ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್ ಹಾದಿಯಲ್ಲಿ ಮುಂಬೈ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಇಂದೋರ್ (ಪಿಟಿಐ/  ಐಎಎನ್‌ಎಸ್): ಮುಂಬೈ ಮತ್ತು ಮಧ್ಯಪ್ರದೇಶ ತಂಡಗಳ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾದ ಹಾದಿ ಹಿಡಿದಿದೆ. ಆದರೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿರುವ ಮುಂಬೈ ಸೆಮಿಫೈನಲ್ ಸಾಧ್ಯತೆಯನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದೆ.

ಇಂದೋರ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬುಧವಾರ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 434 ರನ್‌ಗಳಿಗೆ ಆಲೌಟಾಯಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಮಧ್ಯಪ್ರದೇಶ ಮೂರನೇ ದಿನದಾಟದ ಅಂತ್ಯಕ್ಕೆ 64 ಓವರ್‌ಗಳಲ್ಲಿ 3 ವಿಕೆಟ್‌ಗೆ 250 ರನ್ ಗಳಿಸಿದೆ.

ಚೆನ್ನೈನಲ್ಲಿನ ಪಂದ್ಯದಲ್ಲಿ ತಮಿಳುನಾಡು ತಂಡ ಮಹಾರಾಷ್ಟ್ರ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೆಮಿಫೈನಲ್‌ನತ್ತ ಹೆಜ್ಜೆಯಿಟ್ಟಿದೆ. ತಮಿಳುನಾಡು ಬುಧವಾರ ಮೊದಲ ಇನಿಂಗ್ಸ್‌ನಲ್ಲಿ 415 ರನ್ ಕಲೆಹಾಕಿತು. ಮಹಾರಾಷ್ಟ್ರ ದಿನದಾಟದ ಅಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿದೆ.
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ತಾನ ಆತಿಥೇಯರ ವಿರುದ್ಧ ಪೂರ್ಣ ಪ್ರಭುತ್ವ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್: ಮಧ್ಯಪ್ರದೇಶ: ಮೊದಲ ಇನಿಂಗ್ಸ್ 55.1 ಓವರ್‌ಗಳಲ್ಲಿ 192 ಮತ್ತು ಎರಡನೇ ಇನಿಂಗ್ಸ್ 64 ಓವರ್‌ಗಳಲ್ಲಿ 3 ವಿಕೆಟ್‌ಗೆ 250 (ಜಫರ್ ಅಲಿ 33, ನಮನ್ ಓಜಾ 85, ಮೋನಿಶ್ ಮಿಶ್ರಾ ಬ್ಯಾಟಿಂಗ್ 61, ಉದಿತ್ ಬಿರ್ಲಾ 55). ಮುಂಬೈ: ಮೊದಲ ಇನಿಂಗ್ಸ್ 146.4 ಓವರ್‌ಗಳಲ್ಲಿ 434 (ಕೌಸ್ತುಭ್ ಪವಾರ್ 161, ಅಂಕಿತ್ ಚವಾಣ್ ಔಟಾಗದೆ 102, ಟಿ.ಪಿ. ಸುಧೀಂದ್ರ 96ಕ್ಕೆ 5).

ಮಹಾರಾಷ್ಟ್ರ: ಮೊದಲ ಇನಿಂಗ್ಸ್ 93 ಓವರ್‌ಗಳಲ್ಲಿ 232 ಮತ್ತು ಎರಡನೇ   ಇನಿಂಗ್ಸ್ 29 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 90 (ಚಿರಾಗ್ ಖುರಾನಾ ಬ್ಯಾಟಿಂಗ್ 55). ತಮಿಳುನಾಡು: ಮೊದಲ ಇನಿಂಗ್ಸ್ 143.2 ಓವರ್‌ಗಳಲ್ಲಿ 415 (ಯೋ ಮಹೇಶ್ 59, ಸಮದ್ ಫಲಾ 80ಕ್ಕೆ 3).

ರಾಜಸ್ತಾನ: ಮೊದಲ ಇನಿಂಗ್ಸ್: 167.1 ಓವರ್‌ಗಳಲ್ಲಿ 421. ಹೈದರಾಬಾದ್: ಮೊದಲ ಇನಿಂಗ್ಸ್ 55 ಓವರ್‌ಗಳಲ್ಲಿ 144 ಮತ್ತು ಎರಡನೇ ಇನಿಂಗ್ಸ್: 43 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 138 (ಅಕ್ಷತ್ ರೆಡ್ಡಿ ಬ್ಯಾಟಿಂಗ್ 77, ರವಿ ತೇಜ ಬ್ಯಾಟಿಂಗ್ 58).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT