ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಸಂಸ್ಥೆಗಳಿಗೆ ಲಯನ್ಸ್ ಮಾದರಿ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕನಕಪುರ : `ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಸಮಾಜದ ಅಗತ್ಯಗಳನ್ನು ಅರಿತು ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ಅನೇಕ ಸಮಾಜ ಸೇವೆಗಳನ್ನು ಮಾಡುತ್ತಾ ಸಾರ್ವಜನಿಕವಾಗಿ ಸ್ಪಂದಿಸುವ ಮೂಲಕ ಇತರ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿದೆ~ ಎಂದು ಹಿರಿಯ ವಕೀಲ ರಾಮಚಂದ್ರ ಹೇಳಿದರು.

ಪಟ್ಟಣದ ಪೈಪ್‌ಲೈನ್ ರಸ್ತೆಯಲ್ಲಿನ ಲಯನ್ಸ್ ಭವನದಲ್ಲಿ ಲಯನ್ಸ್ ಮತ್ತು ಲಿಯೋ ಸಂಸ್ಥೆ ಏರ್ಪಡಿಸಿದ್ದ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸೇವಾ ಕೊರತೆ ಎದ್ದು ಕಾಣುತ್ತಿದೆ. ಹೋರಾಟ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯ ಹಾಗೂ ಛಲವನ್ನು ಮೈಗೂಡಿಸಿ ಕೊಂಡು ಸಂಸ್ಕಾರವಂತರಾಗಿ ಬೆಳೆಯಬೇಕೆಂದು ಹೇಳಿದರು.

ಕುಂದಾಪುರ ಲಯನ್ಸ್‌ನ ಅಶೋಕ್‌ಕುಮಾರ್ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿ, ಈ ಭೂಮಿಯ ಮೆಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ ಮೇಲೆ ಈ ಸಮಾಜದ ಋಣವಿದ್ದು ಅದನ್ನು ತೀರಿಸುವ ಸಂಕಲ್ಪ ಮಾಡಬೇಕು. ಅದೇ ರೀತಿ ಸಂಘ ಸಂಸ್ಥೆಗಳ ಮೂಲಕ ಜನರ ಒಳಿತಿಗಾಗಿ  ಕೈಲಾದ ಸಹಾಯ ಮಾಡಬೇಕಾಗಿದೆ ಎಂದರು.

ತಾಲ್ಲೂಕು ಲಯನ್ಸ್ ಅಧ್ಯಕ್ಷ ಡಾ.ಎಸ್. ನಿಂಗರಾಜಯ್ಯ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರವಿ, ಪ್ರಿನ್ಸಿಪಾಲ್ ರಾಮಚಂದ್ರೇಗೌಡ, ಮಾತಾಲಾಡ್ಜ್ ಮೋಹನ್, ಜಗದೀಶ್ ನೂತನ ಸದಸ್ಯರ ಸಾಲಿನಲ್ಲಿ ಸೇರ್ಪಡೆಗೊಂಡರು.

 ಹೆಚ್.ಎಂ.ಟಿ. ಸುಬ್ರಹ್ಮಣ್ಯ ಹಾಗೂ ಉದ್ಯಮಿ ಜಯರಾಮು ರವರನ್ನು ಸನ್ಮಾಸಿನಿಸಿ ಗೌರವಿಸಲಾಯಿತು.  ಸಿ.ಜೆ. ಸತೀಶ್‌ಕುಮಾರ್ ಜಯನಗರ ಕ್ಲಬ್ ಹೇಮಂತ್‌ಕುಮಾರ್, ಮೋಹನ್‌ಕುಮಾರ್, ಮರಸಪ್ಪರವಿ, ಎಂ.ಎನ್.ಚಂದ್ರಶೇಖರ್, ಕೆ.ಜಿ. ಸುರೇಶ್, ಪ್ರಶಾಂತ್, ಬಿಳಿಗಿರಿ ರಂಗಸ್ವಾಮಿ, ಮಳಗಾಳು ವೆಂಕಟೇಶ್, ಶ್ರಿಧರ್ ಮತ್ತಿತ್ತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT