ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ನಿಕ್ಷೇಪ್, ಸನಿಲ್‌

ರಾಷ್ಟ್ರೀಯ ಜೂನಿಯರ್ ಟೆನಿಸ್ ಟೂರ್ನಿ
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಬಿ.ಆರ್ ನಿಕ್ಷೇಪ್ ಇಲ್ಲಿ ನಡೆಯುತ್ತಿರುವ ಆರ್.ಟಿ.ನಾರಾಯಣ್ ಸ್ಮಾರಕ ಎಐಟಿಎ ರಾಷ್ಟ್ರೀಯ ಜೂನಿಯರ್ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ     ಸೆಮಿಫೈನಲ್‌ ಹಾಗೂ ಡಬಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ಕೆಎಸ್‌ಎಲ್‌ಟಿಎ ಅಂಗಳದಲ್ಲಿ ನಡೆದ ಬಾಲಕರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ನಿಕ್ಷೇಪ್ 6–3, 6–1 ರಿಂದ ಕರ್ನಾಟಕದ ಮತ್ತೊಬ್ಬ ಆಟಗಾರ ಆದಿಲ್ ಕಲ್ಯಾಣ್‌ಪುರ್ ವಿರುದ್ಧ ಸುಲಭವಾಗಿ ಜಯ ದಾಖಲಿಸಿದರು.

ಪಶ್ಚಿಮ ಬಂಗಾಳದ ಎರಡನೇ ಶ್ರೇಯಾಂಕಿತ ಆಟಗಾರ ಸನಿಲ್ ಜಗಿತಿಯಾನಿ 6–3, 6–3 ರಲ್ಲಿ ಆಂಧ್ರ ಪ್ರದೇಶದ ಪಿ.ಸಿ ಅನಿರುದ್ಧ್ ಅವರನ್ನು ಸುಲಭವಾಗಿ ಮಣಿಸಿದರು.

ಬಾಲಕರ ಡಬಲ್ಸ್ ಸೆಮಿಫೈನಲ್‌ನಲ್ಲಿ ಮಧ್ಯ ಪ್ರದೇಶದ  ಯಶ್ ಯಾದವ್ ಜೊತೆಗೂಡಿ ಆಡಿದ ಕರ್ನಾಟಕದ ಬಿ.ಆರ್ ನಿಕ್ಷೇಪ್ 6–1, 7–6 (2) ರಿಂದ ತಮಿಳುನಾಡಿನ ಆರ್.ಎಸ್ ಮೋಹಿತ್ ಮತ್ತು ಉತ್ತರಖಾಂಡ್‌ನ ಉತ್ಕರ್ಷ್ ಭಾರದ್ವಾಜ್ ಜೋಡಿಯನ್ನು ಮಣಿಸಿ ಫೈನಲ್‌ ಪ್ರವೇಶಿಸಿದರು.

ಮತ್ತೊಂದು ಪಂದ್ಯದಲ್ಲಿ ಪಶ್ಚಿಮ ಬಂಗಾಳದ ಸನಿಲ್ ಜಗಿತಿಯಾನಿ ಮತ್ತು ಅಸ್ಸಾಂನ ಪರೀಕ್ಷಿತ್ ಸೊಮಾನಿ ಜೋಡಿ 7–6, 6–4 ರಿಂದ ಉತ್ತರಖಾಂಡ್‌ನ ಮಯೂಕ್ ರಾವತ್ ಮತ್ತು ಆಂಧ್ರ ಪ್ರದೇಶದ ಪಿ.ಸಿ.ಅನಿರುದ್ಧ್ ಅವರನ್ನು ಪರಾಭವಗೊಳಿಸಿದರು.

ಎಂಎಸ್‌ಎಸ್‌ ಅಂಗಳದಲ್ಲಿ ನಡೆದ ಬಾಲಕಿಯರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್‌ನಲ್ಲಿ ತಮಿಳುನಾಡಿನ ಆರ್.ಅಭಿನಿಕ 7–6, 6–0 ರಲ್ಲಿ ದೆಹಲಿಯ ಸಭ್ಯತಾ ನಿಹಲಾನಿ ವಿರುದ್ಧ ಜಯ ಪಡೆದರು.

ಮತ್ತೊಮದು ಪಂದ್ಯದಲ್ಲಿ ಮಹಾರಾಷ್ಟ್ರದ ಶಿವಾನಿ ಸ್ವರೂಪ್ ಇಂಗ್ಲ್ 6–4, 6–0 ರಲ್ಲಿ ಗುಜರಾತಿನ ರುತ್ವಿಕ್ ಷಾ ವಿರುದ್ಧ ಗೆಲುವು ಪಡೆದರು.

ಬಾಲಕಿಯರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ತಮಿಳುನಾಡಿನ ಆರ್.ಅಭಿನಿಕ್ಕ, ಆರ್. ಸಾಯಿ ಅವಂತಿಕಾ ಜೋಡಿ 7–6, 1–6, 10–7 ರಲ್ಲಿ ಮಹಾರಾಷ್ಟ್ರದ ಮಹಕ್ ಜೈನ್ ಮತ್ತು ಆಂಧ್ರ ಪ್ರದೇಶದ ಸಾಯಿ ದೇದಿಪ್ಯಾ  ಜೋಡಿಯ ವಿರುದ್ಧ ಗೆಲುವು ಸಂಪಾದಿಸಿದರು.

ಇನ್ನೊಂದು ಪಂದ್ಯದಲ್ಲಿ ಆಮಧ್ರ ಪ್ರದೇಶದ ಹರ್ಷಾ ಸಾಯಿ ಚಲ್ಲಾ ಮತ್ತು ತಮಿಳು ನಾಡಿನ ಸಿ.ಎಸ್.ಪ್ರಣೀತಾ ಜೋಡಿ 6–1, 6–2 ರಲ್ಲಿ    ಆಂಧ್ರ ಪ್ರದೇಶದ ಸಮಾ ಸಾತ್ವಿಕ್ ಮತ್ತು ಮಹಾರಾಷ್ಟ್ರದ ಶಿವಾನಿ ಸ್ವರೂಪ್ ಇಂಗ್ಲ್ ಜೋಡಿಯನ್ನು ಸುಲಭವಾಗಿ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT