ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ಶುಭಾರಂಭ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಸೈನಾ ನೆಹ್ವಾಲ್ ಕ್ವಾಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಭಾರತದ ಆಟಗಾರ್ತಿ 19-21, 21-14, 21-15ರಲ್ಲಿ ಸಿಂಗಪುರದ ಜುವಾನ್ ಜು ಅವರನ್ನು ಮಣಿಸಿದರು.

ಮೊದಲ ಗೇಮ್‌ನಲ್ಲಿ ಉತ್ತಮ ಪ್ರತಿರೋಧ ತೋರಿದರೂ, ಸೈನಾಗೆ ಹಿನ್ನಡೆ ಉಂಟಾಯಿತು. ಆದರೆ ಮುಂದಿನ ಎರಡೂ ಗೇಮ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಎರಡನೇ ಸುತ್ತಿಗೆ ಮುನ್ನಡೆದರು. ಈ ಹೋರಾಟ 56 ನಿಮಿಷ ನಡೆಯಿತು.

ಎರಡನೇ ಸುತ್ತಿನಲ್ಲಿ ಹೈದರಾಬಾದ್‌ನ ಆಟಗಾರ್ತಿ ಚೈನಿಸ್ ತೈಪಿಯಾದ ಶಾವೊ ಚೇ ಚೆಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಸೋಲ್‌ನಲ್ಲಿ ಕಳೆದ ವಾರ ನಡೆದ ಕೊರಿಯಾ ಓಪನ್ ಸೂಪರ್ ಸರಣಿ ಟೂರ್ನಿಯಲ್ಲೂ ಇದೇ ಆಟಗಾರ್ತಿ ಎದುರಾಗಿದ್ದರು. ಈ ಪಂದ್ಯದಲ್ಲಿ ಸೈನಾ ಗೆಲುವು ಸಾಧಿಸಿದ್ದರು. ಈಗ ಚೇಂಗ್ ತಿರುಗೇಟು ನೀಡುವ ಗುರಿ ಹೊಂದಿದ್ದಾರೆ.

ಪುರುಷರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅಜಯ್ ಜಯರಾಮನ್ 21-9, 18-21, 16-21ರಲ್ಲಿ ಇಂಡೋನೇಷ್ಯಾದ ಎಸ್. ಸಿಮೊನ್ ಎದುರು ಸೋಲು ಕಂಡು ತಮ್ಮ ಹೋರಾಟ ಅಂತ್ಯಗೊಳಿಸಿದರು.

ವಿ. ದಿಜು ಹಾಗೂ ಜ್ವಾಲಾ ಗುಟ್ಟಾ ಜೋಡಿ ಮಿಶ್ರ   ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆಯಿತು. ಈ ಜೋಡಿ ಭಾರಿ ಪ್ರತಿರೋಧ ಎದುರಿಸಿ 21-13, 19-21, 21-16ರಲ್ಲಿ ಸಿಂಗಪುರದ ಚಾಯುತ್ ಟ್ರಿಯಾಚಾರ್ಟ್ ಹಾಗೂ ಲಿಯೆ ಯಾವೊ ಜೋಡಿಯನ್ನು ಮಣಿಸಿತು.

ರೂಪೇಶ್-ಸನಾವೇ ಜೋಡಿಗೆ ನಿರಾಸೆ: ಭಾರತದ ರೂಪೇಶ್ ಕುಮಾರ್ ಹಾಗೂ ಸನಾವೇ ಥಾಮಸ್ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT