ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲ ಮನೋಭಾವ ಉತ್ತೇಜಿಸಲು ಸಲಹೆ

Last Updated 23 ಸೆಪ್ಟೆಂಬರ್ 2013, 10:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಸೃಜನಶೀಲ ಮನೋಭಾವನೆಯನ್ನು ಪ್ರಚೋದಿಸುವ ಮೂಲಕ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜು ಗೊಳಿಸ ಬೇಕು ಎಂದು ವಿಜ್ಞಾನ ಲೇಖಕ ಡಾ.ಎ .ಓ.ಆವಲಮೂರ್ತಿ ಹೇಳಿದರು.

ಇಲ್ಲಿನ ದೇವರಾಜ ಅರಸು ವ್ಯವ ಹಾರ ನಿರ್ವಹಣಾ ಮಹಾವಿದ್ಯಾಲ ಯದಲ್ಲಿ ನಡೆದ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರೇರಣಾ ಪೂರ್ವಭಾವಿ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಪಠ್ಯ ಶಿಕ್ಷಣದ ಜೊತೆಗೆ ಲೋಕ ಶಿಕ್ಷಣದ ಅಗತ್ಯವೂ ಹೆಚ್ಚಿದೆ. ನಿರಂತರ ಪರಿಶ್ರಮ, ಆಸಕ್ತಿ ಮತ್ತು ಆಲೋಚನಾ ಕ್ರಮಗಳ ನಿರ್ದಿಷ್ಟ ಚಿಂತನೆಗಳ ಪ್ರಚೋದನೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ದೃಢ ಸಂಕಲ್ಪವಿದ್ದರೆ ವ್ಯಕ್ತಿ ಏನನ್ನಾದರೂ ಸಾಧಿಸಬಹುದು ಎಂಬು ದಕ್ಕೆ ಹತ್ತು- ಹಲವು ಜ್ವಲಂತ ಉದಾ ಹರಣೆಗಳಿವೆ. ಅಂತಹ ವ್ಯಕ್ತಿತ್ವಗಳ ಪ್ರೇರಣೆ ಮತ್ತು ಆದರ್ಶದ ನೆರಳಿನಲ್ಲಿ ವ್ಯಕ್ತಿಗತ ಬೆಳವಣಿಗೆಗೆ ಒತ್ತು ನೀಡ ಬೇಕು.

ಆಡಳಿತ ವಲಯದ ಹಲವು ಹುದ್ದೆಗಳಿಗೆ ಅವಕಾಶ ಪಡೆಯಲು ಬೇಕಾದ ಮೂಲ ಪ್ರೇರಣೆಯನ್ನು ಸಮು ದಾಯದಿಂದಲೇ ಪಡೆಯಬಹುದು ಎಂದರು. ಕೊಂಗಾಡಿಯಪ್ಪ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ರಂಗಸ್ವಾಮಿ ಬೆಳಕವಾಡಿ ಮಾತ ನಾಡಿ, ಏಕಾಗ್ರತೆ ಮತ್ತು ಮಾನಸಿಕ ದೃಢತೆ ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯಲ್ಲಿ ಕಾಣಸಿಗುತ್ತವೆ. ಸಂಕಲ್ಪಕ್ಕೆ ಪೂರಕವಾದ ಅನನ್ಯ ಪರಿಶ್ರಮ ಎಲ್ಲ ಹಂತಗಳಲ್ಲೂ ಮುಖ್ಯ. ಅದಕ್ಕೆ ಪ್ರೇರಣೆ ನೀಡಿ ನಮ್ಮ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಅಣಿಗೊಳಿ ಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು
.
ಬೋಧಿವೃಕ್ಷ ಎಜುಕೇಶನಲ್ ಸಂಸ್ಥೆಯ ಪ್ರೊ.ಚಂದ್ರಪ್ಪ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಎಸ್‌ಡಿಯು ಐಎಂ ಶೈಕ್ಷಣಿಕ ಸಲಹೆಗಾರ ಪ್ರೊ.ಶ್ರೀನಿ ವಾಸನ್, ಪ್ರಭಾರ ಪ್ರಾಂಶು ಪಾಲ ಜೆ.ವಿ.ಚಂದ್ರಶೇಖರ್, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಕೆ.ಆರ್. ರವಿ ಕಿರಣ್, ಕನ್ನಡ ವಿಭಾಗದ ಮುಖ್ಯಸ್ಥ ಚಿಕ್ಕಣ್ಣ, ಸಹ ಪ್ರಾಧ್ಯಾಪಕಿ ಪಿ.ಚೈತ್ರಾ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ವೆಂಕಟರಾಜು, ಲಕ್ಷ್ಮೀ, ಎಸ್.ನಟ ರಾಜ್, ಜಿ.ಸಿ.ಶಿವಕುಮಾರ್ ಮತ್ತಿ ತರರು ಭಾಗವಹಿಸಿದ್ದರು.

ನಗರದ ಕನ್ನಡ ಜಾಗೖತ
ಪರಿಷತ್ತು ಟ್ರಸ್ಟ್ (ರಿ), ಬೋಧಿವೃಕ್ಷ ಎಜುಕೇಶ ನಲ್ ಅಂಡ್ ಚಾರಿಟಬಲ್ ಟ್ರಸ್ಟ್, ವಿಕಾಸ ಪ್ರಶಿಕ್ಷಣ ಕೇಂದ್ರ ಮತ್ತು ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT