ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಕಿಂಗ್ಸ್‌ಗೆ ಮಣಿದ ರೈಡರ್ಸ್

ಗಂಭೀರ್ ಬಳಗಕ್ಕೆ ಮತ್ತೊಂದು ಸೋಲು; ಮಿಂಚಿದ ರವೀಂದ್ರ ಜಡೇಜ
Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ರವೀಂದ್ರ ಜಡೇಜ ತೊರಿದ ಆಲ್‌ರೌಂಡ್ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುಂದರ ಗೆಲುವು. ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಶನಿವಾರ ಮಹೇಂದ್ರ ಸಿಂಗ್ ದೋನಿ ಬಳಗ ಕೋಲ್ಕತ್ತ ನೈಟ್ ರೈಡರ್ಸ್ ಎದುರು ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗೌತಮ್ ಗಂಭೀರ್ ನೇತೃತ್ವದ ರೈಡರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 119 ರನ್ ಪೇರಿಸಿತು. ಸೂಪರ್ ಕಿಂಗ್ಸ್ 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 124 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ಮೊದಲು ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿ 20 ರನ್‌ಗಳಿಗೆ ಮೂರು ವಿಕೆಟ್ ಪಡೆದಿದ್ದ ಜಡೇಜ ಆ ಬಳಿಕ ಬ್ಯಾಟಿಂಗ್‌ನಲ್ಲೂ ತಮ್ಮ ಪ್ರಭುತ್ವ ತೋರಿ ಗೆಲುವಿನ ರೂವಾರಿ ಎನಿಸಿಕೊಂಡರು. 14 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ ಅಜೇಯ 36 ರನ್ ಗಳಿಸಿದ ಜಡೇಜ ಅರ್ಹವಾಗಿ `ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರು.

ಸುಲಭ ಗುರಿ ಮುಂದಿದ್ದರೂ ಸೂಪರ್ ಕಿಂಗ್ಸ್ ಗೆಲುವಿಗಾಗಿ ಸಾಕಷ್ಟು ಪರಿಶ್ರಮಪಟ್ಟಿತು. ಮೈಕ್ ಹಸ್ಸಿ (40, 51 ಎಸೆತ) ಜೊತೆ ಇನಿಂಗ್ಸ್ ಆರಂಭಿಸಿದ ಆರ್. ಅಶ್ವಿನ್ (11) ಹೆಚ್ಚುಹೊತ್ತು ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸಿದ ಕಾರಣ 16ನೇ ಓವರ್ ವೇಳೆಗೆ ತಂಡ ಐದು ವಿಕೆಟ್‌ಗೆ 71 ರನ್ ಗಳಿಸಿತ್ತು.

ಕೊನೆಯ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳು ಬೇಕಿದ್ದವು. ಈ ಹಂತದಲ್ಲಿ ಜಡೇಜ ತಂಡದ ರಕ್ಷಣೆಗೆ ನಿಂತರು. ಭರ್ಜರಿ ಆಟದ ಮೂಲಕ ರನ್‌ವೇಗ ಹೆಚ್ಚಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ 17 ರನ್‌ಗಳ ಅವಶ್ಯಕತೆಯಿತ್ತು. ಕಾಲಿಸ್ ಎಸೆದ 19ನೇ ಓವರ್‌ನಲ್ಲಿ ಜಡೇಜ ಮತ್ತು ಬ್ರಾವೊ 15ರನ್ ಕಲೆಹಾಕಿ ಅಂತಿಮ ಓವರ್‌ನಲ್ಲಿ ಒತ್ತಡ ಎದುರಾಗದಂತೆ ನೋಡಿಕೊಂಡರು.

ಪಠಾಣ್ ಎಸೆದ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಚೆಂಡನ್ನು ಡೀಪ್ ಮಿಡ್‌ವಿಕೆಟ್ ಕಡೆ ಸಿಕ್ಸರ್‌ಗೆ ಅಟ್ಟುವ ಮೂಲಕ ಜಡೇಜ ತಂಡಕ್ಕೆ ಗೆಲುವು ತಂದಿತ್ತರು.

ಉತ್ತಮ ಆರಂಭ, ಹಠಾತ್ ಕುಸಿತ: ನೈಟ್ ರೈಡರ್ಸ್ ತಂಡ ಉತ್ತಮ ಆರಂಭದ ಲಾಭ ಎತ್ತಿಕೊಳ್ಳುವಲ್ಲಿ ಮತ್ತೊಮ್ಮೆ ಎಡವಿತು. ಗೌತಮ್ ಗಂಭೀರ್ ಜೊತೆ ಇನಿಂಗ್ಸ್ ಆರಂಭಿಸಿದ್ದು ಯೂಸುಫ್ ಪಠಾಣ್. ಇವರಿಬ್ಬರು ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 46 ರನ್ ಸೇರಿಸಿದರು.

ಮೊದಲು ಪೆವಿಲಿಯನ್‌ಗೆ ಮರಳಿದ್ದು ಗಂಭೀರ್ (25, 19 ಎಸೆತ). ಆ ಬಳಿಕ ಪಟಪಟನೆ ವಿಕೆಟ್‌ಗಳು ಬಿದ್ದವು. ವಿಕೆಟ್ ನಷ್ಟವಿಲ್ಲದೆ 46 ರನ್ ಗಳಿಸಿದ್ದ ತಂಡದ ಮೊತ್ತ 55 ಆಗುವಷ್ಟರಲ್ಲಿ ನಾಲ್ಕು ವಿಕೆಟ್‌ಗಳು ಪತನಗೊಂಡಿದ್ದವು. ಈ ಆಘಾತದಿಂದ ತಂಡಕ್ಕೆ ಚೇತರಿಸಿಕೊಳ್ಳಲು ಆಗಲೇ ಇಲ್ಲ. ದೇವವ್ರತ ದಾಸ್ 19 ರನ್‌ಗಳ ಕೊಡುಗೆ ನೀಡಿದರು. ಜಡೇಜಗೆ ಉತ್ತಮ ಸಾಥ್ ನೀಡಿದ ಅಶ್ವಿನ್ 21 ರನ್ ನೀಡಿ ಎರಡು ವಿಕೆಟ್ ಪಡೆದುಕೊಂಡರು.

ಸ್ಕೋರು ವಿವರ
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 119

ಗೌತಮ್ ಗಂಭೀರ್ ಸಿ ಹಸ್ಸಿ ಬಿ ಕ್ರಿಸ್ ಮಾರಿಸ್  25
ಯೂಸುಫ್ ಪಠಾಣ್ ರನೌಟ್  25
ಜಾಕ್ ಕಾಲಿಸ್ ರನೌಟ್  00
ಎಯೊನ್ ಮಾರ್ಗನ್ ಸಿ ಜಡೇಜ ಬಿ ಡ್ವೇನ್ ಬ್ರಾವೊ  02
ಮನೋಜ್ ತಿವಾರಿ ಸಿ ಶರ್ಮ ಬಿ ಆರ್. ಅಶ್ವಿನ್  13
ದೇವವ್ರತ ದಾಸ್ ಎಲ್‌ಬಿಡಬ್ಲ್ಯು ಬಿ ಆರ್. ಅಶ್ವಿನ್  19
ರಜತ್ ಭಾಟಿಯಾ ಸಿ ಮತ್ತು ಬಿ ರವೀಂದ್ರ ಜಡೇಜ  01
ಲಕ್ಷ್ಮಿರತನ್ ಶುಕ್ಲಾ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜ  01
ಸಚಿತ್ರ ಸೇನನಾಯಕೆ ಔಟಾಗದೆ  07
ಸುನಿಲ್ ನಾರಾಯಣ್ ಸಿ ಶರ್ಮ ಬಿ ರವೀಂದ್ರ ಜಡೇಜ  13
ಲಕ್ಷ್ಮಿಪತಿ ಬಾಲಾಜಿ ಔಟಾಗದೆ  09
ಇತರೆ: (ಲೆಗ್‌ಬೈ-3, ವೈಡ್-1)  04
ವಿಕೆಟ್ ಪತನ: 1-46 (ಗಂಭೀರ್; 5.5), 2-47 (ಕಾಲಿಸ್; 6.1), 3-50 (ಮಾರ್ಗನ್; 7.4), 4-55 (ಪಠಾಣ್; 7.6), 5-82 (ದಾಸ್; 12.4), 6-89 (ತಿವಾರಿ; 14.1), 7-90 (ಭಾಟಿಯಾ; 15.3), 8-91 (ಶುಕ್ಲಾ; 15.5), 9-107 (ನಾರಾಯಣ್; 17.3)
ಬೌಲಿಂಗ್: ಅಲ್ಬಿ ಮಾರ್ಕೆಲ್ 4-0-36-0, ಮೋಹಿತ್ ಶರ್ಮ 3-0-13-0, ಕ್ರಿಸ್ ಮಾರಿಸ್ 3-0-12-1, ಡ್ವೇನ್ ಬ್ರಾವೊ 2-0-14-1, ಆರ್. ಅಶ್ವಿನ್ 4-1-21-2, ರವೀಂದ್ರ ಜಡೇಜ 4-0-20-3

ಚೆನ್ನೈ ಸೂಪರ್ ಕಿಂಗ್ಸ್: 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 124
ಮೈಕ್ ಹಸ್ಸಿ ಸಿ ಪಠಾಣ್ ಬಿ ಲಕ್ಷ್ಮಿಪತಿ ಬಾಲಾಜಿ  40
ಆರ್. ಅಶ್ವಿನ್ ಸಿ ಸೇನನಾಯಕೆ ಬಿ ಸುನಿಲ್ ನಾರಾಯಣ್  11
ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಬಿ ಸಚಿತ್ರ ಸೇನನಾಯಕೆ  02
ಸುರೇಶ್ ರೈನಾ ಸಿ ಸುನಿಲ್ ಬಿ ಯೂಸುಫ್ ಪಠಾಣ್  07
ಮಹೇಂದ್ರ ಸಿಂಗ್ ದೋನಿ ರನೌಟ್ 09
ಎಸ್. ಬದರೀನಾಥ್ ಬಿ ಜಾಕ್ ಕಾಲಿಸ್  06
ರವೀಂದ್ರ ಜಡೇಜ ಔಟಾಗದೆ  36
ಡ್ವೇನ್ ಬ್ರಾವೊ ಔಟಾಗದೆ  07
ಇತರೆ: (ಬೈ-1, ಲೆಗ್‌ಬೈ-4, ವೈಡ್-1)  06
ವಿಕೆಟ್ ಪತನ: 1-24 (ಅಶ್ವಿನ್; 4.3), 2-31 (ವಿಜಯ್; 7.2), 3-40 (ರೈನಾ; 8.6), 4-54 (ದೋನಿ; 11.3), 5-71 (ಬದರೀನಾಥ್; 15.3), 6-89 (ಹಸ್ಸಿ; 16.5)
ಬೌಲಿಂಗ್: ಲಕ್ಷ್ಮಿಪತಿ ಬಾಲಾಜಿ 4-0-28-1, ಸಚಿತ್ರ ಸೇನನಾಯಕೆ 4-0-18-1, ಸುನಿಲ್ ನಾರಾಯಣ್ 4-0-20-1, ಯೂಸುಫ್ ಪಠಾಣ್ 1.1-0-9-1, ರಜತ್ ಭಾಟಿಯಾ 2-0-12-0, ಜಾಕ್ ಕಾಲಿಸ್ 4-0-32-1
ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 4 ವಿಕೆಟ್ ಜಯ, ಪಂದ್ಯಶ್ರೇಷ್ಠ: ಜಡೇಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT