ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಕಾಯಂ ಮಾಡಿ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸುವುದಾಗಿ ಈ ಹಿಂದೆ  ವಿಧಾನ ಮಂಡಲದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಆಶ್ವಾಸನೆ ಕೊಟ್ಟಿದ್ದರು.

ಆದರೆ ಈಗ ಹೊಸ ಶಿಕ್ಷಕರ ಆಯ್ಕೆ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಸಿದ್ಧವಾಗುತ್ತಿದೆ. ಈ ಪ್ರಕ್ರಿಯೆಗೆ ನಾವು ಬೇಡವೆನ್ನುವುದಿಲ್ಲ. ಇನ್ನೂ ವಸತಿ ಶಾಲೆಗಳಲ್ಲಿ ಖಾಲಿ ಉಳಿದಿರುವ ಶಿಕ್ಷಕ ಮತ್ತು ಸಿಬ್ಬಂದಿಗಳ ಸ್ಥಾನಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಿ.

ಆದರೆ ಐದಾರು ವರ್ಷಗಳ ಕಾಲ ಕಡಿಮೆ ಸಂಬಳ ಪಡೆದು ಪ್ರಾಮಾಣಿಕ ಸೇವೆ ಮಾಡಿ 10ನೇ ತರಗತಿಗೆ ಒಳ್ಳೆ ಫಲಿತಾಂಶ ಕೊಟ್ಟಿರುವ ಇನ್ನೂ ಕಾಯಂ ಆಗದಿರುವ ಶಿಕ್ಷಕರತ್ತ ಸರ್ಕಾರ ಗಮನ ನೀಡಬೇಕಿದೆ.

ಪ್ರಸ್ತುತ ಶಿಕ್ಷಣದ ಗುಣಮಟ್ಟದ ಬಗೆಗೆ ಯಾವ ದೂರುಗಳೂ ಇಲ್ಲದಿದ್ದರೂ, ಸಾಮಾನ್ಯ ಪ್ರವೇಶ ಪರೀಕ್ಷೆಗೆ ವಸತಿ ಶಿಕ್ಷಣ ಸಂಸ್ಥೆಯವರು ಚಾಲನೆ ನೀಡಿ ನಮಗೆಲ್ಲ ಅನ್ಯಾಯ ಮಾಡಿದ್ದಾರೆ.

ಆದ್ದರಿಂದ ಪ್ರವರ್ಗವಾರು ನೇಮಕಾತಿ ನಡೆದಿಲ್ಲದಿದ್ದರೆ ಎಲ್ಲಾ ಶಾಲೆಗಳ ಶಿಕ್ಷಕ ಪಠ್ಯವಾರು ಪ್ರವರ್ಗವಾರು ಹಾಲಿಯಿರುವವರ ಪಟ್ಟಿ ಮಾಡಿ ನೇಮಕಾತಿ ಮಾಡಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಿ ಶಿಕ್ಷಕರ ನೇಮಕಾತಿ ಸರಿಪಡಿಸಿಕೊಳ್ಳಲಿ. ಆಗ ಎಲ್ಲರಿಗೂ ನ್ಯಾಯ ಸಿಗುತ್ತದೆ. ಸರ್ಕಾರ ಈ ಹಿಂದೆ ವಿಧಾನ ಮಂಡಲದಲ್ಲಿ ಕೊಟ್ಟ ಆಶ್ವಾಸನೆಯಂತೆ ನಮ್ಮ ಸೇವೆಯನ್ನು ಕಾಯಂಗೊಳಿಸಬೇಕಾಗಿ ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT