ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಜ್ ಪಾಂಚೋಲಿಗೆ ಜಾಮೀನು

Last Updated 1 ಜುಲೈ 2013, 10:02 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಲಿವುಡ್ ನಟಿ ಜಿಯಾಖಾನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆಕೆಯ ಗೆಳೆಯ ಸೂರಜ್ ಪಾಂಚೋಲಿಗೆ ಬಾಂಬೆ ಹೈಕೋರ್ಟ್ ಸೋಮವಾರ ಷರತ್ತುಬದ್ದ ಜಾಮೀನು ನೀಡಿದೆ.

ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಜಾದವ್ ಅವರು ` ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು ಒಂದು ದುರಾದೃಷ್ಟ ಘಟನೆ. ಇದರ ಹೊಣೆಯನ್ನು ಆ ಯುವಕನ ಮೇಲೆ ಹೊರಿಸಲಾಗದು ಎಂದು ಅವರು ಅಭಿಪ್ರಾಯಪಟ್ಟರು.

ಸೂರಜ್‌ಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ. ವಿದೇಶಕ್ಕೆ ತೆರಳದಂತೆ ನ್ಯಾಯಾಲಯ ಸೂಚಿಸಿದೆ. 50.000 ರೂಪಾಯಿಯ ಬಾಂಡ್ ಇರಿಸಿಕೊಳ್ಳಲಾಗಿದೆ.

ಕಳೆದ ಜೂನ್ 10ರಂದು ಸೂರಜ್‌ನನ್ನು ಬಂಧಿಸಲಾಗಿತ್ತು. ಈ ಹಿಂದೆ ಮುಂಬೈ ಜಿಲ್ಲಾ ಸ್ಥಳೀಯ ನ್ಯಾಯಾಲಯ ಸೂರಜ್‌ಗೆ ಜಾಮೀನು ನೀಡಲು ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT