ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಕರ್ನಾಟಕ

Last Updated 17 ಫೆಬ್ರುವರಿ 2011, 18:50 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಕರ್ನಾಟಕ, ದೆಹಲಿ ಎನ್.ಟಿ.ಆರ್., ಒರಿಸ್ಸಾ ತಂಡದವರು ಇಲ್ಲಿ ನಡೆಯುತ್ತಿರುವ 9ನೇ ಅಖಿಲ ಭಾರತ ಬಿ.ಎಸ್.ಎನ್.ಎಲ್. ಹಾಕಿ ಟೂರ್ನಿ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆಯುವ ಸೆಮಿಫೈನಲ್ ಪಂದ್ಯಗಳಲ್ಲಿ ಜಾರ್ಖಂಡ್-ಎನ್.ಟಿ.ಆರ್. ದೆಹಲಿ ಹಾಗೂ ಕರ್ನಾಟಕ-ಒರಿಸ್ಸಾ ಫೈನಲ್ ಪ್ರವೇಶಿಸಲು ಹೋರಾಟ ನಡೆಸಲಿದೆ.

ಗುರುವಾರ ಟೂರ್ನಿ ಲೀಗ್ ವ್ಯವಹಾರ ಮುಗಿಯಿತು. ‘ಎ’ ಗುಂಪಿನ ಲೀಗ್‌ನಲ್ಲಿ ಕರ್ನಾಟಕ 6-0 ಗೋಲುಗಳಿಂದ ಜಮ್ಮು- ಕಾಶ್ಮೀರ ತಂಡವನ್ನು ಸುಲಭವಾಗಿ ಮಣಿಸಿತು.
ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ನಾಯಕ ಟಿ.ಜೆ. ಬೋಪಣ್ಣ (2), ಪ್ರಫುಲ್ ಕುಜೂರ್, ಬೆನೆಡಿಟ್ ವಿನೋದ್, ಮೋತಿಲಾಲ್ ರಾಥೋಡ್, ಡಾಮ್ನಿಕ್ ಜಾರ್ಜ್ ಗೋಲು ತಂದಿತ್ತರು.

ಮಹಾರಾಷ್ಟ್ರ ತಂಡ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ 3-0 ಗೋಲುಗಳಿಂದ ಗುಜರಾತ್ ಮೇಲೆ ಜಯಗಳಿಸಿತು. ವಿಜಯಿ ತಂಡದ ಎಫ್.ಎ. ಖಾನ್, ಎಸ್.ಬಿ. ಖಂಡ್ರೆ, ಡಿ.ಆರ್. ಠಾಕೂರ್ ಚೆಂಡನ್ನು ಯಶಪಡಿಸಿ ಕೊಂಡರು. ಈ ಗುಂಪಿನಲ್ಲಿ ಈ ಎರಡು ತಂಡದವರು ಸೆಮಿಫೈನಲ್ ತಲುಪುವಲ್ಲಿ ವಿಫಲರಾದರು.
‘ಸಿ’ ಗುಂಪಿನಲ್ಲಿ ರಾಜಾಸ್ತಾನ ತಂಡ 3-1 ಗೋಲುಗಳಿಂದ ಆಂಧ್ರ ಪ್ರದೇಶ ಮೇಲೆ ಗೆಲುವು ಪಡೆಯಿತು.

ವಿಜಯಿ ತಂಡದ ಎನ್. ಪ್ರತಾಪ್, ಎಸ್.ಡಿ. ಗುಪ್ತಾ, ಬದರಿ ಸಿಂಗ್ ಗೋಲು ತಂದಿತ್ತರು. ಇದೇ ಗುಂಪಿನ ಇನ್ನೊಂದು ಪಂದ್ಯ ದಲ್ಲಿ ಒಡಿಶಾ ತಂಡದವರು 2-0 ಗೋಲುಗಳಿಂದ ಉತ್ತರಪ್ರದೇಶ (ಪೂರ್ವ) ತಂಡವನ್ನು ಸೋಲಿಸಿದರು. ಒಡಿಶಾ ತಂಡದ ನಾರಾಯಣ ಮೋಹಂತಿ, ರಜನಿಕಾಂತ ಮೋಹಂತಿ ಚೆಂಡನ್ನು ಗುರಿ ಮುಟ್ಟಿಸಿದರು./

ಪಂದ್ಯದ ಆರಂಭದಿಂದಲೂ ಉತ್ತಮ ಆಟವಾಡಿದ ಉತ್ತಮ ಆಟಬಾಡಿದ ಒಡಿಶಾ ತಂಡದ ಆಟಗಾರರು ಕೊನೆಯವರೆಗೂ ಅದೇ ಆಟವನ್ನು ಮುಂದುವರೆಸಿ ಕೊಂಡು ಬಂದರು. ಆದ್ದರಿಂದ ಅವರಿಗೆ ಸುಲಭ ಗೆಲುವು ಒಲಿಯಿತು.

ದೆಹಲಿಯ ಎಂ.ಟಿ.ಎನ್.ಎಲ್. ತಂಡದವರು ಕೆ.ಟರ್ಕಿ ಅವರ ಗೋಲು ನೆರವಿನಿಂದ ಪಂಜಾಬ್ ಮೇಲೆ ‘ಡಿ’ ಗುಂಪಿನ ಲೀಗ್‌ನಲ್ಲಿ 1-0 ಗೋಲಿನಿಂದ ಜಯ ಪಡೆದರು. ಈ ಎರಡು ತಂಡ ದವರು ಸೆಮಿಫೈನಲ್ ಪ್ರವೇಶಿಸು ವಲ್ಲಿ ವಿಫಲ ರಾದರು. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ದೆಹಲಿ ಎನ್.ಟಿ.ಆರ್ ಮತ್ತು ಮಧ್ಯಪ್ರದೇಶ ತಂಡದವರು 1-1 ಗೋಲು ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT