ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್ ತಲುಪಲು ಆಸ್ಟ್ರೇಲಿಯಾ ಸಮರ್ಥ

Last Updated 19 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ಆಸ್ಟ್ರೇಲಿಯಾ ಸತತ ನಾಲ್ಕನೇ ಬಾರಿ ಚಾಂಪಿಯನ್ ಆಗುತ್ತದೆಂದು ಪೂರ್ಣ ಭರವಸೆ ವ್ಯಕ್ತಪಡಿಸುವುದು ಕಷ್ಟ.ಆದರೆ ಸೆಮಿಫೈನಲ್ ತಲುಪಲು ಸಮರ್ಥವಾಗಿದೆ.ಹೀಗೆ ಹೇಳಿರುವುದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್.

ಈ ಬಾರಿಯೂ ರಿಕಿ ಪಾಂಟಿಂಗ್ ನಾಯಕತ್ವದ ತಂಡವು ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯುತ್ತದೆ ಎಂದು ವಿಶ್ವಾಸದಿಂದ ಹೇಳಬಹುದು.ಮತ್ತೊಮ್ಮೆ ವಿಶ್ವಕಪ್ ಗೆಲುವಿನ ಅದೃಷ್ಟ ತಂಡಕ್ಕಿದೆ ಎನ್ನುವ ಧೈರ್ಯ ಮಾತ್ರ ನನಗಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಸೆಮಿಫೈನಲ್ ತಲುಪುವ ಮಟ್ಟದಲ್ಲಿ ಆಡುವುದು ಅಗತ್ಯ.ಒಮ್ಮೆ ಈ ಹಂತ ವನ್ನು ದಾಟಿದರೆ,ಕೊನೆಯಲ್ಲಿ ಮತ್ತೊಂದು ಯಶಸ್ಸಿನ ಹೆಜ್ಜೆ ಇಡುವಂಥ ಪ್ರದರ್ಶನವನ್ನು ತಂಡ ನೀಡುತ್ತದೆಂದು ಲೆಕ್ಕಾಚಾರ ಮಾಡಬಹುದು.ಅಲ್ಲಿಯ ವರೆಗೆ ಕಾಯಬೇಕು’ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನ ದಲ್ಲಿ ಇಯಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT