ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂತ್ರಧಾರ್ ಆಟಿಕೆ ಪ್ರಪಂಚ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಲಾಭರಹಿತ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ‘ಸೂತ್ರಧಾರ’, ಬುಧವಾರದಿಂದ ವಾರ್ಷಿಕ ಮಾರಾಟ ಆಯೋಜಿಸಿದೆ.  ಎಂಟು ವರ್ಷದೊಳಗಿನ ಮಕ್ಕಳಿಗೆ ಜಾನಪದ ಆಟಿಕೆ ಮತ್ತು ಕಲಿಕೆಯ ಸಾಧನಗಳನ್ನು ಇದು ತಯಾರಿಸುತ್ತಿದೆ. ಆರಂಭಿಕ ಕಲಿಕೆ, ಶಿಶುಗಳ ಜ್ಞಾನ ಪ್ರಚೋದನೆಗೆ ಪೂರಕವಾದ ಸಾಧನಗಳ ತಯಾರಿಕೆ ಇದರ ವಿಶೇಷ. ಬಿದಿರು, ಕಟ್ಟಿಗೆ, ನಾರು, ಚಿಪ್ಪು ಮತ್ತು ಕಲ್ಲುಗಳಿಂದ ತಯಾರಾದ ಆಟಿಕೆಗಳು ಆಟಕ್ಕೆ ನೂತನ ಅನುಭವ ನೀಡುತ್ತವೆ. ಹೆಚ್ಚಿನವು ಮುಖ್ಯ ವಾಹಿನಿಯ ಪುಸ್ತಕ ಮತ್ತು ಇತರ ಮಳಿಗೆಗಳಲ್ಲಿ ಲಭ್ಯವಿಲ್ಲ.

 ಶೈಕ್ಷಣಿಕ ಆಟಿಕೆಗಳು, ಸೂತ್ರದ ಬೊಂಬೆ, ಕಟ್ಟಿಗೆಯ ಮಣಿಗಳು, ಹೊಳಪಿನ ಕಾರ್ಡುಗಳು ಇತ್ಯಾದಿ, ಗಣಿತ, ವಿಜ್ಞಾನ ಮತ್ತು ಭಾಷಾ ಕಲಿಕೆಯ ಸಾಧನಗಳಿವೆ. ವಿವಿಧ ಕಿಟ್‌ಗಳು, ಮಕ್ಕಳ ಪುಸ್ತಕಗಳು, ಶಿಕ್ಷಕರಿಗೆ ಮತ್ತು ವಿಶೇಷ ಶಾಲೆಗಳ ಶಿಕ್ಷಕರಿಗಿಯೇ ಸಿದ್ಧಪಡಿಸಿದವುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಲಭ್ಯ. ಶೇ 25ರ ವರೆಗೆ ರಿಯಾಯ್ತಿ ಕೂಡ ಲಭ್ಯ. ಸ್ಥಳ: 59/1, 3ನೇ ಅಡ್ಡರಸ್ತೆ, 10ನೇ ಎ ಮುಖ್ಯ ರಸ್ತೆ, ಇಂದಿರಾನಗರ 2ನೇ ಹಂತ. ಬೆಳಿಗ್ಗೆ 10.30 ರಿಂದ ಸಂಜೆ 5.30. ಮಾಹಿತಿಗೆ: www.sutradhar.com  2521 5191. ಮೇಳ ಶನಿವಾರ ಮುಕ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT