ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಕಿಂಗ್ಸ್ ಜಯಭೇರಿ

Last Updated 4 ಮೇ 2012, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಚೆನ್ನೈ ಸೂಪರ್  ಕಿಂಗ್ಸ್ ನೀಡಿದ ಗುರಿ ಡೆಕ್ಕನ್  ಚಾರ್ಜರ್ಸ್ ಹೈದರಾಬಾದ್‌ಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಕೆಮರೂನ್ ವೈಟ್ (77; 53 ಎಸೆತ) ಎಷ್ಟೇ ಪ್ರಯತ್ನಿಸಿದರೂ ಆ ಗುರಿಯ ಗಡಿ ದಾಟಲು ಸಾಧ್ಯವಾಗಲಿಲ್ಲ.

ಪರಿಣಾಮ ಡೆಕ್ಕನ್ ಚಾರ್ಜರ್ಸ್‌ಗೆ ಸೋಲು ಎದುರಾಯಿತು. 10 ರನ್‌ಗಳಿಂದ ಗೆಲುವು ಸಾಧಿಸಿದ್ದು ದೋನಿ ಸಾರಥ್ಯದ ಸೂಪರ್ ಕಿಂಗ್ಸ್. ಆರಂಭಿಕಆಟಗಾರ ಫಾಪ್ ಡು ಪ್ಲೆಸಿಸ್ (42, 35 ಎಸೆತ) ಹಾಗೂ ಸುರೇಶ್ ರೈನಾ ಅವರ ಆಲ್‌ರೌಂಡ್ ಆಟದ ಶ್ರಮ ವ್ಯರ್ಥವಾಗಲಿಲ್ಲ. ಜೊತೆಗೆ ಈ ತಂಡದ ಬೌಲರ್‌ಗಳ ಪ್ರಯತ್ನವನ್ನು ಮರೆಯುವಂತಿಲ್ಲ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ನೀಡಿದ 161 ರನ್‌ಗಳ ಗುರಿಗೆ ಉತ್ತರವಾಗಿ ಡೆಕ್ಕನ್ ಚಾರ್ಜರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗಳಿಸಿದ್ದು 150 ರನ್.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೂಪರ್ ಕಿಂಗ್ಸ್ ಮುರಳಿ ವಿಜಯ್ ಅವರ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಪ್ಲೆಸಿಸ್‌ಗೆ ಜೊತೆಯಾದ ರೈನಾ  (32, 24 ಎ, 2 ಬೌಂ, 2ಸಿಕ್ಸರ್) ಕೇವಲ 44 ಎಸೆತಗಳಲ್ಲಿ 64 ರನ್ ಕಲೆ ಹಾಕಿದರು. ದೋನಿ ಕೂಡ ಬಿರುಸಾಗಿಯೇ ಬ್ಯಾಟ್ ಬೀಸಿದರು. 28 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ 34 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಕೊನೆಯ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದ ಡ್ವೇನ್ ಬ್ರಾವೊ (ಔಟಾಗದೆ 12, 4ಎ, 1ಸಿ.) ಸೊಗಸಾದ ಸಿಕ್ಸರ್ ಎತ್ತಿದರು.

ಸ್ಕೋರ್ ವಿವರ:

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160
ಫಾಪ್ ಡು ಪ್ಲೆಸಿಸ್ ಸಿ ಶಿಖರ್ ಧವನ್ ಬಿ ಪ್ರತಾಪ್ ಸಿಂಗ್  42
ಮುರಳಿ ವಿಜಯ್ ಸಿ ಅಮಿತ್ ಮಿಶ್ರಾ ಬಿ ಪ್ರತಾಪ್‌ಸಿಂಗ್  14
ಸುರೇಶ್ ರೈನಾ ಸಿ ಅಭಿಷೇಕ್ ಜುಂಜನ್‌ವಾಲಾ ಬಿ ಅಮಿತ್ ಮಿಶ್ರಾ  32
ದೋನಿ ಬಿ ಡೇನಿಯಲ್ ಕ್ರಿಸ್ಟಿಯನ್  34
ಅಲ್ಬಿ ಮಾರ್ಕೆಲ್ ಬಿ ಜುಂಜನ್‌ವಾಲಾ 13
ಜಡೇಜ ಸಿ ಸಂಗಕ್ಕಾರ ಬಿ ಆಶಿಶ್ ರೆಡ್ಡಿ  04
ಡ್ವೇನ್ ಬ್ರಾವೊ ಔಟಾಗದೆ  12
ಎಸ್. ಬದರೀನಾಥ್ ಔಟಾಗದೆ  01
ಇತರೆ: (ಲೆಗ್ ಬೈ-5, ವೈಡ್-2, ನೋ ಬಾಲ್-1)  08
ವಿಕೆಟ್ ಪತನ: 1-15 (ವಿಜಯ್; 2.2), 2-79 (ರೈನಾ; 9.4), 3-109  (ಪ್ಲೆಸಿಸ್; 13.1), 4-124   (ಮಾರ್ಕೆಲ್; 14.6), 5-142 (ಜಡೇಜ; 18.4), 6-147 (ದೋನಿ; 19.1).
ಬೌಲಿಂಗ್ ವಿವರ: ಅಂಕಿತ್ ಶರ್ಮ 2-0-13-0, ಡೇಲ್ ಸ್ಟೈನ್ 4-0-25-0, ವೀರ ಪ್ರತಾಪ ಸಿಂಗ್ 3-0-35-2, ಡೇನಿಯಲ್ ಕ್ರಿಸ್ಟಿಯನ್ 4-0-35-1, ಅಭಿಷೇಕ್ ಜುಂಜನವಾಲಾ 3-0-13-1, ಅಮಿತ್ ಮಿಶ್ರಾ 2-0-18-1, ಆಶಿಶ್ ರೆಡ್ಡಿ 2-0-16-1.
ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 150
ಪಾರ್ಥಿವ್ ಪಟೇಲ್ ಬಿ ಮಾರ್ಕೆಲ್  01
ಶಿಖರ್ ಧವನ್ ರನ್‌ಔಟ್ (ಬ್ರಾವೊ)  36
ವೈಟ್ ರನ್‌ಔಟ್ (ಜಡೇಜಾ/ದೋನಿ) 77
ಸಂಗಕ್ಕಾರ ಸಿ ಅಂಡ್ ಬಿ ರೈನಾ  01
ಡೇನಿಯಲ್ ಕ್ರಿಸ್ಟಿಯನ್ ಔಟಾಗದೆ  27
ಆಶಿಶ್  ಸಿ ವಿಜಯ್ ಬಿ ಹಿಲ್ಫೆನ್ಹಾಸ್  03
ಅಭಿಷೇಕ್ ಜುಂಜನವಾಲಾ ಔಟಾಗದೆ  01
ಇತರೆ (ಲೆಗ್‌ಬೈ-2, ವೈಡ್-2)  04
ವಿಕೆಟ್ ಪತನ: 1-9 (ಪಟೇಲ್; 1.4); 2-77 (ಧವನ್; 10.4); 3-85 (ಸಂಗಕ್ಕಾರ; 11.6); 4-135 (ವೈಟ್; 18.3); 5-148 (ಆಶಿಶ್; 19.4)
ಬೌಲಿಂಗ್: ಬೆನ್ ಹಿಲ್ಫೆನ್ಹಾಸ್ 4-0-31-1, ಅಲ್ಬಿ ಮಾರ್ಕೆಲ್ 3-0-16-1, ಡ್ವೇನ್ ಬ್ರಾವೊ 4-0-35-0 (ವೈಡ್-1), ಆರ್.ಅಶ್ವಿನ್ 3-0-19-0 (ವೈಡ್-1), ಶದಾಬ್ ಜಕಾತಿ 2-0-17-0, ಸುರೇಶ್ ರೈನಾ 1-0-5-1, ರವೀಂದ್ರ ಜಡೇಜಾ 3-0-25-0
ಫಲಿತಾಂಶ: ಸೂಪರ್ ಕಿಂಗ್ಸ್‌ಗೆ 10 ರನ್‌ಜಯ. ಪಂದ್ಯಶ್ರೇಷ್ಠ: ಸುರೇಶ್ ರೈನಾ.                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT