ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಮಾಮ್ 2015

Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಮಂತ್ರಿ ಸ್ಕ್ವೇರ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಸೂಪರ್  ಮಾಮ್ 2015’ ಸೌಂದರ್ಯ ಸ್ಪರ್ಧೆಯಲ್ಲಿ ವಸ್ತ್ರ ವಿನ್ಯಾಸಕಿ ದೀಪಿಕಾ ಎಸ್. ವಿಜೇತರಾಗಿ ಹೊರಹೊಮ್ಮಿದರು. ಮಾತೃತ್ವವನ್ನು ಸಂಭ್ರಮಿಸಲು ಮತ್ತು ಜಗತ್ತಿಗೆ ತಾಯಿಯ ಅಪಾರ ಕೊಡುಗೆಯನ್ನು ನೆನಪಿಸಲು ಸಂಘಟಿಸಲಾಗಿದ್ದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸುಮಾರು ಒಂದು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದವು.

ಹಲವಾರು ರೀತಿಯ ಪ್ರಕ್ರಿಯೆಗಳ ನಂತರ ಅವುಗಳಲ್ಲಿ 300 ಅರ್ಜಿಗಳನ್ನು ಆಯ್ಕೆ ಮಾಡಲಾಗಿತ್ತು. ಅವುಗಳಲ್ಲಿ ವಿವಿಧ ಚಟುವಟಿಕೆಗಳು ಮತ್ತು ಕಾರ್ಯಾಗಾರಗಳ ಮೂಲಕ ಮತ್ತೆ 50 ಜನರನ್ನು ಆಯ್ಕೆ ಮಾಡಲಾಯಿತು. ಟಾಪ್ 16 ಸ್ಪರ್ಧಿಗಳು ‘ಸೂಪರ್ ಮಾಮ್’  ಅಂತಿಮ ಸುತ್ತಿನಲ್ಲಿ ಹೆಜ್ಜೆ ಹಾಕಿದರು.

ಬೆಂಗಳೂರಿನ ಸೂಪರ್ ಮಾಮ್ ಆಗಿ ದೀಪಿಕಾ ಎಸ್. ಆಯ್ಕೆಯಾದರೆ, ರಜನಿ ಪಿಳ್ಳೈ ಹಾಗೂ ಪ್ರಿಯಾಂಕಾ ಅಭಿಷೇಕ್ ಕ್ರಮವಾಗಿ ಮೊದಲ ರನ್ನರ್ ಅಪ್ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT