ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಯೆಜ್ ದುರಂತ: ನಿರ್ಮಾಣ ದೋಷ ಕಾರಣ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಾಸ್ಕೊ (ಪಿಟಿಐ): ಸೂಯಜ್ ಎಸ್‌ಎಲ್‌ವಿ ಬಾಹ್ಯಾಕಾಶ ನೌಕೆಯ ದುರಂತಕ್ಕೆ ನಿರ್ಮಾಣ ದೋಷವೇ ಕಾರಣ ಎಂದು ಪತ್ತೆಹಚ್ಚಲಾಗಿದೆ.ಆಗಸ್ಟ್ 24ರಂದು ದುರಂತಕ್ಕೀಡಾದ ಈ ನೌಕೆಯ ಎಂಜಿನ್‌ಗೆ ಉಡ್ಡಯನ ವೇಳೆಯಲ್ಲಿ ಸಮರ್ಪಕವಾಗಿ ಇಂಧನ ಪೂರೈಕೆಯಾಗಿಲ್ಲ. ಈ ವೈಫಲ್ಯದಿಂದಾಗಿ ನೌಕೆಯು ದುರಂತಕ್ಕೊಳಗಾಗಿದೆ ಎಂದು ಈ ಸಂಬಂಧ ತನಿಖೆ ಕೈಗೊಂಡಿದ್ದ ವಿಶೇಷ ಆಯೋಗವು ತಿಳಿಸಿದೆ.

ನೌಕೆಯು ಉಡ್ಡಯನಗೊಂಡ ವೇಳೆ ಕ್ಷಿಪಣಿಯಿಂದ ಬೇರ್ಪಡಲು ಸಾಧ್ಯವಾಗದೆ ದುರಂತಕ್ಕೀಡಾಗಿ ದಕ್ಷಿಣ ಸೈಬೀರಿಯಾದ ಅಲ್ತಾಯಿ ರಿಪಬ್ಲಿಕ್ ಪ್ರದೇಶದಲ್ಲಿ ಧರೆಗುರುಳಿತ್ತು.ರಷ್ಯದ ಬಾಹ್ಯಾಕಾಶ ಇತಿಹಾಸದಲ್ಲಿ ಹಿಂದೆಂದೂ ಇಂತಹ ನಷ್ಟ ಸಂಭವಿಸಿರಲಿಲ್ಲ ಎಂದು ರಿಯೊ ನೊವೊಸ್ತಿ ಸುದ್ದಿಸಂಸ್ಥೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT