ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಎತ್ತರಿಸಲು ಕಾಂಗ್ರೆಸ್ ಪಾದಯಾತ್ರೆ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭಾಲ್ಕಿ: ಗಡಿ ಭಾಗದಲ್ಲಿ ಹರಿಯುವ ಮಾಂಜ್ರಾ ನದಿಯಲ್ಲಿ ಪ್ರತಿವರ್ಷ ಪ್ರವಾಹ ಬಂದು ಭಾಲ್ಕಿ ತಾಲ್ಲೂಕಿನ ಸಾಯಗಾಂವ ಮತ್ತು ಕೋಂಗಳಿ ಸೇತುವೆಗಳು ಮುಳುಗುತ್ತಿವೆ. ಈ ಎರಡೂ ಸೇತುವೆಗಳ ಎತ್ತರವನ್ನು ಹೆಚ್ಚಿಸಲು ರೂ. 10ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಬುಧವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಯಿತು.

ಸಾಯಗಾಂವ ಸೇತುವೆಯಿಂದ ಮುಂಜಾನೆ 11ಗಂಟೆಗೆ ಆರಂಭವಾದ ಪಾದಯಾತ್ರೆ ಸುಮಾರು 7ಕಿ.ಮೀ ದೂರದವರೆಗೆ ನಡೆಯಿತು. ಕೇಸರ ಜವಳಗಾದ ಕರ್ನಾಟಕ ಮಹಾರಾಷ್ಟ್ರದ ರಾಜ್ಯ ಹೆದ್ದಾರಿಯಲ್ಲಿ ಮಧ್ಯಾಹ್ನ 2ಗಂಟೆವರೆಗೂ ರಸ್ತೆತಡೆ ನಡೆಸಲಾಯಿತು.

ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ್ ಅಲಿ, ರಹೀಂಖಾನ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಅರಳಿ, ತಾಲ್ಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ಎಪಿಎಂಸಿ ಅಧ್ಯಕ್ಷ ಅಶೋಕ ಪಾಟೀಲ, ಪುರಸಭೆ ಅಧ್ಯಕ್ಷೆ ಜೈಶ್ರೀ ಮಾನಕರಿ, ಉಪಾಧ್ಯಕ್ಷ ಚಂದ್ರಕಾಂತ ಪಾಟೀಲ, ವೀರಣ್ಣ ಕಾರಬಾರಿ, ವೈಜಿನಾಥ ಪಾಟೀಲ, ಕೈಲಾಸನಾಥ ಮಿನಕೆರೆ, ವಿಶ್ವನಾಥ ಮೋರೆ, ಅಮೃತರಾವ ಚಿಮಕೋಡೆ, ಮನೋಹರ ನಿಟ್ಟೂರೆ, ಜಮೀಲ್ ಅಹಮ್ಮದ್, ಶಿವರಾಜ ಹಾಸನಕರ್, ಮಲ್ಲಿಕಾರ್ಜುನ ಪ್ರಭಾ, ಸುರೇಶ ಪಾಟೀಲ, ಬಸವರಾಜ ರಿಕ್ಕೆ, ಪ್ರಕಾಶ ಬಿರಾದಾರ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT