ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.20ರಿಂದ ಸುಚಿತ್ರ ಕಿರುಚಲನಚಿತ್ರೋತ್ಸವ

Last Updated 18 ಸೆಪ್ಟೆಂಬರ್ 2013, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸುಚಿತ್ರ ಫಿಲ್ಮ್‌ ಸೊಸೈಟಿ ಸೆ.20ರಿಂದ 22ರವರೆಗೆ ೪ನೇ ಸುಚಿತ್ರ ಕಿರುಚಲನಚಿತ್ರೋತ್ಸವವನ್ನು ಬನಶಂಕರಿ ಎರಡನೇ ಹಂತದ ಬಿ.ವಿ.ಕಾರಂತ ರಸ್ತೆಯಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದೆ.

‘ಮದ್ರಾಸ್‌ ಕೆಫೆ’ ಸಿನಿಮಾದ ನಿರ್ದೇಶಕ  ಸುಜಿತ್ ಸರ್ಕಾರ್‌, ಸೆ.೨೦ರಂದು ಸಂಜೆ ೪ ಗಂಟೆಗೆ ಚಿತ್ರೋತ್ಸವ ಉದ್ಘಾಟಿಸಲಿದ್ದಾರೆ.

ಪ್ರತಿ ದಿನ ಬೆಳಗ್ಗೆ ೧೦ರಿಂದ ಸಂಜೆ ೮ ಗಂಟೆವರೆಗೆ ಕಿರುಚಿತ್ರಗಳ ಪ್ರದರ್ಶನವಿರಲಿದೆ.

ಸ್ಪರ್ಧಾ ವಿಭಾಗ, ಸ್ಪರ್ಧೆಯೇತರ ವಿಭಾಗ, ಗೋಥೆ ಇನ್‌ಸ್ಟಿಟ್ಯೂಟ್‌ ಸಹಭಾಗಿತ್ವದ ಒಬೆರ್‌ಹಾಸೆನ್ ಚಿತ್ರೋತ್ಸವದ ತಿರುಗಾಟ ಕಿರುಚಿತ್ರಗಳು ಹಾಗೂ ಸುಚಿತ್ರ ಸಿ.ಎಫ್.ಡಿ ವಿದ್ಯಾರ್ಥಿಗಲು ನಿರ್ಮಿಸಿದ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಅಲ್ಲದೆ, ಸಿನಿಮಾ ತಯಾರಿಕೆಯ ಬಗ್ಗೆ ಜೂಹಿ ಚತುರ್ವೇದಿ, ಪ್ರಕಾಶ್ ಬೆಳವಾಡಿ ಹಾಗೂ ವಾಸು ದೀಕ್ಷಿತ್‌ ವಿಶೇಷ ತರಗತಿಗಳನ್ನು ನಡೆಸಿಕೊಡಲಿದ್ದಾರೆ.

ಮೂರು ದಿನಗಳ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವವರು ರೂ. ೨೦೦ರ ಪಾಸ್‌ ಕೊಂಡುಕೊಳ್ಳಬೇಕು.
ಸೆ.೨೨ರ ಸಂಜೆ ೭ ಗಂಟೆಗೆ ನಡೆಯುವ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಭಾಗದ ಸ್ಪರ್ಧೆಗಳಲ್ಲಿ ಆಯ್ಕೆಯಾದ ಕಿರುಚಲನಚಿತ್ರಗಳಿಗೆ  ರೂ. ೧ ಲಕ್ಷ  ಮೊತ್ತದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 2671 1785

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT