ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಸದನದಲ್ಲಿ ವ್ಯಾನಿಟಿಬ್ಯಾಗ್

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಸಂಚಾರಿ ಥಿಯೇಟರ್ ತಂಡದಿಂದ  ವ್ಯಾನಿಟಿ ಬ್ಯಾಗ್ ನಾಟಕ (ವೈದೇಹಿ ಅವರ ಕವನಗಳ ರಂಗರೂಪ) ಶನಿವಾರ (ಮೇ 19) ಪ್ರದರ್ಶನಗೊಳ್ಳಲಿದೆ.

ಎಂ. ಮಂಗಳಾ ನಾಟಕವನ್ನು ನಿರ್ದೇಶಿಸಿದ್ದಾರೆ. ವೈದೇಹಿ ಅವರ ಕಾವ್ಯ ಲೋಕದ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಾ `ನೋಡಬಾರದು ಚೀಲದೊಳಗನು~ ಎಂಬ ವೈದೇಹಿ ಅವರ ಮಾತನ್ನೇ ವಿವರಿಸುತ್ತಾ, ನೋಡಲಾಗದ ಆ ವ್ಯಾನಿಟಿ ಬ್ಯಾಗಿನ ಒಳಗಿರುವ ವಸ್ತು ಪ್ರಪಂಚವನ್ನು ವೈದೇಹಿಯವರ ಕಾವ್ಯಲೋಕ ಹಲವು ಪ್ರಸಂಗಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

ವ್ಯಾನಿಟಿಬ್ಯಾಗ್‌ನ ರೂಪಕದಲ್ಲಿ ಹೆಣ್ಣಿನ ಅಂತರಂಗದ ಒಳನೋಟಗಳಿಗೆ ಕ್ಷಕಿರಣ ಬೀರಿ ಸ್ತ್ರೀಯ ವಿಶ್ವರೂಪವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡಲು ಸಂಚಾರಿ ಥಿಯೇಟರ್ ತಂಡ ಮುಂದಾಗಿದೆ.

ವ್ಯಾನಿಟಿಬ್ಯಾಗ್ ಎಂಬ ಸ್ತ್ರೀ ಲೋಕದ ಕ್ಯಾನ್‌ವಾಸ್‌ನಲ್ಲಿ ಹೆಣ್ಣಿನ ಅಂತರಂಗದ ಪಿಸುಮಾತು, ನಿತ್ಯ ಅನ್ನಕ್ಕಾಗಿ ಬೆರಣಿ ತಟ್ಟುವ ಹುಡುಗಿ, ತನ್ನದೆನ್ನುವ ಆಸ್ತಿಯೇ ಇರದ ಹೆಣ್ಣು ಬರೆವ ಉಯಿಲು, ನಿತ್ಯ ಮೂಡುತ, ನಿತ್ಯ ಮುಳುಗುತ್ತಾ ಕಷ್ಟ ಸುಖಗಳ ಕಡಲಲ್ಲಿ ನಿತ್ಯ ಸುಡುತಿಹ ಸೂರ್ಯಳಾಗಿ ಪ್ರಜ್ವಲಿಸುತ್ತಿರುವ ಹೆಣ್ಣಿನ ಒಳಮನಸ್ಸಿನ ಲೋಕವನ್ನು ಪ್ರತಿನಿಧಿಸುವ ರೂಪಕವಾಗಿ ವ್ಯಾನಿಟಿಬ್ಯಾಗ್ ರಂಗದ ಮೇಲೆ ಮೂಡಿಬರಲಿದೆ.

ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರಂ. ಸಂಜೆ 7. ಮಾಹಿತಿಗೆ: 88843 45569.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT