ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಕಾಯಂಗೆ ಆಗ್ರಹ; ಅಂಚೆ ನೌಕರರ ಧರಣಿ

Last Updated 20 ಅಕ್ಟೋಬರ್ 2012, 5:05 IST
ಅಕ್ಷರ ಗಾತ್ರ

ಕಡೂರು: ಸೇವೆಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾಲ್ಲೂಕಿನ ಗ್ರಾಮೀಣ ಅಂಚೆ ನೌಕರರು ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದ ಆದೇಶದ ಮೇರೆಗೆ ಮುಷ್ಕರ ನಡೆಸುತ್ತಿರುವುದಾಗಿ ವಿಭಾಗೀಯ ಕಾರ್ಯದರ್ಶಿ ಜೋಸೆಫ್ ಬ್ರಿಟ್ಟೊ ತಿಳಿಸಿದರು.

ಪಟ್ಟಣದ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ  ಅನಿರ್ದಿಷ್ಟ ಅವಧಿಗೆ ಮುಷ್ಕರ ಆರಂಭಿಸಿದರು.
ಸಖರಾಯಪಟ್ಟಣದ ಮಲ್ಲೇಶಪ್ಪ ಮಾತನಾಡಿ, 1977 ರ ನ್ಯಾಯಾಲಯದ ಆದೇಶದ ಪ್ರಕಾರ ಮತ್ತು ನ್ಯಾಯಮೂರ್ತಿ ತಲ್ವಾರ್ ಸಮಿತಿ ವರದಿ ಅನುಸಾರ ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯ 5 ಗಂಟೆಗಿಂತ ಹೆಚ್ಚು ಕಾಲ ಕೆಲಸ ನಿರ್ವಹಿಸುತ್ತಿ ರುವವರು ಅಂಚೆ ಇಲಾಖೆಯ ಕಾಯಂ ನೌಕರರನ್ನಾಗಿ ನೇಮಿಸಿಕೊಳ್ಳಬೇಕು.

ಇಲಾಖೆಯ ಕಾಯಂ ನೌಕರರಿಗೆ 3500 ರೂ, ಪಿಎಲ್‌ಬಿ ಸೀಲಿಂಗ್ ಬೋನಸ್ ನೀಡ ಲಾಗುತ್ತಿದೆ. ಆದರೆ ಗ್ರಾಮೀಣ ಅಂಚೆ ನೌಕರರಿಗೆ ಇದನ್ನು ನೀಡದೆ ವಂಚಿಸುತ್ತಿರುವುದು ನ್ಯಾಯಯುತವಲ್ಲ ಎಂದು ಹೇಳಿದರು.

ಅನುಕಂಪದ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ಅನುಸರಿಸಲಾಗುತ್ತಿರುವ ಪದ್ಧತಿ ಕೈಬಿಟ್ಟು ಹಿಂದಿನಂತೆ ಎಲ್ಲ ವಾರಸುದಾರರಿಗೂ ಉದ್ಯೋಗ ನೀಡಬೇಕು. ಅಂಚೆ ಪೇದೆ, ಮೇಲ್ ಗಾರ್ಡ್ ಮತ್ತು ಎಂಟಿಎಸ್ ಕೆಲಸಕ್ಕೆ ಇಲಾಖೇತರ ನೌಕರರನ್ನು ನೇಮಕ ಮಾಡಿಕೊಳ್ಳಬೇಕು ಮತ್ತು ಹೊಸ ನೇಮಕದಲ್ಲಿನ ಲೋಪಗಳನ್ನು ಸರಿಪಡಿಬೇಕು ಎಂದು ಆಗ್ರಹಿಸಿದರು. 

  ವೇತನ ಕಡಿತವನ್ನು ನಿಲ್ಲಿಸಿ ತಕ್ಷಣ ಜಾರಿಗೆ ಬರುವಂತೆ ತಡೆಹಿಡಿದಿರುವ ವೇತನವನ್ನು ಮರುಪಾವತಿ ಮಾಡಬೇಕು, ವೇತನವನ್ನು ಪರಿಷ್ಕರಿಸಿ ನೀಡಬೇಕು, ಹಾಗೂ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಪ್ರತಿಭಟಿಸಿದರು.

ರಮೇಶ್, ಶಿವಶಂಕರಯ್ಯ, ಪಟ್ಟಣಗೆರೆ ರವಿ, ಕಡೂರಹಳ್ಳಿ ನಾಗರಾಜು, ಪ್ರತಿಮ, ಚಂದ್ರಮ್ಮ, ವಿರೂಪಾಕ್ಷಪ್ಪ, ಮಲ್ಲೇಶಪ್ಪ, ಗಂಗಾಧರ್, ಯೋಗೇಶ್ ಇದ್ದರು.

ಸರ್ಕಾರದಿಂದಲೇ ಶೋಷಣೆ: ಆರೋಪ
ಶೃಂಗೇರಿ: `ದೇಶದಲ್ಲೇ ಅತಿದೊಡ್ಡ ಸೇವಾ ಕಾರ್ಮಿಕರಾದ ಗ್ರಾಮೀಣ ಅಂಚೆ ನೌಕರರಾಗಿರುವ ನಾವುಗಳು ಸರ್ಕಾರದಿಂದಲೇ ಶೋಷಣೆಗೆ ಒಳಗಾಗುತ್ತಿರುವುದು ವಿಷಾದನೀಯ~ ಎಂದು ಅಂಚೆ ಇಲಾಖೆ ಗ್ರಾಮೀಣ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶೇಷಪ್ಪ ಗೌಡ ಹೇಳಿದರು.

ಪಟ್ಟಣದ ಮುಖ್ಯ ಅಂಚೆ ಕಚೇರಿ ಮುಭಾಂಗದಲ್ಲಿ ಶುಕ್ರ ವಾರ ಶೃಂಗೇರಿ ಕ್ಷೇತ್ರ ಮಟ್ಟದ ಗ್ರಾಮೀಣ ಅಂಚೆ ನೌಕ ರರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. 

 ಐವತ್ತು ಪೈಸೆಯ ಅಂಚೆ ಕಾರ್ಡಿನಿಂದ ಹಿಡಿದು ಲಕ್ಷಾಂತರ ರೂಪಾಯಿಗಳ ಮನಿ ಆರ್ಡರನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯುತ ಕೆಲಸವನ್ನು ಗ್ರಾಮೀಣ ಅಂಚೆ ನೌಕರರು ನಿರ್ವಹಿಸುತ್ತಿದ್ದಾರೆ. ಉಳಿತಾಯ ಖಾತೆ, ವಿಮಾ ಸೌಲಭ್ಯ ಮುಂತಾದವುಗಳನ್ನು ಸಮರ್ಪಕವಾಗಿ ನಿರ್ವಹಿಸಿ ಇಲಾಖೆಗೆ ಬೆನ್ನೆಲುಬಾಗಿ ನಿಂತಿರುವ ಕಾರ್ಮಿಕರನ್ನು ಕಾಯಂಗೊಳಿಸುವ ಮೂಲಕ ಸರ್ಕಾರ ನಡೆಸುತ್ತಿರುವ ಶೋಷಣೆಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಲಯಾಧ್ಯಕ್ಷ ಮಂಜುನಾಥ್, ಗ್ರಾಮೀಣ ಅಂಚೆ ನೌಕರರ ಬೇಡಿಕೆ ಈಡೇರುವ ವರೆಗೂ ಪ್ರತಿಭಟನೆ ಮುಂದುವರಿ ಯಲಿದೆ. ಸಂಘದ ರಾಷ್ಟ್ರೀಯ ನೇತಾರರು ಕೇಂದ್ರ ಸರ್ಕಾರ ದೊಂದಿಗೆ ಮಾತುಕತೆ ನಡೆಸುತ್ತಿದ್ದು, ಇದು ಯಶಸ್ವಿಯಾದಲ್ಲಿ ಪ್ರತಿಭಟನೆ ಮುಕ್ತಾಯಗೊಳ್ಳಲಿದೆ.

ಇಲ್ಲವಾದಲ್ಲಿ ಶನಿವಾರ ನರಸಿಂಹರಾಜಪುರ ಅಂಚೆ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಲಿದೆ ಎಂದರು.
ಪ್ರತಿಭಟನೆ ಬೆಂಬಲಿಸಿ ಪ.ಪಂ.ಅಧ್ಯಕ್ಷ ಟಿ.ಕೆ. ಪರಾಶರ, ಮೀಗಾ ಸಚಿನ್,  ವರ್ತಕರ ಸಂಘದ ಅಧ್ಯಕ್ಷ ಡಿ.ಸಿ. ಶಂಕರಪ್ಪ, ಎ.ಎಸ್. ನಯನ, ಮಾತೊಳ್ಳಿ ಸತೀಶ್, ಕೆ.ಎಂ. ಗೋಪಾಲ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT