ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಕಿಂಗ್ಸ್‌ಗೆ ಮತ್ತೊಂದು ಸೋಲು

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೇಪ್‌ಟೌನ್: ಚೆನ್ನೈ ಸೂಪರ್ ಕಿಂಗ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಸೋಲಿನ ಆಘಾತಕ್ಕೆ ಒಳಗಾಗಿದ್ದಾರೆ. ಈ ಕಾರಣ ಈ ತಂಡದ ಸೆಮಿಫೈನಲ್ ಹಾದಿ ತುಂಬಾ ಕಷ್ಟದಿಂದ ಕೂಡಿದೆ.

ಮಂಗಳವಾರ ರಾತ್ರಿ ನಡೆದ `ಬಿ~ ಗುಂಪಿನ ಪಂದ್ಯದಲ್ಲಿ ಹೈವೆಲ್ಡ್   ಲಯನ್ಸ್ ತಂಡದವರು ಆರು ವಿಕೆಟ್‌ಗಳಿಂದ ಎಂ.ಎಸ್.ದೋನಿ ಸಾರಥ್ಯದ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದರು. ಸೂಪರ್ ಕಿಂಗ್ಸ್ ನೀಡಿದ 159 ರನ್‌ಗಳ ಗುರಿಯನ್ನು ಲಯನ್ಸ್ 19.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ಈ ತಂಡಕ್ಕೆ ಲಭಿಸಿದ ಸತತ ಎರಡನೇ ಜಯವಿದು.

ಲಯನ್ ಬೋದಿ (64; 46 ಎಸೆತ) ಹಾಗೂ ಜೀನ್ ಸೈಮ್ಸ (ಔಟಾಗದೆ 39; 23 ಎ.) ಲಯನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು.

ಮೊದಲು ಬ್ಯಾಟ್ ಮಾಡಿದ್ದ ಸೂಪರ್ ಕಿಂಗ್ಸ್ ತಂಡದ ನಾಯಕ ದೋನಿ (34; 26 ಎಸೆತ) ಗರಿಷ್ಠ ಸ್ಕೋರರ್ ಎನಿಸಿದರು. ಕೊನೆಯಲ್ಲಿ ಎಸ್.ಬದರೀನಾಥ್ (27; 14 ಎ.) ಗುಡುಗಿದರು. ಆದರೆ ಈ ತಂಡ ಗಳಿಸಿದ ಮೊತ್ತ ಸಾಕಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್:

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 (ಫಾಫ್ ಡು ಪ್ಲೆಸಿಸ್ 25, ಮುರಳಿ ವಿಜಯ್ 22, ಸುರೇಶ್ ರೈನಾ 20, ಎಂ.ಎಸ್.ದೋನಿ 34, ರವೀಂದ್ರ ಜಡೇಜಾ 21, ಎಸ್.ಬದರೀನಾಥ್ ಔಟಾಗದೆ 27; ಆ್ಯರನ್ ಫಾಂಗಿಸೊ 17ಕ್ಕೆ2); ಹೈವೆಲ್ಡ್ ಲಯನ್ಸ್: 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 (ಗುಲಾಮ್ ಬೋದಿ 64, ನೀಲ್ ಮೆಕೆಂಜಿ 32, ಜೀನ್ ಸೈಮ್ಸ ಔಟಾಗದೆ 39; ಡಗ್ ಬೋಲಿಂಜರ್ 18ಕ್ಕೆ2).
ಫಲಿತಾಂಶ: ಲಯನ್ಸ್‌ಗೆ 6 ವಿಕೆಟ್‌ಗಳ ಜಯ. ಪಂದ್ಯ ಶ್ರೇಷ್ಠ: ಆ್ಯರನ್ ಫಾಂಗಿಸೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT