ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕ್ಸಿ ಪ್ರಿಯಾಂಕಾ

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಪ್ರಿಯಾಂಕಾ ಚೋಪ್ರಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಸುದ್ದಿ ಕೇಳಿ ಬಾಲಿವುಡ್‌ನ ಇತರ ನಟಿಯರ ಹೊಟ್ಟೆಯಲ್ಲಿ ಬೆಂಕಿ ಹೊತ್ತಿದಂತಾಗಿದೆಯಂತೆ. ಇದೇ ಸಂದರ್ಭದಲ್ಲಿ ಅವರ ಹುಚ್ಚು ಅಭಿಮಾನಿಗಳು `ಇಷ್ಟು ಸಾಲದು, ಮತ್ತಷ್ಟು ಬೇಕು' ಎಂದು ಮೊರೆ ಇಡುತ್ತಿದ್ದಾರಂತೆ. ಯಾಕೆಂದರೆ ಪ್ರಿಯಾಂಕಾ ಚೋಪ್ರಾ ಬಂಗಾರ ಬಣ್ಣದ ಸ್ವಿಮ್ ಸೂಟ್ ಧರಿಸಿ ಸಾಗರದ ತಟದಿಂದ ಎದ್ದು ಬರುವ ದೃಶ್ಯದ ಚಿತ್ರವೊಂದು ಈಗ ಬಹಿರಂಗಗೊಂಡಿದೆ. ಈಜುಡುಗೆ ತೊಡುವುದು ಅವರಿಗೆ ಹೊಸತಲ್ಲದಿದ್ದರೂ ಕರಣ್ ಜೋಹರ್ ನಿರ್ದೇಶನದ `ದೋಸ್ತಾನಾ' ಚಿತ್ರಕ್ಕಾಗಿ ಅವರು ತೊಟ್ಟಿರುವ ದಿರಿಸಿಗೆ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಚುಂಬಕ ಶಕ್ತಿ ಇದೆ.

ಪ್ರಿಯಾಂಕಾ ತಮ್ಮ ಧ್ವನಿ ಹಾಗೂ ಮಾದಕ ನೋಟದಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ಆದರೆ ಈ ನೂತನ ವಿಡಿಯೊದಲ್ಲಿ ಅವರನ್ನು ನೋಡಿದವರ ಪ್ರಕಾರ ಈ ಹಿಂದಿಗಿಂತಲೂ ಹೆಚ್ಚು ಆಕರ್ಷಕವಾಗಿ, ಮಾದಕವಾಗಿ ಕಂಡಿದ್ದಾರೆ.

ಈ ಗೀತೆಯಲ್ಲಿ ಪ್ರಿಯಾಂಕಾ ತಾವಾಗಿಯೇ ಅಂಥ ಉಡುಗೆ ತೊಡುವ ಆಸಕ್ತಿ ತೋರಿದ್ದರಂತೆ. ಹೀಗಾಗಿ ಮಿಯಾಮಿ ಕಡಲಂಚಿನ ವಸ್ತ್ರದ ಶೈಲಿಯಲ್ಲಿ ಇರುವ ಈಜುಡುಗೆಯನ್ನು ಆಯ್ಕೆ ಮಾಡಿಕೊಂಡರು.

ಕೆಲವು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಅವರಿಗೆ `ಸೆಕ್ಸಿ' ಎಂಬ ಪಟ್ಟ ದೊರೆತಿತ್ತು. ಇದೀಗ ಅದನ್ನು ಅರ್ಥಪೂರ್ಣ ಮಾಡಲೆಂಬಂತೆ ಅವರು ಅದೇ ವಸ್ತ್ರ ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT