ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಸೇವೆಯ ಸದವಕಾಶ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕಂಬೈನ್ಡ ಡಿಫೆನ್ಸ್ ಸರ್ವಿಸ್ ಪರೀಕ್ಷೆಗಳು ಸೇನೆಯಲ್ಲಿ ಲಘು ಅವಧಿಗೆ ಸೇವೆ ಸಲ್ಲಿಸ ಬಯಸುವವರಿಗೆ ಅವಕಾಶ ಒದಗಿಸುತ್ತವೆ. ಪ್ರತಿ ವರ್ಷ ಎರಡು ಬಾರಿ ನಡೆಯುವ ಸಿಡಿಎಸ್ ಪರೀಕ್ಷೆಗಳ ಎರಡನೇ ಅವಧಿಯ ನೇಮಕಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಭೂ ಸೇನೆ (250 ಹುದ್ದೆ), ನೌಕಾ ಸೇನೆ (40 ಹುದ್ದೆ), ವಾಯು ಸೇನೆ (32 ಹುದ್ದೆ) ಹಾಗೂ ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಗಳಲ್ಲಿ (ಪುರುಷರಿಗೆ 175 ಮತ್ತು ಮಹಿಳೆಯರಿಗೆ 15 ಹುದ್ದೆ) ಈ ಹುದ್ದೆಗಳಿವೆ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು 2 ಜುಲೈ (ಇಂದು) ಕೊನೆಯ ದಿನ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ. ಅದಕ್ಕಾಗಿ www.upsconline.nic.in ವೆಬ್‌ಸೈಟ್‌ಗೆ ಹೋಗಬೇಕು. ಅರ್ಜಿ ತುಂಬುವ ಮುನ್ನ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಸಹಿಯನ್ನು `ಜೆಪಿಇಜಿ~ ಸ್ವರೂಪದಲ್ಲಿ ಸ್ಕ್ಯಾನ್ ಮಾಡಿಸಿಕೊಂಡಿರಬೇಕು ಹಾಗೂ ಅರ್ಜಿಯಲ್ಲಿ ನೀಡುವ ಇಮೇಲ್ ವಿಳಾಸ ಚಾಲ್ತಿಯಲ್ಲಿರಬೇಕು. 200 ರೂಪಾಯಿಗಳ ಪರೀಕ್ಷಾ ಶುಲ್ಕವನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ತುಂಬಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ವಿನಾಯ್ತಿ ಇದೆ.

ಸಾಮಾನ್ಯ ಅರ್ಹತೆ
ಭಾರತೀಯ ಮಿಲಿಟರಿ ಅಕಾಡೆಮಿ (ಜನ್ಮ ದಿನಾಂಕ 2 ಜುಲೈ 1989 ರಿಂದ 1 ಜುಲೈ 1994ರ ವರೆಗೆ), ನೆವಲ್ ಅಕಾಡೆಮಿಯಲ್ಲಿ (ಜನ್ಮದಿನಾಂಕ 2 ಜುಲೈ 1991 ರಿಂದ 1 ಜುಲೈ 1994ರ ವರೆಗೆ) ಹಾಗೂ ಏರ್ ಫೋರ್ಸ್ ಅಕಾಡೆಮಿಯಲ್ಲಿ (ಜನ್ಮದಿನಾಂಕ 2 ಜುಲೈ 1990 ರಿಂದ 1 ಜುಲೈ 1994ರ ವರೆಗೆ) ಅವಿವಾಹಿತ ಪುರುಷ ಅಭ್ಯರ್ಥಿಗಳಷ್ಟೇ ಅರ್ಜಿ ಸಲ್ಲಿಸಬಹುದು. ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (ಜನ್ಮದಿನಾಂಕ 2 ಜುಲೈ 1988 ರಿಂದ 1 ಜುಲೈ 1994ರ ವರೆಗೆ) ವಿವಾಹಿತ ಅಥವಾ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ
ಭಾರತೀಯ ಮಿಲಿಟರಿ ಅಕಾಡೆಮಿಗಾದರೆ ಯಾವುದೇ ಪದವಿ ಇರಬೇಕು. ನೆವಲ್ ಅಕಾಡೆಮಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಬಿಎಸ್ಸಿ (ಭೌತಶಾಸ್ತ್ರ, ಗಣಿತ) ಹಾಗೂ ಎನ್‌ಸಿಸಿಯಲ್ಲಿ ಅ ಸರ್ಟಿಫಿಕೇಟ್ ಹೊಂದಿರಬೇಕು. ಏರ್‌ಫೋರ್ಸ್ ಅಕಾಡೆಮಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಯಾವುದೇ ಪದವಿ (10+2ನಲ್ಲಿ ಭೌತಶಾಸ್ತ್ರ, ಗಣಿತ) ಹೊಂದಿರಬೇಕು.  ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಪದವಿ ಅರ್ಹತೆಯಾಗಿದೆ.

ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯುತ್ತವೆ. ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ ಸೆ. 16ಕ್ಕೆ ನಡೆಯಲಿದ್ದು ಪರೀಕ್ಷೆಯ ಫಲಿತಾಂಶ ಡಿಸೆಂಬರ್‌ನಲ್ಲಿ ಪ್ರಕಟವಾಗಲಿದೆ. ಎರಡನೆಯ ಹಂತದಲ್ಲಿ ಸಂದರ್ಶನ ನಡೆಯಲಿದೆ.

ಮಿಲಿಟರಿ, ನೆವಲ್ ಹಾಗೂ ಏರ್ ಫೋರ್ಸ್ ಅಕಾಡೆಮಿಗಳ ಲಿಖಿತ ಪರೀಕ್ಷೆ 300 ಅಂಕದ್ದು (ತಲಾ 100 ಅಂಕಗಳ ಇಂಗ್ಲಿಷ್, ಸಾಮಾನ್ಯ ಜ್ಞಾನ, ಪ್ರಾಥಮಿಕ ಗಣಿತಶಾಸ್ತ್ರ). ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯ ಲಿಖಿತ ಪರೀಕ್ಷೆಯಲ್ಲಿ ಇಂಗ್ಲೀಷ್ (100 ಅಂಕ), ಸಾಮಾನ್ಯ ಜ್ಞಾನ (100 ಅಂಕ) ಎಂಬ ಎರಡು ವಿಭಾಗಗಳಿವೆ. ಪ್ರತಿ ವಿಭಾಗಕ್ಕೂ 2 ಗಂಟೆಗಳ ಅವಧಿ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ಆಯ್ಕೆಗೊಂಡವರಿಗೆ ತರಬೇತಿ ನೀಡಿ ಲೆಫ್ಟಿನೆಂಟ್/ ಕೆಡೆಟ್/ ಫ್ಲಾಯಿಂಗ್ ಆಫಿಸರ್ ದರ್ಜೆಯ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ತರಬೇತಿ, ಪದೋನ್ನತಿ, ವಿಮೆ, ರಜೆ, ರಜಾ ಪ್ರವಾಸ ರಿಯಾಯ್ತಿ, ನಿವೃತ್ತಿ ಸೌಲಭ್ಯ ಇತ್ಯಾದಿ ವಿವರಗಳಿಗೆ www.joinindianarmy.nic.in  ನೋಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT