ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಕಿಂಗ್ಸ್‌ಗೆ ಜಯ

Last Updated 10 ಏಪ್ರಿಲ್ 2013, 20:16 IST
ಅಕ್ಷರ ಗಾತ್ರ

ಮೊಹಾಲಿ: ಆರಂಭಿಕ ಆಟಗಾರರಾದ ಮೈಕ್ ಹಸ್ಸಿ (86, 54 ಎಸೆತ, 11 ಬೌಂ, 2 ಸಿಕ್ಸರ್) ಮತ್ತು ಮುರಳಿ ವಿಜಯ್ (50, 50 ಎಸೆತ, 3 ಬೌಂ, 1 ಸಿಕ್ಸರ್) ಅವರ ಅಜೇಯ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು.

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸೂಪರ್ ಕಿಂಗ್ಸ್ 10 ವಿಕೆಟ್‌ಗಳಿಂದ   ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 19.5 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟಾಯಿತು. ಈ ಮೊತ್ತ ಸೂಪರ್ ಕಿಂಗ್ಸ್‌ಗೆ ಸವಾಲಾಗಿ ಕಾಣಲೇ ಇಲ್ಲ. 17.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ತಲುಪಿತು.

ಹಸ್ಸಿ ಮತ್ತು ವಿಜಯ್ ಅಮೋಘ ಜೊತೆಯಾಟದ ಮೂಲಕ ತಂಡದ ಸುಲಭ ಗೆಲುವಿಗೆ ಕಾರಣರಾದರು. ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಹಸ್ಸಿ ಬಳಿಕ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಈ ಜೊತೆಯಾಟವನ್ನು ಮುರಿಯಲು   ಕಿಂಗ್ಸ್ ಇಲೆವೆನ್ ಬೌಲರ್‌ಗಳಿಗೆ ಸಾಧ್ಯವಾಗಲೇ ಇಲ್ಲ.

ಸಾಧಾರಣ ಮೊತ್ತ: ಮೊದಲು ಬ್ಯಾಟ್ ಮಾಡಿದ ಪಂಜಾಬ್‌ನ ತಂಡ ಸವಾಲಿನ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮನ್‌ದೀಪ್ ಸಿಂಗ್ ಹಾಗೂ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ ತಲಾ ಒಂಬತ್ತು ರನ್‌ಗಳನ್ನು ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಗಿಲ್‌ಕ್ರಿಸ್ಟ್ ಪಡೆ ಸಾಕಷ್ಟು ಹೋರಾಟ ನಡೆಸಬೇಕಾಯಿತು.

ಡೇವಿಡ್ ಹಸ್ಸಿ (41, 36ಎಸೆತ, 4ಬೌಂಡರಿ, 1 ಸಿಕ್ಸರ್) ಹಾಗೂ ಗುರುಕೀರತ್ ಸಿಂಗ್  (31, 26ಎಸೆತ, 3ಬೌಂಡರಿ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 43 ಎಸೆತಗಳಲ್ಲಿ 56 ರನ್‌ಗಳನ್ನು ಗಳಿಸಿ ತಂಡಕ್ಕೆ ಚೇತರಿಕೆ ನೀಡಿತು. ಇಲ್ಲವಾದರೆ, ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ 100 ರನ್‌ಗಳ ಒಳಗೆ ಆಲೌಟ್ ಆಗುತ್ತಿತ್ತು.

ಆರಂಭಿಕ ಆಘಾತದಿಂದ ಡೇವಿಡ್ ಹಾಗೂ ಗುರುಕೀರತ್ ತಂಡಕ್ಕೆ ಚೇತರಿಕೆ ನೀಡಿದರಾದರೂ, ಆ ಬಳಿಕ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತ ಮುಟ್ಟಲಿಲ್ಲ. ಅಜರ್ ಮಹಮ್ಮೂದ್ (8), ರಾಜಗೋಪಾಲ್ ಸತೀಶ್ (8), ಪಿಯೂಷ್ ಚಾವ್ಲಾ (4), ಪ್ರವೀಣ್ ಕುಮಾರ್ (3) ಹಾಗೂ ಪರ್ವಿಂದರ್ ಅವಾನಾ (ಔಟಾಗದೆ 1) ಗಳಿಸಿದರೆ,  ರ‍್ಯಾನ್ ಹ್ಯಾರಿಸ್ `ಸೊನ್ನೆ' ಸುತ್ತಿದರು.

ಬೌಲರ್‌ಗಳ ಮಿಂಚು: ಸೂಪರ್ ಕಿಂಗ್ಸ್ ತಂಡದ ವೇಗಿ ಡಿರ್ಕ್ ನ್ಯಾನಸ್ (17ಕ್ಕೆ2),  ಕ್ರಿಸ್ ಮೊರೆಸ್ (27ಕ್ಕೆ2) ಮತ್ತು ಡ್ವೇನ್ ಬ್ರಾವೊ (27ಕ್ಕೆ3) ಪ್ರಭಾವಿ ಬೌಲಿಂಗ್ ಮೂಲಕ ಗಮನ ಸೆಳೆದರು.

                                                     ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 19.5 ಓವರ್‌ಗಳಲ್ಲಿ 138

ಮನ್‌ದೀಪ್ ಸಿಂಗ್ ಸಿ ಬ್ರಾವೊ ಬಿ ಡಿರ್ಕ್ ನ್ಯಾನಸ್  09
ಆ್ಯಡಮ್ ಗಿಲ್‌ಕ್ರಿಸ್ಟ್ ಸಿ ಹಸ್ಸಿ ಬಿ ಡಿರ್ಕ್ ನ್ಯಾನಸ್  09
ಮನನ್ ವೊಹ್ರಾ ಸಿ ಹಸ್ಸಿ ಬಿ ರವೀಂದ್ರ ಜಡೇಜಾ  16
ಡೇವಿಡ್ ಹಸ್ಸಿ ಸಿ ಬ್ರಾವೊ ಬಿ ಆರ್. ಅಶ್ವಿನ್  41
ಗುರುಕೀರತ್ ಸಿಂಗ್ ಸಿ ಡಿರ್ಕ್ ನ್ಯಾನಸ್ ಬಿ ಬ್ರಾವೊ  31
ಅಜರ್ ಮಹಮ್ಮೂದ್ ಸಿ ಅಶ್ವಿನ್ ಬಿ ಕ್ರಿಸ್ ಮೊರಿಸ್  08
ರಾಜಗೋಪಾಲ್ ಸತೀಶ್ ಸಿ ಮೊರಿಸ್ ಬಿ ಬ್ರಾವೊ  08
ಪಿಯೂಷ್ ಚಾವ್ಲಾ ಸಿ ಮುರಳಿ ವಿಜಯ್ ಬಿ ಬ್ರಾವೊ  04
ರ‌್ಯಾನ್ ಹ್ಯಾರಿಸ್ ಸಿ ಬ್ರಾವೊ ಬಿ ಕ್ರಿಸ್ ಮೊರಿಸ್  00
ಪ್ರವೀಣ್ ಕುಮಾರ್ ರನ್ ಔಟ್ (ದೋನಿ)  03
ಪರ್ವಿಂದರ್ ಅವಾನಾ ಔಟಾಗದೆ  01
ಇತರೆ: (ಲೆಗ್ ಬೈ-6, ವೈಡ್-2)  08
ವಿಕೆಟ್ ಪತನ: 1-19 (ಗಿಲ್‌ಕ್ರಿಸ್ಟ್; 2.3), 2-20 (ಮನ್‌ದೀಪ್; 2.5), 3-50 (ವೊಹ್ರಾ; 6.6), 4-106 (ಹಸ್ಸಿ; 14.1), 5-116 (ಗುರುಕೀರತ್; 15.1), 6-127 (ಅಜರ್; 16.4), 7-133 (ಸತೀಶ್; 17.2), 8-133 (ಚಾವ್ಲಾ; 17.5), 9-134 (ಹ್ಯಾರಿಸ್; 18.2), 10-138 (ಪ್ರವೀಣ್;19.5).
ಬೌಲಿಂಗ್: ಡಿರ್ಕ್ ನ್ಯಾನಸ್ 3.5-0-17-2, ಅಂಕಿತ್ ರಜಪೂತ್ 1-0-10-0, ಕ್ರಿಸ್ ಮೊರಿಸ್ 4-0-27-2, ರವೀಂದ್ರ ಜಡೇಜಾ 4-0-29-1, ಬ್ರಾವೊ 4-0-27-3, ಅಶ್ವಿನ್ 3-0-22-1

ಚೆನ್ನೈ ಸೂಪರ್ ಕಿಂಗ್ಸ್ 17.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 139
ಮುರಳಿ ವಿಜಯ್ ಔಟಾಗದೆ  50
ಮೈಕ್ ಹಸ್ಸಿ ಔಟಾಗದೆ  86
ಇತರೆ: (ಲೆಗ್ ಬೈ-1, ವೈಡ್-2)  03
ಬೌಲಿಂಗ್: ಪ್ರವೀಣ್ ಕುಮಾರ್ 2.2-0-18-0, ರ‌್ಯಾನ್ ಹ್ಯಾರಿಸ್ 4-0-30-0, ಅಜರ್ ಮಹಮ್ಮೂದ್ 4-0-34-0, ಪರ್ವಿಂದರ್ ಅವಾನಾ 2-0-20-0, ಪಿಯೂಷ್ ಚಾವ್ಲಾ 4-0-21-0, ರಾಜಗೋಪಾಲ ಸತೀಶ್ 1-0-15-0.

ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 10 ವಿಕೆಟ್ ಗೆಲುವು
ಪಂದ್ಯ ಶ್ರೇಷ್ಠ: ಮೈಕ್ ಹಸ್ಸಿ




 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT