ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಕ್ಷೇತ್ರ: ತಗ್ಗಿದ ಎಫ್‌ಡಿಐ

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೇವಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಪಿಟಿಐ) ಪ್ರಮಾಣ 2012-13ನೇ ಸಾಲಿನ ಏಪ್ರಿಲ್-ಜನವರಿ ಅವಧಿಯಲ್ಲಿ ಶೇ 3.5ರಷ್ಟು ಕುಸಿದಿದ್ದು 466 ಕೋಟಿ (ರೂ25,164 ಕೋಟಿ) ಡಾಲರ್‌ಗಳಿಗೆ ಇಳಿಕೆ ಕಂಡಿದೆ.

ಹಣಕಾಸು ಮತ್ತು ಹಣಕಾಸೇತರ ಸೇವಾ ವಲಯ 2011-12ನೇ ಸಾಲಿನ ಏಪ್ರಿಲ್-ಜನವರಿ ಅವಧಿಯಲ್ಲಿ 483 ಕೋಟಿ ಡಾಲರ್ (ರೂ26,082 ಕೋಟಿ)  `ಎಫ್‌ಡಿಐ' ಆಕರ್ಷಿಸಿತ್ತು ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಮಂಡಳಿ (ಡಿಐಪಿಪಿ) ಹೇಳಿದೆ.

ಜಾಗತಿಕ ಆರ್ಥಿಕ ಅಸ್ಥಿರತೆ ಇನ್ನೂ ಚೇತರಿಕೆ ಕಂಡಿಲ್ಲ. ಹೀಗಾಗಿ ಹೂಡಿಕೆದಾರರು ಸೇವಾ ವಲಯದಲ್ಲಿ ಬಂಡವಾಳ ತೊಡಗಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು `ಡಿಐಪಿಪಿ'ನ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಸೇವಾ ವಲಯವೂ ಸೇರಿದಂತೆ ಇತರೆ ಎಲ್ಲ ಕ್ಷೇತ್ರಗಳ ಒಟ್ಟಾರೆ `ಎಫ್‌ಡಿಐ' ಏಪ್ರಿಲ್-ಜನವರಿ ಅವಧಿಯಲ್ಲಿ  (ಶೇ 39ರಷ್ಟು) 191 ಕೋಟಿ ಡಾಲರ್‌ಗಳಷ್ಟು (ರೂ10,314 ಕೋಟಿ) ಕುಸಿತ ಕಂಡಿದೆ.

2010-11ನೇ ಸಾಲಿನಲ್ಲಿ 329 ಕೋಟಿ ಡಾಲರ್‌ಗಳಷ್ಟಿದ್ದ (ರೂ17,766 ಕೋಟಿ) ಸೇವಾ ವಲಯದ ಎಫ್‌ಡಿಐ ಹರಿವು 2011-12ರಲ್ಲಿ 521 ಕೋಟಿ ಡಾಲರ್‌ಗಳಿಗೆ (ರೂ28,134 ಕೋಟಿ) ಏರಿಕೆ ಕಂಡಿತ್ತು. ಒಟ್ಟಾರೆ ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) ಸೇವಾ ಕ್ಷೇತ್ರದ ಕೊಡುಗೆ ಶೇ 60ರಷ್ಟಿದೆ.  ಏಪ್ರಿಲ್   -ಜನವರಿ ಅವಧಿಯಲ್ಲಿ ಆತಿಥ್ಯ ಮತ್ತು ಪ್ರವಾಸೋದ್ಯಮ ವಲಯದಲ್ಲಿ  319 ಕೋಟಿ ಡಾಲರ್  ( ್ಙ17,226 ಕೋಟಿ) ಲೋಹ ವಲಯದಲ್ಲಿ 138 ಕೋಟಿ ಡಾಲರ್ (ರೂ 7,452 ಕೋಟಿ) ಮತ್ತು ಕಾಮಗಾರಿ ಕ್ಷೇತ್ರದಲ್ಲಿ 120 ಕೋಟಿ ಡಾಲರ್ (ರೂ6,480 ಕೋಟಿ) ವಿದೇಶಿ ಬಂಡವಾಳ ಹೂಡಿಕೆ ಆಗಿದೆ.

ಒಟ್ಟಾರೆ `ಎಫ್‌ಡಿಐ'ಯಲ್ಲಿ 817  ಕೋಟಿ ಡಾಲರ್ (ರೂ44,118 ಕೋಟಿ) ಮಾರಿಷಸ್‌ನಿಂದ, 169 ಕೋಟಿ ಡಾಲರ್ (ರೂ9,126 ಕೋಟಿ) ಜಪಾನ್‌ನಿಂದ ಮತ್ತು 182 ಕೋಟಿ ಡಾಲರ್( ರೂ9,828 ಕೋಟಿ) ಸಿಂಗಪುರದಿಂದ ಹರಿದು ಬಂದಿದೆ.`ಎಫ್‌ಡಿಐ' ಉದಾರೀಕರಣದಿಂದ   ಹೂಡಿಕೆ ಇನ್ನಷ್ಟು ಹೆಚ್ಚಲಿದೆ ಎಂದು ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT