ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲ ಕಲಾವಿದೆ

Last Updated 11 ಜನವರಿ 2011, 9:15 IST
ಅಕ್ಷರ ಗಾತ್ರ

ಒಂದೇ ಚಿತ್ರದಲ್ಲಿ ವಿವಿಧ ಅಭಿವ್ಯಕ್ತಿ, ಜನ ಜೀವನವನ್ನು ವೈವಿಧ್ಯ ಮಯವಾಗಿ ಬಿಂಬಿಸುವ ಚಿತ್ತಾರಗಳು. ಇದು ಯುವ ಕಲಾವಿದೆ ರಚನಾ ದಮಾಮ್ ಅವರ ಕಲಾಕೃತಿಗಳಲ್ಲಿ ಕಂಡು ಬರುವ ವಿಶೇಷ.

ಡೈರಿ ಸೀರಿಸ್ ಅಡಿಯಲ್ಲಿ ನಮ್ಮ ನಡುವಿನ ಜನರ ಸಾಮಾಜಿಕ ಜೀವನದ ಪ್ರಮುಖ ಘಟನೆಗಳನ್ನು ಚಿತ್ರರೂಪದಲ್ಲಿ ಕಟ್ಟಿಕೊಡುವ ಕೆಲಸವನ್ನು ದಮಾಮ್‌ಮಾಡುತ್ತಿದ್ದಾರೆ. ವರ್ಣ ವೈವಿಧ್ಯಗಳನ್ನು ಸಮರ್ಥವಾಗಿ ಬಳಸಿ ಅರಳಿರುವ ಕಲೆ, ವಿವಿಧ ಭಾವಗಳನ್ನು ತೋರ್ಪಡಿಸುವ ಕಲಾ ಕೃತಿಗಳು ಇವರ ಕಲಾ ಸೃಜನಶೀಲತೆಗೆ ಸಾಕ್ಷಿಯಾಗಿವೆ. ಕೋಲಾಜ್ ಮಾಧ್ಯಮದಲ್ಲಿನ ಪೇಪರ್ ಚಿತ್ರಕಲೆಯ ವಿನ್ಯಾಸ ಗಮನ ಸೆಳೆಯುವಂತಿದ್ದು ಇಲ್ಲಿ ಬಗೆ-ಬಗೆಯ ಕಲ್ಪನೆಗಳ ಚಿತ್ತಾರವನ್ನು ರೂಪಿಸಿದ್ದಾರೆ.   ಅಮೂರ್ತ ವಿಚಾರಗಳು ಸಹ ಇವರ ಕಲೆಯಲ್ಲಿ ಮೈದಳೆದಿವೆ. ಮಿಕ್ಸ್ ಮೀಡಿಯಾ, ಕ್ಯಾನ್‌ವಾಸ್, ಅಕ್ರಲಿಕ್, ವಾಟರ್ ಕಲರ್, ಗ್ಲಾಸ್ ಕಲರ್ ಸೇರಿದಂತೆ ವಿವಿಧ ಮಾಧ್ಯಮಗಳನ್ನು ಬಳಸಿದ್ದಾರೆ.

ಭಾರತ ಸರ್ಕಾರದ ಸಂಸ್ಕೃತಿ ಇಲಾಖೆ 2010ರ ಅಕ್ಟೋಬರ್‌ನಲ್ಲಿ ನಾಗಪುರದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿಗಳು ಇವರ ಕುಂಚ ನೈಪುಣ್ಯಕ್ಕೆ ಒಲಿದಿವೆ. ಬೆಂಗಳೂರಲ್ಲದೆ ಹೈದರಾಬಾದ್, ಇಟಲಿ, ಒಮನ್, ದುಬೈ, ಸಿಂಗಾಪುರ ಸೇರಿದಂತೆ ಹಲವು ಕಡೆಗಳಲ್ಲಿ ರಚನಾ ದಮಾಮ್ ಅವರ ಚಿತ್ರಕಲೆಗಳು ಪ್ರದರ್ಶನ ಕಂಡಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT