ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಕ್ಷೇತ್ರದಲ್ಲಿ ಎಫ್‌ಡಿಐ ಕುಸಿತ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸೇವಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ಶೇ 62ರಷ್ಟು ಕುಸಿತ ಕಂಡಿದ್ದು, 136 ಕೋಟಿ ಡಾಲರ್‌ಗಳಿಗೆ (₨8,432 ಕೋಟಿಗೆ) ಇಳಿಕೆ ಕಂಡಿದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ (ಡಿಐಪಿಪಿ) ಹೇಳಿದೆ.

ಬ್ಯಾಂಕ್‌, ವಿಮೆ, ಹೊರಗುತ್ತಿಗೆ, ಸಂಶೋಧನೆ ಮತ್ತು ಅಭಿವೃದ್ಧಿ, ಕೊರಿ ಯರ್‌, ತಾಂತ್ರಿಕ ಪರಿಶೀಲನೆ ವಲಯ­ಗ ಳನ್ನೂ ಸೇವಾ ಕ್ಷೇತ್ರ ಒಳಗೊಂಡಿದೆ. 2012ನೇ ಸಾಲಿನ ಏಪ್ರಿಲ್‌–ಅಕ್ಟೋ ಬರ್‌ ಅವಧಿಯಲ್ಲಿ 360 ಕೋಟಿ ಡಾಲ ರ್‌ಗಳಷ್ಟು (₨22,320 ಕೋಟಿ) ‘ಎಫ್‌ಡಿಐ’ ದಾಖಲಾಗಿತ್ತು. ಮಾರುಕಟ್ಟೆ ತಜ್ಞರ ಪ್ರಕಾರ, ವಿದೇಶಿ ಹೂಡಿಕೆದಾರರು ಹೊಸ  ಸರ್ಕಾರಕ್ಕಾಗಿ ಕಾಯುತ್ತಿ­ದ್ದಾರೆ. ಹೀಗಾಗಿ ಚುನಾವಣೆ ಬಳಿಕ ‘ಎಫ್‌ಡಿಐ’ ಹರಿವು ಹೆಚ್ಚಬ­ಹುದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ‘ಎಫ್‌ಡಿಐ’ ಆಕರ್ಷಿಸ­ಬೇಕಾದರೆ ಮಹತ್ತರ ಸುಧಾರಣೆಗಳು ಆಗ­ಬೇಕು. ಹೀಗಾಗಿ ವಿದೇಶಿ ಹೂಡಿಕೆದಾ ರರು ಬದಲಾ­ವಣೆ ತರುವ ಹೊಸ ಸರ್ಕಾ­ರದ ನಿರೀಕ್ಷೆಯಲ್ಲಿದ್ದಾರೆ’ ಎಂದು ಹೂಡಿಕೆ ತಜ್ಞ ಕಿರಣ್‌ ಮಲ್ಹೋತ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT