ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆರಾ ಸ್ಯಾನಿಟರಿವೇರ್ ಲಾಭ ರೂ.11 ಕೋಟಿ

Last Updated 14 ಅಕ್ಟೋಬರ್ 2012, 15:55 IST
ಅಕ್ಷರ ಗಾತ್ರ

ಬೆಂಗಳೂರು: `ಸೆರಾ ಸ್ಯಾನಿಟರಿವೇರ್ ಲಿ.~ ಕಂಪೆನಿ ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ರೂ.11.03 ಕೋಟಿ ನಿವ್ವಳ ಲಾಭದೊಂದಿಗೆ ಶೇ 44ರಷ್ಟು ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿನ ಲಾಭ ರೂ.7.65 ಕೋಟಿ ಇದ್ದಿತು.

`ಕಂಪೆನಿಯ ಒಟ್ಟು ವರಮಾನ 2ನೇ ತ್ರೈಮಾಸಿಕದಲ್ಲಿ ರೂ.111.38 ಕೋಟಿಯಷ್ಟಿದ್ದು, ಶೇ 52ರಷ್ಟು ಹೆಚ್ಚಳವಾಗಿದೆ. ಈ ಸಾಲಿನ ಮೊದಲ 6 ತಿಂಗಳಲ್ಲಿ ರೂ.201.89 ಕೋಟಿ ಮೌಲ್ಯದ ಸರಕು ಮಾರಾಟ ಮಾಡಲಾಗಿದೆ.
 
ಹೊಸದಾಗಿ `ಎಚ್‌ಡಿ ಡಿಜಿಟಲ್ ವಾಲ್‌ಮತ್ತು ವೆಟ್ರಿಫೈಡ್ ಟೈಲ್ಸ್~ ಪರಿಚಯಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರೂ.500 ಕೋಟಿ ವಹಿವಾಟು ನಡೆಸುವ ವಿಶ್ವಾಸವಿದೆ~ ಎಂದು ಕಂಪೆನಿ ಅಧ್ಯಕ್ಷ ವಿಕ್ರಂ ಸೊಮಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT