ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಜಾರ್ಖಂಡ್ ತಂಡ

Last Updated 16 ಫೆಬ್ರುವರಿ 2011, 18:40 IST
ಅಕ್ಷರ ಗಾತ್ರ

ಬೆಂಗಳೂರು: ಚಾಂಪಿಯನ್ಸ್ ಜಾರ್ಖಂಡ್ ತಂಡದವರು ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು 9ನೇ ಅಖಿಲ ಭಾರತ ಬಿ.ಎಸ್.ಎನ್.ಎಲ್. ಹಾಕಿ ಟೂರ್ನಿ ಸೆಮಿಫೈನಲ್ ತಲುಪಿದ ಮೊದಲ ತಂಡ ಎಂಬ ಗೌರವಕ್ಕೆ ಪಾತ್ರರಾದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಎ’ ಗುಂಪಿನ ಲೀಗ್ ಕೊನೆಯ ಪಂದ್ಯದಲ್ಲಿ ಜಾರ್ಖಂಡ್ ತಂಡದವರು 5-0 ಗೋಲುಗಳಿಂದ ತಮಿಳುನಾಡು ತಂಡವನ್ನು ಮಣಿಸಿದರು. ಆಟ ಆರಂಭದಿಂದ ಮೇಲುಗೈ ಸಾಧಿಸಿದ ಜಾರ್ಖಂಡ್ ತಂಡದ ಥಾಮಸ್ ನಾಗ್, ಮನೋಜ್ ಪ್ರಧಾನ್ (ತಲಾ 2 ಗೋಲು), ಸ್ಯಾಮ್ಯುಯಲ್ ನಾಗ್ ಚೆಂಡನ್ನು ಗುರಿಮುಟ್ಟಿಸಿದರು.

‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಗೋಲಿನ ಸುರಿಮಳೆಗೆರೆದ ಜಮ್ಮು ಮತ್ತು ಕಾಶ್ಮೀರ ತಂಡ 7-0 ಗೋಲುಗಳಿಂದ ಮಹಾರಾಷ್ಟ್ರ ತಂಡವನ್ನು ಸೋಲಿಸಿದರು. ವಿಜಯಿ ತಂಡದ ಎಚ್.ಎಸ್. ರೀನ್ (3), ಹರ್ವಿಂದರ್ ಸಿಂಗ್ (2), ಜಗಜಿತ್ ಸಿಂಗ್, ದಲ್ಜೀತ್ ಸಿಂಗ್ ಗೋಲು ತಂದಿತ್ತರು.

ಒರಿಸ್ಸಾ ತಂಡ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಆಂಧ್ರಪ್ರದೇಶ ವಿರುದ್ಧ 3-0 ಗೋಲು ಜಯ ಸಾಧಿಸಿದರು. ವಿಜಯಿ ತಂಡದ ಬಿಶ್ರಮ್ ಮುಂದಾರಿ, ಅನೂಪ್, ಎ. ಎಕ್ಕಾ ಚೆಂಡನ್ನು ಗುರಿಮುಟ್ಟಿಸಿದರು. ರಾಜಾಸ್ತಾನ ಮತ್ತು ಉತ್ತರಪ್ರದೇಶ (ಪೂರ್ವ) ನಡುವಣ ಇದೇ ಗುಂಪಿನ ಲೀಗ್ ಪಂದ್ಯ 2-2 ಗೋಲು ಡ್ರಾ ಆಯಿತು. ‘ಡಿ’ ಗುಂಪಿನ ಲೀಗ್ ಪಂದ್ಯದಲ್ಲಿ ದೆಹಲಿ ಎನ್.ಟಿ.ಆರ್. ತಂಡ 5-0 ಗೋಲುಗಳಿಂದ ದೆಹಲಿ ಎಂ.ಟಿ.ಎನ್.ಎಲ್. ಮೇಲೆ ಗೆದ್ದಿತು. ಮಧ್ಯಪ್ರದೇಶ ಮತ್ತು ಪಂಜಾಬ್ ನಡುವಣ ಇದೇ ಗುಂಪಿನ ಮತ್ತೊಂದು ಲೀಗ್ ಪಂದ್ಯ 1-1 ಗೋಲು ಡ್ರಾ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT