ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಯಂಗ್‌ಸ್ಟಾರ್ಸ್‌ ಬಿ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಸಡನ್ ಡೆತ್ ಮೂಲಕ `ಅಣ್ಣಂದಿರನ್ನು~ ಮಣಿಸಿದ ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ `ಬಿ~ ತಂಡ, ನಗರದ ಸೆಟ್ಲ್‌ಮೆಂಟ್ ಮೈದಾನದಲ್ಲಿ ನಡೆಯುತ್ತಿರುವ ಅಂತರ ರಾಜ್ಯ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಯಂಗ್‌ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ ಆಶ್ರಯದ ಚಾಂಪಿಯನ್‌ಷಿಪ್‌ನ ಶನಿವಾರ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ತಂಡ ಯಂಗ್‌ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ `ಎ~ ತಂಡವನ್ನು ಮಣಿಸಿತು.
ಪಂದ್ಯದ 15ನೇ ನಿಮಿಷದಲ್ಲಿ ಗೋಲು ಗಳಿಸಿದ ಮಿಥುನ್ ಬಿಜವಾಡ, `ಎ~ ತಂಡಕ್ಕೆ ಮುನ್ನಡೆ ತಂದಿತ್ತರು. ಆದರೆ 27ನೇ ನಿಮಿಷದಲ್ಲಿ ಅಭಿಷೇಕ್ ಅವರ ಪಾಸ್‌ನಿಂದ ಎದುರಾಳಿಯ ಸ್ಟಿಕ್‌ಗೆ ಬಡಿದು ಚೆಂಡು ಗೋಲು ಪೆಟ್ಟಿಗೆ ಸೇರಿದಾಗ ಪಂದ್ಯದಲ್ಲಿ `ಬಿ~ ತಂಡಕ್ಕೂ ಗೌರವ ಸಿಕ್ಕಿತು

ದ್ವಿತೀಯಾರ್ಧ ಮತ್ತು ಹೆಚ್ಚುವರಿ ಅವಧಿಯಲ್ಲಿ ಗೋಲು ಬರಲಿಲ್ಲ. ಟೈ-ಬ್ರೇಕರ್‌ಗೆ ಮೊರೆ ಹೋದಾಗ ಎ ತಂಡದ ಪರವಾಗಿ ಶಶಿಧರ ಹಾಗೂ ನವೀನ ಮತ್ತು ಬಿ ತಂಡದ ಪರವಾಗಿ ವಿಶಾಲ ಹಾಗೂ ಮಂಜು ವಡ್ಡರ ಗೋಲು ಗಳಿಸಿ ಪಂದ್ಯವನ್ನು ಮತ್ತಷ್ಟು ರೋಚಕ ಸ್ಥಿತಿಗೆ ಕೊಂಡೊಯ್ದರು.  
  
`ಸಡನ್ ಡೆತ್~ನಲ್ಲಿ ಎರಡೂ ತಂಡದ ಆಟಗಾರರು ಮೊದಲೆರಡು ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರು. ಮೂರನೇ ಅವಕಾಶವನ್ನು ಎ ತಂಡ ಕೈಚೆಲ್ಲಿದಾಗ ಬಿ ತಂಡದ ಪರವಾಗಿ ಸಚಿನ್ ಉಂಡಿ ಗುರಿ ಸೇರಿದರು.
ಎರಡನೆಯ ಕ್ವಾರ್ಟರ್ ಫೈನಲ್‌ನಲ್ಲಿ `ಗೋಲ್ಡನ್ ಗೋಲು~ ಮೂಲಕ ಕೊಲ್ಹಾಪುರದ ಎಂ.ಕೆ.ಎಂ. ತಂಡ, ಮೈಸೂರು ತಂಡವನ್ನು 2-1 ರಿಂದ ಮಣಿಸಿತು. ನಿಗದಿತ ಅವಧಿ ಮುಕ್ತಾಯಗೊಂಡಾಗ ಎರಡೂ ತಂಡಗಳು ತಲಾ ಒಂದೊಂದು ಗೋಲು ಗಳಿಸಿದ್ದವು. ಮಂಜುನಾಥ ಜಾಧವ ಗಳಿಸಿದ `ಗೋಲ್ಡನ್ ಗೋಲು~ ಎಂ.ಕೆ.ಎಂಗೆ ಜಯ ತಂದುಕೊಟ್ಟಿತು.

ಹುಬ್ಬಳ್ಳಿಯ ವಾಸು ಇಲೆವೆನ್ ತಂಡ 6-2 ಗೋಲುಗಳಿಂದ ಬಾಗಲಕೋಟೆ ತಂಡವನ್ನು ಸೋಲಿಸಿತು. ಕೊನೆಯ ಕ್ವಾರ್ಟರ್ ಫೈನಲ್‌ನಲ್ಲಿ ಗದಗ ತಂಡ ಏಕೈಕ ಗೋಲಿನಿಂದ ಕೊಲ್ಹಾಪುರದ ಚಾವ ತಂಡದ ವಿರುದ್ಧ ಜಯ ಸಾಧಿಸಿತು. ಭಾನುವಾರ ನಡೆಯುವ ಸೆಮಿಫೈನಲ್ ಪಂದ್ಯಗಳಲ್ಲಿ ಯಂಗ್‌ಸ್ಟಾರ್ಸ್‌ - ಎಂ.ಎಂ.ಕೆ. ಹಾಗೂ ವಾಸು ಇಲೆವೆನ್ -ಗದಗ ತಂಡಗಳು ಸೆಣಸಾಟ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT