಸಿತ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಾರಾಟ ಒತ್ತಡದ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಮಂಗಳವಾರದ ವಹಿವಾಟಿನಲ್ಲಿ 261 ಅಂಶಗಳಷ್ಟು ಕುಸಿತ ದಾಖಲಿಸಿ  7 ತಿಂಗಳ ಹಿಂದಿನ ಮಟ್ಟಕ್ಕೆ ಇಳಿಯಿತು.ಪೇಟೆಯಲ್ಲಿ ಎಲ್ಲ ವಲಯದ ಷೇರುಗಳಲ್ಲಿಯೂ ಮಾರಾಟ ಒತ್ತಡ ಕಂಡು ಬಂದಿತು. ಗ್ರಾಹಕ ಬಳಕೆ ಉತ್ಪನ್ನ, ರಿಯಾಲ್ಟಿ, ಆಟೊ ಮತ್ತು ಬ್ಯಾಂಕ್ ವಲಯದ ಷೇರುಗಳು ಕುಸಿತದ ಮುಂಚೂಣಿಯಲ್ಲಿ ಇದ್ದವು. ದಿನದ ವಹಿವಾಟು ಆರಂಭವು ಸ್ಥಿರವಾಗಿಯೇ ಇತ್ತು. ಆದರೆ, ದಿನದ ಉಳಿದ ವಹಿವಾಟಿನ ಉದ್ದಕ್ಕೂ ಸೂಚ್ಯಂಕವು ಇದೇ ಸ್ಥಿರತೆ ಕಾಯ್ದುಕೊಳ್ಳದೇ ಹೋಯಿತು. 

ಎಲ್ಲ ವಲಯದ ಷೇರುಗಳಲ್ಲಿ ಕಂಡು ಬಂದ ಮಾರಾಟ ಒತ್ತಡದ ಫಲವಾಗಿ ನಿರಂತರವಾಗಿ ಕುಸಿಯುತ್ತಲೇ ಹೋಯಿತು. ಅಂತಿಮವಾಗಿ ಸಂವೇದಿ ಸೂಚ್ಯಂಕವು 18 ಸಾವಿರ ಅಂಶಗಳಿಗಿಂತ (17,651.73) ಕೆಳ ಮಟ್ಟಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಹಣದುಬ್ಬರ ಮತ್ತಿತರ ಕಾರಣಗಳಿಗೆ ಮುಂದಿನ ತ್ರೈಮಾಸಿಕದಲ್ಲಿ ಉದ್ದಿಮೆಗಳ ಹಣಕಾಸು ಸಾಧನೆ ಕುಸಿಯಲಿದೆ ಎನ್ನುವ ಆತಂಕ ಹೂಡಿಕೆದಾರರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT