ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಆಸೀಸ್, ಪಾಕ್

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): `ಸೂಪರ್ 8~ ಹಂತದ ಕೊನೆಯ ಪಂದ್ಯದಲ್ಲಿ ಸೋಲು ಕಂಡರೂ ಆಸ್ಟ್ರೇಲಿಯಾ ತಂಡದವರು ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬಲಿಷ್ಠ ಕಾಂಗರೂ ಬಳಗದ ಎದುರು ಗ್ದ್ದೆದ ಪಾಕಿಸ್ತಾನ ಕೂಡಾ ನಾಲ್ಕರಘಟ್ಟ ಪ್ರವೇಶಿಸಿದೆ.

ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 32 ರನ್‌ಗಳ ಗೆಲುವು ಸಾಧಿಸಿತು. ಮೊಹಮ್ಮದ್ ಹಫೀಜ್ ಬಳಗ ನೀಡಿದ 150 ರನ್‌ಗಳ ಗುರಿಗೆ ಉತ್ತರವಾಗಿ ಆಸೀಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 117 ರನ್ ಗಳಿಸಿತು.

ಸೆಮಿಫೈನಲ್ ಖಚಿತಪಡಿಸಿಕೊಳ್ಳಲು ಆಸ್ಟ್ರೇಲಿಯಾ 112 ರನ್ ಗಳಿಸಬೇಕಿತ್ತು. ಆ ಗೆರೆಯನ್ನು ಮುಟ್ಟಿದರು. `ಸೂಪರ್ 8~ ಹಂತದ ಉಳಿದ ಪಂದ್ಯಗಳಲ್ಲಿ ಈ ತಂಡದವರು ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿದ್ದ ಕಾರಣ ಅಗ್ರಸ್ಥಾನ ಪಡೆದು ನಾಲ್ಕರ ಘಟ್ಟ ಪ್ರವೇಶಿಸಿದರು.

`ಮಾಡು ಇಲ್ಲವೇ ಮಡಿ~ ಎನಿಸಿದ್ದ ಈ ಪಂದ್ಯದಲ್ಲಿ ಪಾಕ್ ಗೆಲುವಿಗೆ ಕಾರಣವಾಗಿದ್ದು ಸ್ಪಿನ್ನರ್‌ಗಳು. ವಿಶೇಷವೆಂದರೆ ಮೊದಲ 17 ಓವರ್ ಬೌಲ್ ಮಾಡಿದ್ದೇ ಸ್ಪಿನ್ನರ್‌ಗಳು. ಆಫ್ ಸ್ಪಿನ್ನರ್ ಹಫೀಜ್, ಎಡಗೈ ಸ್ಪಿನ್ನರ್ ರಾಜಾ ಹಸನ್, ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್, ಲೆಗ್ ಸ್ಪಿನ್ನರ್ ಶಾಹೀದ್ ಅಫ್ರಿದಿ ಹಾಗೂ ಆಫ್ ಸ್ಪಿನ್ನರ್ ಶೋಯಬ್ ಮಲಿಕ್ ಒಟ್ಟು 18 ಓವರ್ ಬೌಲ್ ಮಾಡಿದರು. ಇನ್ನೆರಡು ಓವರ್ ಹಾಕಿದ್ದು ವೇಗಿ ಉಮರ್ ಗುಲ್.

ಅದರಲ್ಲೂ ಯುವ ಸ್ಪಿನ್ನರ್ ರಾಜಾ ಪ್ರಭಾವಿ ಬೌಲಿಂಗ್ ದಾಳಿ ಮೂಲಕ ಗಮನ ಸೆಳೆದರು. ಈ ಟೂರ್ನಿಯಲ್ಲಿ ಹೆಚ್ಚು ರನ್ ಪೇರಿಸಿರುವ ಆಟಗಾರ ಶೇನ್ ವಾಟ್ಸನ್ ಅವರನ್ನು ಆರಂಭದಲ್ಲಿಯೇ ನಿಯಂತ್ರಿಸಿದ್ದು ರಾಜಾ. ಇದೇ ಈ ಪಂದ್ಯದ ಪ್ರಮುಖ ತಿರುವು. 4 ಓವರ್ ಬೌಲ್ ಮಾಡಿದ ಅವರು ಕೇವಲ 14 ರನ್ ನೀಡಿ 2 ವಿಕೆಟ್ ಕಬಳಿಸಿದರು. ಆಸ್ಟ್ರೇಲಿಯಾ ತಂಡದ ಮೈಕ್ ಹಸ್ಸಿ (ಔಟಾಗದೆ 54; 47 ಎಸೆತ) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳನ್ನು ಪಾಕ್ ಸ್ಪಿನ್ನರ್‌ಗಳು ಸಂಪೂರ್ಣವಾಗಿ ನಿಯಂತ್ರಿಸಿದರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಾಕ್ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ನಾಸೀರ್ ಜಮ್‌ಶೆದ್ (55; 46 ಎ, 4 ಬೌ, 2 ಸಿ.) ಹಾಗೂ ಕಮ್ರನ್ ಅಕ್ಮಲ್ (32; 26 ಎ.) ತಂಡದ ಮೊತ್ತ ಹೆಚ್ಚಿಸಿದರು.

ಪಾಕಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149
ಮೊಹಮ್ಮದ್ ಹಫೀಜ್ ಎಲ್‌ಬಿಡಬ್ಲ್ಯು ಬಿ ಮಿಶೆಲ್ ಸ್ಟಾರ್ಕ್  04
ಇಮ್ರಾನ್ ನಜೀರ್ ಸಿ ಜಾರ್ಜ್ ಬೇಲಿ ಬಿ ಶೇನ್ ವಾಟ್ಸನ್  14
ನಾಸೀರ್ ಜಮ್‌ಶೆದ್ ಸಿ ವಾರ್ನರ್ ಬಿ ಕ್ಸೇವಿಯರ್ ಡೊಹರ್ತಿ 55
ಕಮ್ರನ್ ಅಕ್ಮಲ್ ಸಿ ಕೆಮರೂನ್ ವೈಟ್ ಬಿ ಮಿಶೆಲ್ ಸ್ಟಾರ್ಕ್  32
ಉಮರ್ ಅಕ್ಮಲ್ ಔಟಾಗದೆ  09
ಅಬ್ದುಲ್ ರಜಾಕ್ ಸಿ ಶೇನ್ ವಾಟ್ಸನ್ ಬಿ ಪ್ಯಾಟ್ ಕಮಿನ್ಸ್  22
ಶಾಹೀದ್ ಅಫ್ರಿದಿ ಬಿ ಮಿಶೆಲ್ ಸ್ಟಾರ್ಕ್  04
ಶೋಯಬ್ ಮಲಿಕ್ ಔಟಾಗದೆ  04
ಇತರೆ (ಲೆಗ್‌ಬೈ-2, ವೈಡ್-3)  05
ವಿಕೆಟ್ ಪತನ: 1-5 (ಹಫೀಜ್; 1.1); 2-29 (ನಜೀರ್; 5.4); 3-108 (ಜಮ್‌ಶೆದ್; 14.5); 4-108 (ಕಮ್ರನ್; 15.1); 5-136 (ರಜಾಕ್; 18.4); 6-144 (ಅಫ್ರಿದಿ; 19.2)
ಬೌಲಿಂಗ್: ಕ್ಸೇವಿಯರ್ ಡೊಹರ್ತಿ  4-0-27-1 (ವೈಡ್-1), ಮಿಶೆಲ್ ಸ್ಟಾರ್ಕ್ 4-0-20-3, ಶೇನ್ ವಾಟ್ಸನ್ 4-0-23-1 (ವೈಡ್-1), ಪ್ಯಾಟ್ ಕಮಿನ್ಸ್ 4-0-42-1 (ವೈಡ್-1), ಗ್ಲೆನ್ ಮ್ಯಾಕ್ಸ್‌ವೆಲ್ 1-0-6-0, ಬ್ರಾಡ್ ಹಾಗ್ 3-0-29-0
ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 117
ಶೇನ್ ವಾಟ್ಸನ್ ಎಲ್‌ಬಿಡಬ್ಲ್ಯು ಬಿ ರಾಜಾ ಹಸನ್  08
ಡೇವಿಡ್ ವಾರ್ನರ್ ಎಲ್‌ಬಿಡಬ್ಲ್ಯು ಬಿ ಮೊಹಮ್ಮದ್ ಹಫೀಜ್ 08
ಮೈಕ್ ಹಸ್ಸಿ ಔಟಾಗದೆ  54
ಜಾರ್ಜ್ ಬೇಲಿ ಎಲ್‌ಬಿಡಬ್ಲ್ಯು ಬಿ ಸಯೀದ್ ಅಜ್ಮಲ್  15
ಕೆಮರೂನ್ ವೈಟ್ ಸಿ ನಜೀರ್ ಬಿ ಮೊಹಮ್ಮದ್ ಹಫೀಜ್  12
ಗ್ಲೆನ್ ಮ್ಯಾಕ್ಸ್‌ವೆಲ್ ಸಿ  ಹಫೀಜ್ ಬಿ ರಾಜಾ ಹಸನ್  04
ಮ್ಯಾಥ್ಯೂ ವೇಡ್ ಬಿ ಸಯೀದ್ ಅಜ್ಮಲ್  13
ಪ್ಯಾಟ್ ಕಮಿನ್ಸ್ ಎಲ್‌ಬಿಡಬ್ಲ್ಯು ಬಿ ಸಯೀದ್ ಅಜ್ಮಲ್  00
ಮಿಶೆಲ್ ಸ್ಟಾರ್ಕ್ ಔಟಾಗದೆ  01
ಇತರೆ (ಬೈ-1, ವೈಡ್-1)  02
ವಿಕೆಟ್ ಪತನ: 1-15 (ವಾಟ್ಸನ್; 3.4); 2-19 (ವಾರ್ನರ್; 4.6); 3-44 (ಬೇಲಿ; 9.3); 4-58 (ವೈಟ್; 11.6); 5-65 (ಮ್ಯಾಕ್ಸ್‌ವೆಲ್; 13.3); 6-110 (ವೇಡ್; 18.5); 7-110 (ಕಮಿನ್ಸ್; 18.6)
ಬೌಲಿಂಗ್: ಮೊಹಮ್ಮದ್ ಹಫೀಜ್ 4-0-22-2, ರಾಜಾ ಹಸನ್ 4-0-14-2, ಸಯೀದ್ ಅಜ್ಮಲ್ 4-0-17-3, ಶಾಹೀದ್ ಅಫ್ರಿದಿ 4-0-33-0, ಶೋಯಬ್ ಮಲಿಕ್ 2-0-19-0, ಉಮರ್ ಗುಲ್ 2-0-11-0
ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 32 ರನ್‌ಗಳ ಜಯ ಹಾಗೂ ಎರಡು ಪಾಯಿಂಟ್. ಪಂದ್ಯ ಶ್ರೇಷ್ಠ: ರಾಜಾ ಹಸನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT