ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 13 ರಿಂದ ಟ್ವೆಂಟಿ-20 ಚಾಂಪಿಯನ್ಸ್ ಲೀಗ್

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈ ಬಾರಿಯ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 13 ತಂಡಗಳು ಪಾಲ್ಗೊಳ್ಳಲಿವೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 9ರ ವರೆಗೆ ನಡೆಯುವ ಟೂರ್ನಿಯ ಪಂದ್ಯಗಳಿಗೆ ಬೆಂಗಳೂರು, ಕೋಲ್ಕತ್ತ ಮತ್ತು ಚೆನ್ನೈ ನಗರಗಳು ಆತಿಥ್ಯ ವಹಿಸಲಿವೆ.

ಟೂರ್ನಿಯ ಉದ್ಘಾಟನಾ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ. 23 ರಂದು ನಡೆಯಲಿದೆ. ಒಂದು ಸೆಮಿಫೈನಲ್ ಪಂದ್ಯಕ್ಕೂ ಈ ಕ್ರೀಡಾಂಗಣ ವೇದಿಕೆಯಾಗಲಿದೆ. ಇನ್ನೊಂದು ಸೆಮಿಫೈನಲ್ ಹಾಗೂ ಅ. 9 ರಂದು ನಡೆಯುವ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶ ಚೆನ್ನೈಗೆ ಲಭಿಸಿದೆ.

ಕಳೆದ ವರ್ಷದಂತೆ ಈ ವರ್ಷವೂ ಟೂರ್ನಿಯ ಪ್ರಧಾನ ಹಂತದಲ್ಲಿ ಹತ್ತು ತಂಡಗಳು ಪೈಪೋಟಿ ನಡೆಸಲಿವೆ. ಇದರಲ್ಲಿ ಏಳು ತಂಡಗಳು ನೇರವಾಗಿ ಪ್ರಧಾನ ಹಂತ ಪ್ರವೇಶಿಸಲಿವೆ. ಟೂರ್ನಿಗೆ ಮುನ್ನ ನಡೆಯುವ ಅರ್ಹತಾ ಹಂತದಲ್ಲಿ ಆರು ತಂಡಗಳು ಭಾಗವಹಿಸಲಿದ್ದು, ಮೊದಲ ಮೂರು ಸ್ಥಾನಗಳನ್ನು ಪಡೆಯುವವರಿಗೆ ಅರ್ಹತೆ ಲಭಿಸಲಿದೆ.

ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ರನ್ನರ್ ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೂರನೇ ಸ್ಥಾನ ಪಡೆದ ಮುಂಬೈ ಇಂಡಿಯನ್ಸ್, ಆಸ್ಟ್ರೇಲಿಯದ ಸೌತ್ ಆಸ್ಟ್ರೇಲಿಯನ್ ರೆಡ್‌ಬ್ಯಾಕ್ಸ್ ಮತ್ತು ನ್ಯೂ ಸೌತ್ ವೇಲ್ಸ್ ಬ್ಲೂಸ್, ದಕ್ಷಿಣ ಆಫ್ರಿಕಾದ ಕೇಪ್ ಕೋಬ್ರಾಸ್ ಹಾಗೂ ವಾರಿಯರ್ಸ್ ತಂಡಗಳು ನೇರವಾಗಿ ಅರ್ಹತೆ ಪಡೆದಿವೆ.

ಐಪಿಎಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಕೋಲ್ಕತ್ತ ನೈಟ್ ರೈಡರ್ಸ್, ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ ಆ್ಯನ್ಡ್ ಟೊಬ್ಯಾಗೊ, ನ್ಯೂಜಿಲೆಂಡ್‌ನ ಆಕ್ಲೆಂಡ್ ಏಸಸ್, ಇಂಗ್ಲೆಂಡ್‌ನ ಎರಡು ಕೌಂಟಿ ತಂಡಗಳು ಮತ್ತು ಶ್ರೀಲಂಕಾದ ಒಂದು ತಂಡ ಅರ್ಹತಾ ಹಂತದಲ್ಲಿ ಹೋರಾಟ ನಡೆಸಲಿವೆ. ಈ ಪಂದ್ಯಗಳು ಸೆಪ್ಟೆಂಬರ್ 19 ರಿಂದ 21ರ ವರೆಗೆ ಹೈದರಾಬಾದ್‌ನಲ್ಲಿ ನಡೆಯಲಿವೆ.

ಚಾಂಪಿಯನ್ಸ್ ಲೀಗ್ ಸಂಘಟಕರು ಟೂರ್ನಿಯ ಮಾದರಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 10 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

2009ರಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ಬ್ಲೂಸ್ ಚಾಂಪಿಯನ್ ಆಗಿದ್ದರೆ, ಕಳೆದ ವರ್ಷ ಚೆನ್ನೈ ಸೂಪರ್   ಕಿಂಗ್ಸ್ ಟ್ರೋಫಿ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT