ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ನ್ಯಾಯಾಲಯದಿಂದ ವಿಚಾರಣೆ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಭಾರತ-ಬಾಂಗ್ಲಾ ಗಡಿ ಭಾಗದಲ್ಲಿ ಬಾಂಗ್ಲಾ ಪ್ರಜೆಯೊಬ್ಬರ ಮೇಲೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯೋಧರು ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಸೇನಾ ನ್ಯಾಯಾಲಯ ವಿಚಾರಣೆ ನಡೆಸಲಿದೆ.

 ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಅಬ್ದುಲ್ ಶೇಖ್ ಎಂಬ ಬಾಂಗ್ಲಾದೇಶದ ಪ್ರಜೆಯ ಮೇಲೆ  ಬಿಎಸ್‌ಎಫ್ ಸಿಬ್ಬಂದಿ ಹಲ್ಲೆ ನಡೆಸಿದ ವಿಡಿಯೊ ದೃಶ್ಯಾವಳಿ ಇತ್ತೀಚೆಗೆ ಬಹಿರಂಗಗೊಂಡಿತ್ತು. 

 ಈ ಘಟನೆಯಲ್ಲಿ ಎಂಟು ಸಿಬ್ಬಂದಿ ತಪ್ಪಿತಸ್ಥರು ಎಂಬುದು ಕಳೆದ ತಿಂಗಳು ನಡೆಸಿರುವ ತನಿಖೆಯಿಂದ ಗೊತ್ತಾಗಿದೆ ಎಂದು ಬಿಎಸ್‌ಎಫ್ ಮುಖ್ಯಸ್ಥ ಉತ್ತಾನ್ ಕೆ ಬನ್ಸಾಲ್ ಹೇಳಿದ್ದಾರೆ.  ಸೇನಾ ನ್ಯಾಯಾಲಯ ವಿಚಾರಣೆಯ ಸಂದರ್ಭಲ್ಲಿ ಆರೋಪ ಹೊತ್ತಿರುವ ಸಿಬ್ಬಂದಿ ತಮ್ಮ ವಾದ ಮಂಡಿಸಬಹುದು ಎಂದಿದ್ದಾರೆ.

`ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಕ್ತಾಯಗೊಂಡಿದೆ. ಆರೋಪಿಗಳ ವಿರುದ್ಧ ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಆದೇಶಿಸಲಾಗಿದೆ. ಈ ವಿಚಾರಣೆ ಸಂದರ್ಭದಲ್ಲಿ       ಸಾಕ್ಷ್ಯಗಳನ್ನು ಪರಿಗಣಿಸಲಾಗುವುದು. ಬಳಿಕ ವಿಚಾರಣೆ ನಡೆಸುತ್ತಿರುವ ಅಧಿಕಾರಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಿದ್ದಾರೆ~ ಎಂದು ಬಿಎಸ್‌ಎಫ್ ಮಹಾ ನಿರ್ದೇಶಕರು  ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT